ಅವಕಾಶಕ್ಕಾಗಿ ಕಾಯಬೇಡಿ, ಸಿಕ್ಕ ಅವಕಾಶ ನಿಮ್ಮದಾಗಿಸಿಕೊಳ್ಳಿ: ಅವಲೋಕ್ ಲ್ಯಾಂಗರ್

Upayuktha
0



ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ರೀಡರ್ಸ್ ಕ್ಲಬ್ ವತಿಯಿಂದ "ಸಂಘರ್ಷ (ಕಾನ್‌ಫ್ಲಿಕ್ಟ್) ಪತ್ರಕರ್ತನಾಗಿದ್ದಾಗ ಅಹಿತಕರ ಘಟನೆಗಳಿಂದ ಕಲಿತ ಪಾಠಗಳು" ವಿಷಯದ ಕುರಿತು ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮ ಆಳ್ವಾಸ್ ಎಂಬಿಎ ಸೆಮಿನಾರ್‌ನಲ್ಲಿ  ನಡೆಯಿತು.


ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಸಂಘರ್ಷ ವರದಿಗಾರ, ಲೇಖಕ ಮತ್ತು ಸಿನಿಮಾ ನಿರ್ಮಾಪಕ ಅವಲೋಕ್ ಲ್ಯಾಂಗರ್  ಪತ್ರಿಕೋದ್ಯಮ ವೃತ್ತಿಯಲ್ಲಿ ಊಹೆ ಸಲ್ಲದು.  ರವಾನಿಸುವ ಪ್ರತಿ ಸುದ್ದಿಯನ್ನು ಸೂಕ್ಶ್ಮತೆಯಿಂದ ಅವಲೋಕಿಸಿ. ಜಾಲತಾಣದಲ್ಲಿ ಬರುವ  ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ. ಹೊಸ ಆವಿಷ್ಕಾರ, ಪ್ರಯೋಗಗಳ ಕಡೆಗೆ ಹೆಚ್ಚು ಗಮನ ನೀಡುವುದರೊಂದಿಗೆ ಸತ್ಯವನ್ನು ಶೋಧಿಸುವ ಮಾರ್ಗದಲ್ಲಿ ಪ್ರಶ್ನಿಸುವ ಮನೋಭಾವವನ್ನು ವಿದ್ಯಾರ್ಥಿ ದಿನಗಳಲ್ಲೇ ಬೆಳೆಸಿಕೊಳ್ಳಿ. ಲಭಿಸಿದ ಎಲ್ಲಾ ಅವಕಾಶಗಳನ್ನು ಸದ್ವಿನಿಯೋಗ ಪಡಿಸಿಕೊಳ್ಳಿ  ಎಂದು ಸಲಹೆ ನೀಡಿದರು.  


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ , ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಜ್ಞಾನವನ್ನು ಹೆಚ್ಚಿಸಲು  ರೀಡರ್ಸ್ ಕ್ಲಬ್ ಕೈಗೊಳ್ಳುತ್ತಿರುವ ಕಾರ್ಯಗಳು ಶ್ಲಾಘನೀಯ.  ಇಂದಿನ ಯುವಜನತೆಯಲ್ಲಿ ಆಲೋಚನಾ ಶಕ್ತಿಯ ಕೊರತೆ ಇದೆ. ಎಲ್ಲ ಮಾಹಿತಿಗಳನ್ನು  ಯೋಚಿಸದೆ ಸ್ವೀಕರಿಸುವ ಮನೋಭಾವ ಹೊಂದಿರುವುದು ಬೇಸರದ ಸಂಗತಿ. ಇಂದಿನ ಯುವ ಸಮುದಾಯ, ತನ್ನ ಸುತ್ತಮುತ್ತಲಿನ ಎಲ್ಲ ಸುದ್ದಿ ಸಮಾಚಾರಗಳ ಕುರಿತು ಹೆಚ್ಚು ಜಾಗೃತರಾಗಿ ತಮ್ಮ ನಿರ್ದಿಷ್ಟ ನಿಲುವನ್ನು ಹೊಂದುವುದು ಉತ್ತಮ ಎಂದು ಸಲಹೆ ನೀಡಿದರು.


ಸಂಘರ್ಷ ಪತ್ರಿಕೋದ್ಯಮದಲ್ಲಿನ ಸವಾಲುಗಳು ಮತ್ತು ಅಹಿತಕರ ಘಟನೆಗಳನ್ನು ಎದುರಿಸಿ, ಸತ್ಯವನ್ನು ಜನರೆದುರಿಗೆ ತೆರೆದಿಡಲು ಪಟ್ಟ ಶ್ರಮವನ್ನು ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಹಂಚಿಕೊಂಡರು.  ಕಾರ್ಯಕ್ರಮದಲ್ಲಿ ರೀಡರ್ಸ್ ಕ್ಲಬ್ ಸಂಯೋಜಕ ಶಶಿಕುಮಾರ್ ಮತ್ತು ರೀಡರ್ಸ್ ಕ್ಲಬ್ ಸದಸ್ಯರು, ವಿವಿಧ ವಿಭಾಗದ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ  ಜೀವಿಟಾ ಪರ್ಲ್ ಕ್ರಾಸ್ತಾ ನಿರೂಪಿಸಿ, ಅಮಂಡಾ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top