ಮುಜುಂಗಾವು ವಿದ್ಯಾಪೀಠದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

Upayuktha
0


ಕುಂಬಳೆ: ಮುಜುಂಗಾವಿನ ಶ್ರೀ ಭಾರತೀ ವಿದ್ಯಾಪೀಠದ ಈ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಸ್ಪಂದನ (ಬೀಳ್ಕೊಡುಗೆ) ಕಾರ್ಯಕ್ರಮವು 01-03-2025ನೇ ಶನಿವಾರದಂದು ವಿದ್ಯಾರ್ಥಿಗಳ ವಿವಿಧ ಚಟುವಟಿಕೆಗಳೊಂದಿಗೆ ನೆರವೇರಿತು.


ವಿದ್ಯಾಲಯದ ಆಡಳಿತ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಕಿದೂರು ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಜೀವನ ಮೌಲ್ಯಗಳ ಬಗ್ಗೆ ನಾವು ನೀಡಬೇಕಾದ ಮಹತ್ವವನ್ನು ವಿದ್ಯಾರ್ಥಿ‌ ಜೀವನದಲ್ಲಿ ಅಳವಡಿಸಬೇಕೆಂದು ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಭಟ್, ಚೆಕ್ಕಣಿಕೆ ಇವರು, ವಿದ್ಯಾರ್ಥಿಗಳ ನಡೆನುಡಿಗಳ ಬಗ್ಗೆ ಸಲಹೆಗಳನ್ನಿತ್ತರು.


ಶಾಲಾ ಮುಖ್ಯೋಪಾಧ್ಯಾಯ ಶ್ಯಾಂಭಟ್ ದರ್ಭೆಮಾರ್ಗ, ವಿದ್ಯಾಲಯಕ್ಕೆ ವಿದ್ಯಾರ್ಥಿಗಳು ಸ್ಪಂದಿಸಬೇಕು. ನಿಮ್ಮನ್ನು ಕಳುಹಿಸಿ ಕೊಡುವುದಲ್ಲ, ಎಂಬ ವಿವರಣೆಯೊಂದಿಗೆ ಸ್ಪಂದನದ ಮೂಲೋದ್ದೇಶವನ್ನು ತಿಳಿಸಿದರು. ಅಧ್ಯಾಪಿಕೆ ಶ್ರೀಮತಿ ಚಿತ್ರಾ ಸರಸ್ವತಿ ಮಕ್ಕಳ ಸ್ಥಾನವನ್ನು ಮೇಲಕ್ಕೇರಿಸುವ ಅರ್ಥ ವಿವರಣೆಯೊಂದಿಗೆ ಸ್ಪಂದನದ ಮೂಲೋದ್ದೇಶ,ಮಕ್ಕಳು ಮುಂದೆಯೂ ಶಾಲೆಯ ಬಗ್ಗೆ ವಹಿಸಬೇಕಾದ ಕಾಳಜಿ ತಿಳಿಸಿದರು. 


ಅಧ್ಯಾಪಕರೆಲ್ಲರೂ ವಿದ್ಯಾರ್ಥಿಗಳಿಗೆ ಶುಭಾಶಯವನ್ನು ಕೋರಿದರು. ವಿದ್ಯಾಲಯದ ವತಿಯಿಂದ ವಿದ್ಯಾರ್ಥಿಗಳಿಗೆ ಜ್ಞಾನದ ಪ್ರತೀಕವಾದ ದೀಪಗಳನ್ನು ಸ್ಮರಣಿಕೆಗಳಾಗಿ ನೀಡಲಾಯಿತು. 9ನೆ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಸಂಯೋಜಿಸಿ, ನಿರೂಪಿಸಿದರು.

 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top