ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಹಿರಿಯ ವಿದ್ಯಾರ್ಥಿಗೆ ಕಾಲೇಜಿನಿಂದ ಸನ್ಮಾನ
ಪುತ್ತೂರು: ಜಗತ್ತಿನಲ್ಲಿ ಅತ್ಯದ್ಭುತ ಸಾಧನೆ ಮಾಡಿದವರೆಲ್ಲರೂ ಮಗುವಾಗಿಯೇ ಜನಿಸಿರುತ್ತಾರೆ. ಬೆಳೆಯುತ್ತಾ ಹೋದಂತೆ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿ ಸಮಾಜದ, ಪ್ರಕೃತಿಯ ಭಾಗವಾಗಿ ಬಿಡುತ್ತಾರೆ. ವಿಜ್ಞಾನ ಅತ್ಯಂತ ಆಸಕ್ತಿದಾಯಕ ಕ್ಷೇತ್ರವಾಗಿದ್ದು, ಪ್ರಕೃತಿಯನ್ನು ಅರ್ಥೈಸಿಕೊಂಡಲ್ಲಿ ವಿಜ್ಞಾನವನ್ನು ಕಲಿಯುವುದು ಸುಲಭ ಸಾಧ್ಯವೆನಿಸುತ್ತದೆ.
ಜೀವನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದಲ್ಲಿ, ಬುದ್ಧಿಶಕ್ತಿ ಹಾಗೂ ಭಾವನೆಗಳು ಸರಿಪ್ರಮಾಣದಲ್ಲಿ ಕಾರ್ಯವೆಸಗಬೇಕು. ಯಾವುದೇ ವಿಷಯಗಳ ಕುರಿತು ಅಧ್ಯಯನ ಮಾಡಬೇಕಾದರೆ ವೀಕ್ಷಣೆ ಹಾಗೂ ವಿಶ್ಲೇಷಣೆ ಅತೀ ಮುಖ್ಯ ಘಟಕಗಳಾಗುತ್ತವೆ ಎಂದು ಪ್ರಸ್ತುತ ನವದೆಹಲಿಯ DRDO ದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಮಹಾದೇವ ಭಟ್ ಕಾನತ್ತಿಲ ನುಡಿದರು.
ಇವರು ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ತಮ್ಮ ಅನುಭವವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಇವರನ್ನು ಕಾಲೇಜಿನ ಉಪಪ್ರಾಂಶುಪಾಲರಾದ ದೇವಿಚರಣ್ ರೈ, ಉಪನ್ಯಾಸಕ ಉಪನ್ಯಾಸಕೇತರ ವೃಂದದವರು ಸನ್ಮಾನಿಸಿ, ಅಭಿನಂದಿಸಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಬಿ. ಹರೀಶ ಶಾಸ್ತ್ರಿ ಸ್ವಾಗತಿಸಿ, ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ