ತುಳುಕೂಟ ನೀಡುವ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿಗೆ ಆಯ್ಕೆ

Upayuktha
0


ಮಂಗಳೂರು: ಕಳೆದ ನಾಲ್ಕೂವರೆ ದಶಕಗಳಿಂದ ತುಳುಕೂಟದ ಮೂಲಕ ನೀಡಲಾಗುತ್ತಿರುವ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಘೋಷಿಸಲಾಗಿದೆ.


ಡಾ.ವೀರೇಂದ್ರ ಹೆಗ್ಗಡೆಯವರು ಈ ಪ್ರಶಸ್ತಿಗಳನ್ನು ಪ್ರಾಯೋಜಿಸುತ್ತಾ ಬರುತ್ತಿದ್ದಾರೆ. ವಿಜೇತರಿಗೆ ಪ್ರಶಸ್ತಿಯನ್ನು ಎಪ್ರಿಲ್ 14 ರಂದು "ಬಿಸು ಪರ್ಬ" ಆಚರಣೆಯ ಸಂದರ್ಭ ಶ್ರೀಮಾತೆ ಮಂಗಳಾದೇವಿ ಅಮ್ಮನವರ ಸಾನಿಧ್ಯದಲ್ಲಿ ಪ್ರದಾನಿಸಲಾಗುವುದು.


ನಗದು ಸಹಿತ ಪ್ರಥಮ: ಶಶಿರಾಜ್, ಕಾವೂರು (ನಾಟಕ: ಕರುಣೆದ ಕಣ್ಣ್); ದ್ವಿತೀಯ: ಅಕ್ಷತಾರಾಜ್, ಪೆರ್ಲ (ಯಜ್ಞ ಪುತ್ತೊಲಿ); ತೃತೀಯ: ಗೀತಾ ನವೀನ್ (ಅಪ್ಪೆ ಮಹಾಮಾಯಿ)


ಅಲ್ಲದೇ, ಈ ಬಾರಿ "ಬಂಗಾರ್ ಪರ್ಬಾಚರಣೆ"ಯ ಪ್ರಯುಕ್ತ ಇನ್ನೆರಡು ನಗದು ರಹಿತ ಪ್ರೋತ್ಸಾಹಕ ಬಹುಮಾನ ನೀಡಲು ತುಳುಕೂಟ ನಿರ್ಧರಿಸಿದೆ.

1. ಪ್ರಕಾಶ್ ಬಂಗೇರ, ಬಗಂಬಿಲ (ಕರಿಮಣದ ಪಿರವು) 2. ವಿಲಾಸ್ ಕುಮಾರ್, ನಿಟ್ಟೆ (ಗಗ್ಗರ). ಎಲ್ಲಾ ಅಪ್ರಕಟಿತ ಹಸ್ತಪ್ರತಿ ನಾಟಕ ಕೃತಿಕಾರರಿಗೆ ಇದೊಂದು ಉತ್ತಮ ವ್ಯವಸ್ಥೆಯಾಗಿದೆ.


ಈ ಹಸ್ತ ಪ್ರತಿಗಳ ನಿರ್ಣಾಯಕರಾಗಿ ಖ್ಯಾತ ಸಾಹಿತಿ; ಆಕಾಶವಾಣಿಯ ನಿವೃತ್ತ ಅಧಿಕಾರಿಗಳಾಗಿರುವ ಮುದ್ದು ಮೂಡುಬೆಳ್ಳೆಯವರ ಸಹಿತ ಇನ್ನಿತರ ಖ್ಯಾತನಾಮರು ಈ ನಾಟಕಗಳ ಬಗೆಯಲ್ಲಿ ತೀರ್ಪು ನೀಡಿರುತ್ತಾರೆ ಎಂದು ತುಳುಕೂಟ (ರಿ) ಕುಡ್ಲ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗ, ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top