ಕಲಬುರಗಿ: ಉದ್ಯಮ ರಂಗದ ಬೆಳವಣಿಗೆಗೆ ಯುಕ್ತಿ ಮತ್ತು ಶ್ರಮ ಅತ್ಯಂತ ಅಗತ್ಯವಾಗಿದೆ. ಒಂದು ಭಾಗದ ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಹೋಟೆಲ್ ಉದ್ಯಮಿಗಳ ಕೊಡುಗೆ ಅಪಾರವಾಗಿದ್ದು ಕಲಬುರಗಿಯ ಉದ್ಯಮಿಗಳು ಗಣನೀಯ ಕೊಡುಗೆ ನೀಡುತ್ತಿದ್ದಾರೆ ಎಂದು ಕಲಬುರಗಿ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್ ಡಿ ಹೇಳಿದರು.
ಕಲಬುರ್ಗಿ ನಗರದ ನವೀಕೃತ ಹೋಟೆಲ್ ಅನಂತವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿದ ಅವರು ಶ್ರಮ ಸಂಸ್ಕೃತಿಗೆ ಹೆಸರಾದ ಕಲಬುರಗಿ ನೆಲದಲ್ಲಿ ಕರಾವಳಿಯ ವ್ಯಾಪಾರ ಉದ್ಯಮದ ವಿಶೇಷ ಯುಕ್ತಿಯನ್ನು ಕರಗತ ಮಾಡಿಕೊಂಡವರ ಅನುಭವದಿಂದ ಆರಂಭಗೊಂಡ ಹೋಟೆಲ್ ಉದ್ಯಮವು ಶ್ರಮ ಮತ್ತು ಯುಕ್ತಿ ಸಮ್ಮಿಲನದಿಂದ ಪ್ರವಾಸೋದ್ಯಮಕ್ಕೆ ಕೂಡ ಉತ್ತಮ ಕೊಡುಗೆ ನೀಡುತ್ತಿದೆ.
ಇದರಿಂದ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿದ್ದು ಹೋಟೆಲ್ ಉದ್ಯಮ ರಂಗ ಬೆಳೆಯಲು ಧಾರಾಳ ಅವಕಾಶಗಳಿವೆ. ಬೆಂಗಳೂರು ನಗರದ ಹೋಟೆಲ್ ಗಳಿಗೆ ಸರಿಸಮಾನವಾಗಿ ಕಲಬುರಗಿಯಲ್ಲಿ ಹೋಟೆಲ್ ಗಳು ತಲೆ ಎತ್ತುತ್ತಿರುವುದು ಅಭಿವೃದ್ಧಿಯ ಸಂಕೇತವಾಗಿದೆ .ಹೋಟೆಲ್ ಅನಂತದ ಮೂಲಕ ಗ್ರಾಹಕರಿಗೆ ಸೇವೆಯನ್ನು ಅನಂತವಾಗಿಸಲಿ ಎಂದು ಶುಭ ಹಾರೈಸಿದರು.
ಅಕ್ಷಯ ಸಭಾಂಗಣವನ್ನು ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಲಿಂಗರಾಜಪ್ಪ ಅಪ್ಪ ಉದ್ಘಾಟನೆ ಮಾಡಿ ಉದ್ಯಮ ರಂಗಕ್ಕೆ ವೆಂಕಟೇಶ್ ಕಡೇಚೂರ್ ನೇತೃತ್ವದ ಉದ್ಯಮಿಗಳ ತಂಡದ ಕೊಡುಗೆ ಅನನ್ಯವಾಗಿದ್ದು ಗ್ರಾಹಕರ ಆತಿಥ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಡುಪಿ ಉಪಹಾರ್ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಹೈದರಾಬಾದಿನ ಚೇತನ್ ಬೋಳಾರ್ ಮಾತನಾಡಿ ಯುಗಾದಿಯಲ್ಲಿ ಶುಭಾರಂಭಗೊಂಡ ಸಂಸ್ಥೆ ಇನ್ನಷ್ಟು ಶ್ರೇಯಸ್ಸು ಹೊಂದಿ ಈ ಭಾಗದ ಹೋಟೆಲ್ ಉದ್ಯಮದಲ್ಲಿ ಕೀರ್ತಿಗಳಿಸಲಿ ಎಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಅಡ್ಡೂರು ಶ್ರೀನಿವಾಸಲು, ಕಲಬುರಗಿಯ ಪೊಲೀಸ್ ತರಬೇತಿ ಅಕಾಡೆಮಿ ಪ್ರಾಂಶುಪಾಲರಾದ ಡೆಕ್ಕಾ ಕಿಶೋರ್ ಬಾಬು ಶುಭ ಹಾರೈಸಿದರು.
ಹಿರಿಯ ಉದ್ಯಮಿ ಚಂದ್ರಕಾಂತ್ ವಿ. ಗುತ್ತೇದಾರ್ ಅಧ್ಯಕ್ಷತೆ ವಹಿಸಿದ್ದರು. ವಿನ್ಯಾಸ ತಂತ್ರಜ್ಞಾನದ ಮೊಹಮ್ಮದ್ ಶಂಶು ಮತ್ತು ಪಾಲುದಾರ ರಾಜೇಶ್ ದತ್ತು ಗುತ್ತೇದಾರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಡಾ.ಸದಾನಂದ ಪೆರ್ಲ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಪಾಲುದಾರರಾದ ವಿಜಯಲಕ್ಷ್ಮಿ ದತ್ತು ಗುತ್ತೇದಾರ್, ವೆಂಕಟೇಶ ಕಡೇ ಚೂರ್ ,ರಾಜಾ ರಾಮಪ್ಪ ನಾಯಕ್, ಶ್ರೀನಿವಾಸ ದೇಶಪಾಂಡೆ ಹಾಗು ಪ್ರವೀಣ್ ನಾಯಕ್, ಡಾ. ಎಸ್ .ಬಿ ಕಾಮರೆಡ್ಡಿ, ಡಾ. ಅರುಣ್ ಹರಿದಾಸ, ಡಾ. ಪ್ರತಿಮಾ ಕಾಮರೆಡ್ಡಿ, ಡಾ. ವೀರಭದ್ರಪ್ಪ, ಸತೀಶ್ ವಿ ಗುತ್ತೇದಾರ್ ಬಸವರಾಜ ಇಂಗಿನ್ , ಹರ್ಷಾನಂದ ಗುತ್ತೇದಾರ್, ರಾಜು ಬಸಯ್ಯ ಗುತ್ತೇದಾರ್, ಚಂದ್ರಶೇಖರ ಶೆಟ್ಟಿ, ಶರಣು ಸಪ್ತಗಿರಿ, ರಾಜಶೇಖರ ಶೆಳ್ಳಗಿ , ಪ್ರಭುಲಿಂಗ ಮಹಾಗಾಂವಕರ್, ಶ್ರೀಕಾಂತ್ ಗುತ್ತೇದಾರ್, ಶರಣಪ್ಪ ಕುಮಸಿ,, ಡಾ. ಚಿ .ಸಿ ನಿಂಗಣ್ಣ, ಬಿ ಎಚ್ ನಿರಗುಡಿ,ಅನೀಶ್ ಕಡೇಚೂರ್, ಜೀವನ್ ಜತ್ತನ್, ಬಾಬುರಾವ್ ಯಡ್ರಾಮಿ ಭವಾನಿ ಸಿಂಗ್ ಠಾಕೂರ್ ಶಿವಲಿಂಗಪ್ಪ ದೊಡ್ಡಮನಿ ಶ್ರೀಕಾಂತ್ ಷಾಖಾಪುರ ಮತ್ತಿತರರು ಉಪಸ್ಥಿತರಿದ್ದರು.
ಪಾಲುದಾರ ಪ್ರವೀಣ್ ಜತ್ತನ್ ಧನ್ಯವಾದ ಸಮರ್ಪಿಸಿದರು. ಕರುಣೇಶ್, ಸಿದ್ದರಾಮ ಹಂಚಿನಾಳ, ಜಯಲಕ್ಷ್ಮಿ ಜತ್ತನ್, ಮಾಲಾ ಧನ್ನೂರ್, ಅಪರ್ಣಾ ಜತ್ತನ್ ತಂಡದಿಂದ ಸಂಗೀತ ರಸಮಂಜರಿ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ