ಆಳ್ವಾಸ್‌ನ ಮಹಿಳಾ ತಂಡ ಸತತ 24 ವರ್ಷಗಳಿಂದ ಹಾಗೂ ಪುರುಷರ ತಂಡ ಸತತ 6 ವರ್ಷಗಳಿಂದ ಸಮಗ್ರ ತಂಡ ಪ್ರಶಸ್ತಿ
ಮೂಡುಬಿದಿರೆ: ಕುಂದಾಪುರದ ಭಂಡಾರಕರ‍್ಸ್ ಕಾಲೇಜಿನ ಆಶ್ರಯದಲ್ಲಿ ಜರುಗಿದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ವೇಯ್ಟ್ ಲಿಫ್ಟಿಂಗ್ ಸ್ಪರ್ಧಾಕೂಟದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು ಮಹಿಳಾ ಮತ್ತು ಪುರುಷರ ಎರಡು ವಿಭಾಗದಲ್ಲಿ ತಂಡ ಪ್ರಶಸ್ತಿಯನ್ನು ಪಡೆದುಕೊಂಡರು.
ಮಹಿಳಾ ತಂಡವು ಒಟ್ಟು 6 ಚಿನ್ನ, 2 ಬೆಳ್ಳಿ ಪದಕ ಪಡೆದು ಒಟ್ಟು 58 ಅಂಕ ಪಡೆದು ಈ ಸಾಧನೆ ಮೆರೆದಿದೆ. ಪುರುಷರ ವಿಭಾಗವು 4 ಚಿನ್ನ, 4 ಬೆಳ್ಳಿ, 1 ಕಂಚಿನ ಪದಕ ಗಳಿಸಿ ಒಟ್ಟು 55 ಅಂಕಗಳೊಂದಿಗೆ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆಯಿತು.
55ಕೆಜಿ ದೇಹ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದ ಆಳ್ವಾಸ್ ಕಾಲೇಜಿನ ಪ್ರಶಾಂತ್ ‘’ಬೆಸ್ಟ್ ಲಿಫ್ಟರ್’ ವೈಯಕ್ತಿಕ ಪ್ರಶಸ್ತಿಯನ್ನು ಪಡೆದರು. ಪುರುಷರ ವಿಭಾಗದಲ್ಲಿ ಪ್ರಶಾಂತ್, ಸಂತೋಷ್, ಪ್ರತ್ಯೂಶ್, ಜೋಸುವ ರಾಜ್‌ಕುಮಾರ್ ಚಿನ್ನದ ಪದಕ ಪಡೆದರೆ, ನಾಗರಾಜ್, ನಾಗೇಂದ್ರ ಅಣ್ಣಪ್ಪ, ದರ್ಶನ್, ಶಶಾಂಕ್ ಬೆಳ್ಳಿ ಪದಕ ಪಡೆದರು.
ಮಹಿಳಾ ವಿಭಾಗದಲ್ಲಿ ಶ್ರಾವ್ಯ, ಸೀಮಾ, ಅನುಷಾ, ತನುಷಾ, ವಿತಶ್ರೀ, ದಿವ್ಯಾ ಚಿನ್ನದ ಗಳಿಸಿದರೆ, ಮಲ್ಲಮ್ಮ, ನಾಗಶ್ರೀ ಬೆಳ್ಳಿ ಪದಕ ಮಡೆದುಕೊಂಡರು. ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ