ಮಂಗಳೂರು: ಯುವ ಲೇಖಕ ಸಚಿನ್ ಕುಳಮರ್ವ ಅವರು ಪ್ರಕಟಿಸಿದ The Zenith Vol:II ಕೃತಿ ಭಾನುವಾರ ಸಂಜೆ ಎಕ್ಕೂರಿನ ಎ.ಜೆ ಗ್ರಾಂಡ್ ಎಲೈಟ್ ಹೋಟೆಲ್ ನಲ್ಲಿ ಆಯೋಜಿಸಿದ ಸರಳ ಸಮಾರಂಭದಲ್ಲಿ ಬಿಡುಗಡೆಗೊಂಡಿತು.
ಕಾಲ್ಪನಿಕ ಕಥಾ ಹಂದರವುಳ್ಳ ಇಂಗ್ಲಿಷ್ ಕಾದಂಬರಿ ಇದಾಗಿದ್ದು, ಕೃತಿಯ ಮೊದಲ ಭಾಗ ಇತ್ತೀಚೆಗೆ ಬಿಡುಗಡೆಗೊಂಡು ಸಾಕಷ್ಟು ಜನಪ್ರಿಯತೆ ಗಳಿಸಿದೆ. ಅಮೆಜಾನ್ ನಲ್ಲಿ ಈ ಕೃತಿ ಲಭ್ಯವಿದ್ದು, ಮೊದಲ ಭಾಗಕ್ಕೆ ದೊರೆತ ಓದುಗರ ಪ್ರತಿಕ್ರಿಯೆ ಆಧರಿಸಿ, ಇದೀಗ ಎರಡನೇ ಭಾಗವನ್ನು ಪ್ರಕಟಿಸಲಾಗಿದೆ.
ಪುಸ್ತಕವು ಸಂಪೂರ್ಣವಾಗಿ ಕಾಲ್ಪನಿಕವಾಗಿದ್ದು, ಇದರಲ್ಲಿ ಬರಹಗಾರನು ಪಾತ್ರಗಳನ್ನು ಕಲ್ಪಿಸಿಕೊಂಡು ತನ್ನ ಕಲ್ಪನೆಯ ಆಧಾರದ ಮೇಲೆ ಬರೆದಿದ್ದಾರೆ. ಈ ಪುಸ್ತಕವನ್ನು ಯುವ ಓದುಗರ ಮೇಲೆ ಕೇಂದ್ರೀಕರಿಸಿ ಬರೆಯಲಾಗಿದೆ.
ಓದುಗರ ಪ್ರಕಾರ, ಇದು ಎಲ್ಲಾ ಭಾವನೆಗಳು, ಆಕ್ಷನ್, ಥ್ರಿಲ್ಲರ್, ಸಸ್ಪೆನ್ಸ್, ಪ್ರೀತಿ, ಪ್ರಣಯ, ಕುಟುಂಬ, ನಾಟಕ ಮತ್ತು ರಕ್ತಸಿಕ್ತ ಕಥಾವಸ್ತುವಿನ ಮಿಶ್ರಣವಾಗಿದೆ.
ಸರಳವಾಗಿ, ಕೌಟುಂಬಿಕ ಕಾರ್ಯಕ್ರಮವಾಗಿ ಪುಸ್ತಕ ಬಿಡುಗಡೆ ಮಾಡಲಾಗಿದ್ದು, ಲೇಖಕ ಸಚಿನ್, ಪತ್ನಿ ಸನ್ನಿಧಿ, ಮಗಳು ಸಿಯಾ, ಲೇಖಕರ ತಂದೆ ಸುಬ್ರಹ್ಮಣ್ಯ ಭಟ್, ತಾಯಿ ಜ್ಯೋತಿ ಕುಮಾರಿ ಮತ್ತು ಸಹೋದರಿಯರಾದ ಶ್ರೀನಿಧಿ, ರಾಧಿಕ, ಪಾವನ, ಅಶ್ವಿಜ, ಗ್ರೀಷ್ಮಾ ಪಾಲ್ಗೊಂಡಿದ್ದರು.
ಈ ಪುಸ್ತಕ ಕೊಂಡುಕೊಳ್ಳಲು ಲಿಂಕ್ https://amzn.in/d/97WlEES
ಈ ಕೃತಿಯ ಮೊದಲ ಭಾಗವನ್ನು ಕೊಂಡುಕೊಳ್ಳಲು ಲಿಂಕ್- https://amzn.in/d/9JAn4ln
ಲೇಖಕರ ಮೊದಲನೇ ಪುಸ್ತಕ ಚುಟುಕು ಹೊಳಹುಗಳನ್ನೊಳಗೊಂಡ bro_code_scribble ಎರಡು ವರ್ಷ ಮೊದಲು ಬಿಡುಗಡೆಯಾಗಿತ್ತು.
ಸಚಿನ್ ಅವರು ಮಂಗಳೂರಿನ ರೋಶನಿ ನಿಲಯ ಕಾಲೇಜಿನಿಂದ 2014 ರಲ್ಲಿ MSW (PM & IR) ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು ಮತ್ತು ಅದೇ ಕಾಲೇಜಿನಿಂದ 2024 ರಲ್ಲಿ ತಮ್ಮ PGDC (ಕೌನ್ಸೆಲಿಂಗ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ) ಅನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಉದ್ಯೋಗಿಯಾಗಿದ್ದಾರೆ. ಓದು, ಬರವಣಿಗೆಯನ್ನು ಹವ್ಯಾಸವಾಗಿ ಮಾಡುತ್ತಿರುವ ಇವರು ಇದೀಗ ಮೂರನೇ ಕೃತಿಯನ್ನು ಹೊರತಂದಿದ್ದಾರೆ. The Zenith- Vol III ಕೂಡ ಶೀಘ್ರದಲ್ಲೇ ಪ್ರಕಟಿಸುವ ಆಶಯ ಹೊಂದಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ