ಬೆಂಗಳೂರು: ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 404ನೇ ಪಟ್ಟಾಭಿಷೇಕ ಮತ್ತು 430 ನೇ ಜನ್ಮದಿನೋತ್ಸವದ ಸಂದರ್ಭ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದ ಪ್ರಯುಕ್ತ ವಿದುಷಿ ಶ್ರೀಮತಿ ರೂಪಶ್ರೀ ಕೆ.ಎಸ್ ಅವರ ನಿರ್ದೇಶನದಲ್ಲಿ ಶ್ರೀ ಹೃದ್ಯಾ ಅಕಾಡೆಮಿ (ರಿ.) ಯ ರಾಜರಾಜೇಶ್ವರಿ ನಗರ, ಕೆಂಗೇರಿ ಶಾಖೆ ಹಾಗೂ ಆನ್ಲೈನ್ ವಿದ್ಯಾರ್ಥಿನಿಯರಿಂದ ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ ಪಟ್ಟಾಭಿಷೇಕದ ದಿನವಾದ ಮಾರ್ಚ್ 1ರಂದು ಸಂಜೆ 7 ರಿಂದ 9 ರ ವರೆಗೆ ಜಯನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಭರತನಾಟ್ಯ ಕಾರ್ಯಕ್ರಮ ಅತ್ಯಂತ ಮನೋಹರವಾಗಿ ನಡೆಯಿತು.
ವಿದುಷಿ ಶ್ರೀಮತಿ ರೂಪಶ್ರೀ ಕೆ ಎಸ್ ಹಾಗೂ ವಿದ್ಯಾರ್ಥಿನಿಯರಾದ ಹೃದ್ಯಾ ಭಟ್ ಕೆ, ಪ್ರಣಮ್ಯ, ಹಂಸ, ಲಿಶಿಕ, ಅವನಿ ಹೆಗಡೆ, ತನ್ವಿಕ, ಸ್ಮರಣಿ, ದುತಿಶ್ರೀ, ಶ್ರೇಯ ಮಹೇಶ್, ಸೇಜಲ್, ಸನ್ಮತಿ ಪವನ್, ಆಕಾಂಕ್ಷ ಪವನ್, ಅಭಿಶ್ರುತ, ನಿದರ್ಶ, ಲಕ್ಷ್ಮಿ, ಪಾವನಿ, ತನ್ವಿ, ನಮಿತಾ, ಅಶ್ವತಿ ಮಹೇಶ್, ಪ್ರತಿಕ್ಷ ಪಿ, ಸಿದ್ಧಿ ಕುಲಕರ್ಣಿ, ಲಕ್ಷಣಶ್ರೀ ಪ್ರಸ್ತುತ ಪಡಿಸಿದ ಭರತನಾಟ್ಯ ಕಾರ್ಯಕ್ರಮವು ನೆರೆದಿದ್ದ ಭಕ್ತರಿಂದ ಅಪಾರ ಮೆಚ್ಚುಗೆ ಗಳಿಸಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ