ಫೀಡ್ಬ್ಯಾಕ್ ಅನ್ನುವುದು ನಮ್ಮ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ನಮ್ಮ ವೃತ್ತಿ ಜೀವನದ ಮುಖ್ಯವಾದ ಅಂಗವೆಂದರೆ ನಾವು ಫೀಡ್ ಬ್ಯಾಕ್ವನ್ನೂ ಸರಿಯಾಗಿ ನಿರ್ವಹಿಸುವುದು.
ಕಾರ್ಪೋರೇಟ್ ಜೀವನದಲ್ಲಿ performance section ನಲ್ಲಿ ಮುಖ್ಯವಾದ ಪಾತ್ರ ನಮ್ಮ ಕಾರ್ಯದ ಬಗ್ಗೆ ಇತರರು ಕೊಟ್ಟ ಸಲಹೆ, ಆಕ್ಷೇಪಣೆಗಳೇ ನಮ್ಮ ಫೀಡ್ಬ್ಯಾಕ್ ಆಗಿ ಕಾರ್ಯ ನಿರ್ವಹಿಸುತ್ತದೆ.
ಇದು ಕೇವಲ ವೃತ್ತಿ ಜೀವನದಲ್ಲಿ ಅಷ್ಟೇ ಅಲ್ಲ, ಸಮಾಜದ ಬೇರೆ ಬೇರೆ ಕಡೆ ಫೀಡ್ ಬ್ಯಾಕ್ ಬೇರೆ ಬೇರೆ ರೀತಿಯ ರೂಪಗಳಲ್ಲಿ ಇರುತ್ತವೆ.
ಸರ್ಕಾರದ ಕಾರ್ಯದ ಬಗ್ಗೆ ವಿರೋಧ ಪಕ್ಷದ ಬಗ್ಗೆ ಅಧಿವೇಶನದಲ್ಲಿ ಫೀಡ್ಬ್ಯಾಕ್ ಕೊಡುತ್ತಾರೆ. ಯಾವುದಾದರೊಂದು ಸಿನಿಮಾ ಬಿಡುಗಡೆಯಾದಾಗ ರಿವ್ಯೂ ಹೆಸರಿನಲ್ಲಿ ಫೀಡ್ ಬ್ಯಾಕ್ ಕೊಡುತ್ತಾರೆ. ಧಾರಾವಾಹಿಗಳಿಗೆ ಟಿಆರ್ಪಿ ಹೆಸರಿನಲ್ಲಿ ಫೀಡ್ಬ್ಯಾಕ್ ಕೊಡುತ್ತಾರೆ.
ಅದಕ್ಕೆ ಇಂಗ್ಲಿಷಿನಲ್ಲಿ ಹೇಳುವುದು, "If you are not facing feedback, you can,"t have the growth", ಇದು ಫೀಡ್ಬ್ಯಾಕ್ಗಿರುವ ಮಹತ್ತ್ವವನ್ನು ತೋರಿಸುತ್ತದೆ.
ಫೀಡ್ಬ್ಯಾಕ್ ಅನ್ನುವುದು ನಮ್ಮ ಜೀವನವೆಂಬ ವಾಹನಕ್ಕೆ ಇರುವ humps ಇದ್ದ ಹಾಗೆ. ಇದು ನಮ್ಮ ಜೀವನದಲ್ಲಿ ಆಗಬಹುದಾದ ಎಷ್ಟೋ ಅನಾಹುತಗಳನ್ನು ತಪ್ಪಿಸುತ್ತದೆ. ಇದು ಹೊಗಳಿಕೆ, ಅಥವಾ ಆಕ್ಷೇಪಣೆಯ ರೂಪದಲ್ಲಿ ಇರುತ್ತದೆ. ಎಷ್ಟೋ ಸಾಧಕರು ತಮ್ಮ ಫೀಡ್ ಬ್ಯಾಕ್ ಸಂಗ್ರಹಿಸಿ ಕೊಂಡು ಅದರ ಮೇಲೆ ಕೆಲಸ ಮಾಡಿ ಯಶಸ್ವಿಯಾಗಿ ತೋರಿಸುತ್ತಾರೆ. ಇದು ಹೇಗೆಂದರೆ ನಮ್ಮ ಕಡೆಗೆ ಒಗೆದ ಕಲ್ಲುಗಳಿಂದ ಮನೆ ಕಟ್ಟಿಕೊಂಡು ತೋರಿಸಿದ ಹಾಗೆ...
ಹೇಗೆ ನಮ್ಮ ಬೆನ್ನು ನಮಗೆ ಕಾಣ್ಣಿಸುವುದಿಲ್ಲವೋ, ಹಾಗೆ ಎಷ್ಟೋ ಸಾರಿ ನಮ್ಮ mistakes ನಮಗೆ ಗೊತ್ತಾಗುವುದಿಲ್ಲ. ಇದನ್ನೇ ಗ್ರಾಮೀಣ ಭಾಷೆಯಲ್ಲಿ ಉಗಿದು ಉಪ್ಪಿನಕಾಯಿ ಹಾಕುವುದು ಎನ್ನುತ್ತಾರೆ. ಈ ಫೀಡ್ ಬ್ಯಾಕ್ ಗಳು ಒಂದು ರೀತಿಯ Mistakes Detector ಇದ್ದ ಹಾಗೆ.
ಇದನ್ನು ನಮ್ಮ ಜೀವನದಲ್ಲಿ ಸಾಧಿಸಿ ತೋರಿಸೋಣ. ಏನಂತೀರಾ?
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ