ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಎನ್ ಸಿಸಿ ವಿದ್ಯಾರ್ಥಿ ಜೆ.ಯು.ಒ ಶಾಂತಿಪ್ರಕಾಶ್ ಅವರು ಅರುಣಾಚಲಪ್ರದೇಶದ ದಿರಂಗ್ ನ ನಿಮಾಸ್( ನೇಷನ್ ಇನ್ಸ್ಟಿಟ್ಯೂಟ್ ಆಫ್ ಮೌಂಟನಿಯರಿಂಗ್ & ಅಡ್ವೆಂಚರ್ ಸ್ಫೋರ್ಟ್ಸ್) ನಲ್ಲಿ ನಡೆದ ರಾಷ್ಟ್ರ ಮಟ್ಟದ ಎನ್ ಸಿ ಸಿ ವೈಟ್ ವಾಟರ್ ರಾಫ್ಟಿಂಗ್ ನಲ್ಲಿ ಭಾಗವಹಿಸಿರುತ್ತಾರೆ.
ಇವರಿಗೆ ಭಾಲುಕ್‌ಪುಂಗ್ ನಲ್ಲಿರುವ ಕಮೆಂಗ್ ನದಿಯಲ್ಲಿ ಅಡ್ವೆಂಚರ್ಸ್ ತರಬೇತಿಗಳು ನಡೆದಿದೆ. ಇವರು ಮೂರು ಹಂತದ ಆಯ್ಕೆಯಲ್ಲಿ ತೇರ್ಗಡೆ ಹೊಂದಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಪ್ರತಿನಿಧಿಸಿದ ಆರು ಜನ ಕೆಡೆಟ್ ಗಳಲ್ಲಿ 19 ಕರ್ನಾಟಕ ಬೆಟಾಲಿಯನ್ ಮಡಿಕೇರಿಯಿಂದ ಭಾಗವಹಿಸಿದವರಲ್ಲಿ ಇವರು ಒಬ್ಬರು.
ಇವರಿಗೆ ಕಾಲೇಜಿನ ಎನ್ ಸಿಸಿ ಅಧಿಕಾರಿ ಲೆ. ಭಾಮಿ ಅತುಲ್ ಶೆಣೈ ತರಬೇತಿ ನೀಡಿರುತ್ತಾರೆ. ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಮತ್ತು ಎನ್‌ಸಿಸಿ ಘಟಕ, ಆಡಳಿತ ಮಂಡಳಿ, ಐ ಕ್ಯೂ ಎ ಸಿ ಘಟಕ, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ