ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆ - ಸಪ್ತಾಹ ಕಾರ್ಯಕ್ರಮ

Upayuktha
0



ಶಿವಮೊಗ್ಗ: ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ  ‘ಬಹುಮುಖಿ’ ಸಭಾಂಗಣದಲ್ಲಿ ಇಂಗ್ಲೀಷ್ ವಿಭಾಗದ ವತಿಯಿಂದ ‘ವಿಶೇಷ ಉಪನ್ಯಾಸ’ ಮತ್ತು ‘ಅಂತರ್ ಕಾಲೇಜು ರಸಪ್ರಶ್ನೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 


ನಗರದ ವಿವಿಧ ಕಾಲೇಜುಗಳಿಂದ ಸುಮಾರು 60 ವಿದ್ಯಾರ್ಥಿಗಳು ಭಾಗವಹಿಸಿದ್ದು. ವಿಶ್ವ ಮಾಹಿಳಾ ದಿನಾಚರಣೆಯ ಅಂಗವಾಗಿ ಕಾಲೇಜಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ದಿನಾಂಕ: 05.07.2025 ರಿಂದ 12.07.2025 ರವರೆಗೆ ಆಯೋಜಿಸಲಾಗಿದ್ದ ರಸಪ್ರಶ್ನೆ ಕಾರ್ಯಕ್ರಮವು ಯಶಸ್ವಿಯಾಗಿದ್ದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಹಿಳಾ ಸಾಧಕರ ಮೇಲೆ ಸುಮಾರು ಮೂವತ್ತಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಯಿತು. ಲಿಖಿತ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಹಲವು ಮಹಿಳಾ ಸಾಧಕಿಯರನ್ನು ಪರಿಚಯಿಸಲಾಯಿತು. 


ಅಂತಿಮವಾಗಿ ಮೌಖಿಕ ರಸಪ್ರಶ್ನೆಯೊಂದಿಗೆ ವಿಜೇತರನ್ನು ಆರಿಸಲಾಯಿತು. ಪ್ರಥಮ ಬಹುಮಾನವನ್ನು ಕು ಫಾತಿಮಾ, ಸಹ್ಯಾದ್ರಿ ಕಲಾ ಕಾಲೇಜು ಇವರು ಪಡೆದುಕೊಂಡರು. ದ್ವಿತೀಯ ಬಹುಮಾನವನ್ನು ಕು. ಕೀರ್ತನಾ ಎಸ್, ಸಹ್ಯಾದ್ರಿ ಕಲಾ ಕಾಲೇಜು ಇವರು ಪಡೆದುಕೊಂಡರು. ತೃತೀಯ ಬಹುಮಾನವನ್ನು ಕು. ಪ್ರೀತಿ ಎಸ್ ಎನ್, ಸಹ್ಯಾದ್ರಿ ಕಲಾ ಕಾಲೇಜು ಇವರು ಪಡೆದುಕೊಂಡರು.


ಇಂಗ್ಲೀಷ್ ವಿಭಾಗದ ವತಿಯಿಂದ ನೈಜೀರಿಯಾದ ಪ್ರಸಿದ್ಧ ಲೇಖಕರಾದ ಚಿನುವಾ ಅಚೆಬೆರವರ ಪ್ರಸಿದ್ಧ ಕಾದಂಬರಿಯಾದ ‘ಥಿಂಗ್ಸ್ ಫಾಲ್ ಅಪಾರ್ಟ್’ನ ಮೇಲೆ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ನಾಡಿನ ಖ್ಯಾತ ಲೇಖಕ, ವಿಮರ್ಶಕರಾದ ಡಾ|| ರಾಜೇಂದ್ರ ಚೆನ್ನಿ ಅವರು ಉಪನ್ಯಾಸವನನು ನೀಡಿ, ಚಿನುವಾ ಅಚೆಬೆ  1958 ರಲ್ಲಿ ಬರೆದ ಪ್ರಸಿದ್ಧ ಕಾದಂಬರಿ ‘ಥಿಂಗ್ಸ್ ಫಾಲ್ ಅಪಾರ್ಟ್’ ಹೇಗೆ ಬ್ರಿಟೀಷ್ ಆಡಳಿತದಲ್ಲಿದ್ದ ನೈಜೀರಿಯಾದಲ್ಲಿನ ಜನರ ಸಾಂಸ್ಕೃತಿಕ ಮೂಲ ನೆಲೆಗಳನ್ನು ಚಿತ್ರಿಸುತ್ತದೆ. 


ಇಗ್ಬೂ ಕುಲದ ನಾಯಕನಾದ ಓಕಾಂಕು ಹೇಗೆ ಒಬ್ಬ ದುರಂತ ನಾಯಕನಾಗುತ್ತಾನೆ. ಇಗ್ಬೂ ಕುಲದ ಜನರಲ್ಲಿ ಆಳವಾಗಿ ಬೆಸೆದಿದ್ದಂತಹ ಅತ್ಯಂತ ಆತ್ಮೀಯವಾದ ಸಂಬಂಧಗಳು ಸಾಮ್ರಾಜ್ಯಶಾಹಿಯಿಂದ ಹೇಗೆ ಕಳಚಿ ಬಿಳುತ್ತದೆ. ಇಗ್ಬೂ ಕುಲದ ಸಂಸ್ಕೃತಿಯ ಬೇರುಗಳು ಸಾಮ್ರಾಜ್ಯಶಾಹಿಯಿಂದ ಹೇಗೆ ಸಡಿಲಗೊಳ್ಳುತ್ತವೆ. ಅವರ ನಾಯಕನಾದ ಓಕಾಂಕು ಹೇಗೆ ದುರಂತ ಅಂತ್ಯವನ್ನು ಹೊಂದುತ್ತಾನೆ ಎಂಬುದನ್ನು ಸವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. 


ನಗರದ ಹಲವಾರು ಕಾಲೇಜುಗಳಿಂದ ಸುಮಾರು 60 ವಿದ್ಯಾರ್ಥಿಗಳು ಉಪಸ್ಥಿತರಿದ್ದರು. IQAC  ಘಟಕದ ಸಂಯೋಜಕರಾದ ಡಾ|| ಅರ್ಚನಾ ಕೆ ಭಟ್ ಮಾತನಾಡಿ ಇಂಗ್ಲೀಷ್ ಸಾಹಿತ್ಯದಿಂದ ವಿದ್ಯಾರ್ಥಿಗಳು ತಮ್ಮ ಚಿಂತನೆಗಳನ್ನು ಹೇಗೆ ರೂಪಿಸಿಕೊಳ್ಳಬಹುದು. ಇಂಗ್ಲೀಷ್ ಭಾಷೆ ಮತ್ತು ಸಾಹಿತ್ಯದಿಂದ ವಿಶ್ವದ ಎಲ್ಲ ಸಮುದಾಯ ಮತ್ತು ಸಮೂಹವನ್ನು ಅರ್ಥೆಸಿಕೊಳ್ಳಬಹುದು ಎಂದು ತಿಳಿಸಿದರು. 


ವಿಭಾಗದ ಮುಖ್ಯಸ್ಥರಾದ  ರೇಷ್ಮಾ ಅವರು ಮುನ್ನುಡಿ ಭಾಷಣವನ್ನು ಮಾಡಿದರು. ವಿಭಾಗದ ಹಲವಾರು ವಿದ್ಯಾರ್ಥಿ ಸ್ನೇಹಿ ಕಾರ್ಯಕ್ರಮಗಳು ಅವರ ಜೀವನವನ್ನು ರೂಪಿಸಲು ಸಹಕಾರಿಯಾಗುತ್ತದೆ ಎಂಬುದನ್ನು ವಿವರಿಸಿದರು. ಸಹಾಯಕ ಪ್ರಾಧ್ಯಪಕರಾದ ಗಣೇಶ್ ಪ್ರಸಾದ್, ಕುಮಾರಿ ಯೋಶಿತಾ ಸೊನಾಲೆ, ಕುಮಾರಿ ರೋಜಾ ಕಾರ್ಯಕ್ರಮವನ್ನು ಆಯೋಜಿಸಿದ್ದರು.


ಕಾರ್ಯಕ್ರಮದಲ್ಲಿ ಕಾಲೇಜಿನ  MCCS ನಿರ್ದೇಶಕರಾದ ಡಾ ರಾಜೇಂದ್ರ ಚೆನ್ನಿIQAC  ಘಟಕದ ಮುಖ್ಯಸ್ಥರಾದ ಡಾ ಅರ್ಚನಾ ಭಟ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ರೇಷ್ಮಾ ಮತ್ತು ಸಹಾಯಕ ಪ್ರಾಧ್ಯಾಪಕರಾದ ಗಣೇಶ್ ಪ್ರಸಾದ್, ಕುಮಾರಿ ಯೋಶಿತಾ ಸೊನಾಲೆ, ಕುಮಾರಿ ರೋಜಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕು. ಪೃಥ್ವಿ, ಕು. ಆಶರ್ ಜೇಸನ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top