ಅವತ್ತು ಡಾ.ಪ್ರಭಾಕರ ಜೋಶಿ ಸೇರಿದಂತೆ ಅವರಿಗಾಗಿಯೇ ನಾವಲ್ಲೊಂದು ತಾಳಮದ್ದಳೆಯನ್ನೂ ಮಾಡಿದ್ದೆವು. ಅವರು/ವಿವೇಕ ರೈಯವರು ಅಕಾಡೆಮಿ ಅಧ್ಯಕ್ಷರಾಗಿದ್ದಾಗೆಲ್ಲ ಯಾವುದೇ ಇಸಂ ಗಳಿಲ್ಲದೆ ನಮ್ಮಂಥವರನ್ನು ಬಳಸಿಕೊಂಡ ರೀತಿ ಆ ಹಿರಿಯರ ಗುಣಗ್ರಾಹಿತ್ವಕ್ಕೆ ಸಾಕ್ಷಿ.
ತುಳು ಭಾಷೆಯ ಸಾಂವಿಧಾನಿಕ ಮಾನ್ಯತೆಗಾಗಿ ನಂದಾವರರೊಂದಿಗಿನ ನಮ್ಮ ನಿಯೋಗವೊಂದು ಡೆಲ್ಲಿಯಲ್ಲಿ ಇಡೀ ದಿನದ ಕಾರ್ಯಕ್ರಮ ಮಾಡಿ, ಆಗ ಕೇಂದ್ರ ಸಚಿವರಾಗಿದ್ದ ಜಾರ್ಜ್ ಫೆರ್ನಾಂಡಿಸ್ ಮೂಲಕ ಪ್ರಧಾನಿ ವಾಜಪೇಯಿಯವರಿಗೆ ಮನವಿ ಕೊಟ್ಟ ಒಂದು ಚಿತ್ರವನ್ನಿಲ್ಲಿ ಹಂಚಿಕೊಂಡಿದ್ದೇನೆ.
ಧನಂಜಯ ಕುಮಾರ್, ಮೊಯಿಲಿ, ಅಸ್ಕರ್ ಫೆರ್ನಾಂಡಿಸ್, ಸಂತೋಷ್ ಹೆಗ್ಡೆ, ಪುರುಷೋತ್ತಮ ಬಿಳಿಮಲೆ, ವಿಜಿ ಪಾಲ್, ವಸಂತ ಶೆಟ್ಟಿ ಬೆಳ್ಳಾರೆ, ಬಾಬು ಅಮೀನ್, ಎವಿ ನಾವಡ ದಂಪತಿ ಕೂಡಾ ನಮ್ಮೊಂದಿಗಿದ್ದರು. ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವದಲ್ಲಿ ವಿವೇಕ ರೈ, ಅಮೃತರು,ನಂದಾವರ ಕೊನೆಯವರೆಗೆ ಸಲಹಾ ಮಂಡಳಿಯಲ್ಲಿ ನಮ್ಮ ಸಮಿತಿಯೊಂದಿಗಿದ್ದರು.
ನಾನು ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡೆಮಿ ಸದಸ್ಯನಾಗಿ 2004 ರಲ್ಲಿ 'ಯಕ್ಷ ಪ್ರಮೀಳಾ' ಪ್ರಥಮ ಮಹಿಳಾ ಯಕ್ಷಗಾನ ಸಮ್ಮೇಳನ ಮಂಗಳೂರಿನಲ್ಲಿ ಆಯೋಜಿಸಿದಾಗ ತುಳು ಅಕಾಡೆಮಿ ಅಧ್ಯಕ್ಷರಾಗಿದ್ದ ನಂದಾವರರು ಒಂದು ತಿಂಗಳು ಅಕಾಡೆಮಿ ಚಾವಡಿಯನ್ನು ನಮ್ಮ ಸಿದ್ಧತೆಗಾಗಿ ನೀಡಿದ್ದರು.
ತುಳು ಅಕಾಡೆಮಿ ರಂಗಮಂದಿರದಲ್ಲಿಂದು ತ್ರಿವಿಕ್ರಮರಾಗಿ ಬೆಳೆದಿದ್ದ ವಾಮನರು ದೀರ್ಘ ನಿದ್ರೆಗೆ ಜಾರಿದ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿ ಧನ್ಯನಾದೆ. ಅವರಿಗೆ ಸದ್ಗತಿಯಾಗಲಿ ಜೋಡಿ ಹಕ್ಕಿಗಳಂತಿದ್ದ ದಂಪತಿಯಾದರೂ ವಾಸ್ತವವನ್ನು ಅರ್ಥೈಸಿಕೊಳ್ಳುವ ಛಾತಿಯಿರುವ ಚಂದ್ರಕಲಾ, ಇನ್ನು ಏಕಾಂಗಿಯಾಗಿ ಪತಿಯ ಕನಸುಗಳನ್ನು ಸಾಕಾರಗೊಳಿಸಲು ಸಾಕಷ್ಟು ಕಸುವನ್ನು ಉಳಿಸಿಕೊಂಡಿದ್ದಾರೆ ಎಂಬ ಭರವಸೆಯಿದೆ..
-ಭಾಸ್ಕರ ರೈ ಕುಕ್ಕುವಳ್ಳಿ
.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ