ಶಾಸಕರ ವಿರುದ್ಧಸುಳ್ಳು ಪ್ರಕರಣ ದಾಖಲು: ಡಾ.ಭರತ್ ಶೆಟ್ಟಿ ವೈ

Upayuktha
0


ಕಾವೂರು: ಶಾಸಕ ವೇದವ್ಯಾಸ ಕಾಮತ್ ಅವರ ಜನಪರ ಕೆಲಸಗಳನ್ನು ಸಹಿಸಿಕೊಳ್ಳಲಾಗದೆ ಪಾಲಿಕೆ ಚುನಾವಣೆ ಹತ್ತಿರ ಬಂದಾಗ ಅವರ ಹೆಸರಿಗೆ ದಕ್ಕೆ ತರುವ ಷಡ್ಯಂತ್ರವನ್ನು ಕಾಂಗ್ರೆಸ್ ಮಾಡುತ್ತಿದ್ದು ನಕಲಿ ಹಲ್ಲೆ ಪ್ರಕರಣ ಸೃಷ್ಟಿಸಿ ಸುಳ್ಳು ಕೇಸು ದಾಖಲಿಸಿದೆ ಎಂದು ಡಾ. ಭರತ್ ಶೆಟ್ಟಿ ವೈ ಹೇಳಿದ್ದಾರೆ.


ಶಕ್ತಿನಗರದ ಘಟನೆಗೆ ಸಂಬಂಧಿಸಿದಂತೆ ಶಾಸಕರು ಬಂದಾಗ ಅವರ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದೇ ಕಾಂಗ್ರೆಸ್ ಕಾರ್ಯಕರ್ತರು. ಪರಿಶಿಷ್ಟ ಜಾತಿ ಕಾರ್ಯಕರ್ತ ದೂರು ನೀಡಿದಾಗ, ಕಾಂಗ್ರೆಸ್ ವಿಚಲಿತಗೊಂಡು ತಾನೂ ಒಂದು ನಕಲಿ ಪ್ರಕರಣ ಸೃಷ್ಟಿಸಿ ಕೇಸು ಹಾಕಿದೆ.


ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಶಾಸಕರು ಸಹಿತ ಬಿಜೆಪಿ ಪ್ರಮುಖರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ. ಇಂತಹ ಗೊಡ್ಡು ಬೆದರಿಕೆ, ವರ್ಚಸ್ಸು ಕುಂದಿಸುವ ಕೆಲಸ ಮಾಡುವ ಕಾಂಗ್ರೆಸ್‌ಗೆ ಬಿಜೆಪಿ ತಕ್ಕ ಉತ್ತರ ನೀಡುತ್ತದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top