ಆಳ್ವಾಸ್ ನಲ್ಲಿ 22ನೇ ವರ್ಷದ ಬೃಹತ್ ಇಫ್ತಾರ್ ಕೂಟ

Upayuktha
0

12,000ಕ್ಕೂ ಅಧಿಕ ಮಂದಿ ಭಾಗಿ, ಶಿಕ್ಷಣದ ಜೊತೆಯಲ್ಲಿ ಸೌಹರ್ದತೆಯ ಪಾಠ



ಮೂಡುಬಿದಿರೆ: ಇಲ್ಲಿನ ವಿದ್ಯಾಗಿರಿಯ ಕೃಷಿಸಿರಿ ಆವರಣದಲ್ಲಿ ರಮಝಾನ್‌ನ ಬೃಹತ್ ಇಫ್ತಾರ್ ಕೂಟವು  ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠನದ ವತಿಯಿಂದ ನಡೆಸಲಾದ 22ನೇ ವರ್ಷದ ಇಫ್ತಾರ್ ಕೂಟದಲ್ಲಿ ವಿದ್ಯಾರ್ಥಿಗಳಲ್ಲದೆ ಸ್ಥಳೀಯರ ಸಹಿತ ಸುಮಾರು 12,000ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಇಫ್ತಾರ್ ಬಳಿಕ  ಸಾಮೂಹಿಕ ನಮಾಝ್‌ಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.


ರಮ್ಜಾನ್ ಸಂದೇಶ ನೀಡಿದ ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯ ಕಾರ್ಯದರ್ಶಿ ಹಾಗೂ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞ,  ಡಾ ಮೋಹನ ಆಳ್ವರ ನೇತೃತ್ವದಲ್ಲಿ ಆಳ್ವಾಸ್ ಸಂಸ್ಥೆ ನಡೆಸುತ್ತಿರುವ  ಇಫ್ತರ್ ಕೂಟ ಸಮಾಜಕ್ಕೆ ಮಾದರಿ. ಕೆಡುಕನ್ನು ಕೆಡುಕಿನಿಂದ ನಿವಾರಿಸಲು ಅಸಾಧ್ಯ. ಅದನ್ನು ಒಳಿತು, ಪ್ರೀತಿಯ ಸಂದೇಶದ ಮೂಲಕ ನಿವಾರಿಸಬೇಕು. ಈ ನಿಟ್ಟಿನಲ್ಲಿ ಇದು ಸಮಾಜಕ್ಕೆ ಶಕ್ತಿಯುತ ಸಂದೇಶ ನೀಡುವ ಕಾರ್ಯಕ್ರಮ ಎಂದರು.  


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಬೀದರ್‌ನ ಶಾಯಿನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್‌ನ ಅಧ್ಯಕ್ಷ ಅಬ್ದುಲ್ ಖಾದಿರ್ ಶಾಯಿನ್ "ಮುಸಲ್ಮಾನರ ಸಂಪ್ರದಾಯದಂತೆ ಇಫ್ತಾರ್ ಕೂಟ ಆಯೋಜಿಸಲಾಗಿದೆ. ದೇಶದ ಜನರು ಸೌಹಾರ್ದದಿಂದ ಬದುಕಬೇಕು. ಎಲ್ಲಾ ಭಾಷೆ, ಜಾತಿ, ಧರ್ಮದ ಜನರನ್ನು ಪರಸ್ಪರ ಗೌರವಿಸಬೇಕು. ಈ ನೆಲೆಯಲ್ಲಿ ಆಳ್ವಾಸ್ ಸಂಸ್ಥೆಯ ಈ ಕಾರ್ಯ ಶ್ಲಾಘನೀಯ ಎಂದರು.


ಪ್ರಪಂಚದ ಎಲ್ಲ  ಮತ ಧರ್ಮಗಳೂ ಶಾಂತಿ, ಸಹಾನುಭೂತಿ, ಸಹಬಾಳ್ವೆ, ಸೌಹರ್ದತೆಯ  ಮಹತ್ವವನ್ನು ಜಗತ್ತಿಗೆ ಸಾರಿವೆ. ಹಿಂದೂ ಧರ್ಮದಲ್ಲಿನ "ವಸುದೈವ ಕುಟುಂಬಕಂ" ಎಂಬ ಮೌಲ್ಯ ಇಡೀ ವಿಶ್ವವನ್ನು ಒಂದು ಕುಟುಂಬವೆಂದು ಪರಿಗಣಿಸುವಂತೆ ಮಾಡಿದೆ.  ಅಂತೆಯೇ ಇಸ್ಲಾಂ ಧರ್ಮ ಸಹನೆ ಮತ್ತು ಸಹೋದರತ್ವವನ್ನು ಪ್ರಭಾವಶಾಲಿಯಾಗಿ ಬೋಧಿಸುತ್ತದೆ. 


ಕ್ರೈಸ್ತ ಧರ್ಮ ಪ್ರೀತಿಯ ಸಿದ್ಧಾಂತವನ್ನು ಹೇಳುತ್ತದೆ. ಬೌದ್ಧ ಧರ್ಮ ಅಹಿಂಸಾ ಮತ್ತು ಶಾಂತಿಯ ಮಾರ್ಗವನ್ನು ತೋರಿಸುತ್ತದೆ. ಜೈನ ಧರ್ಮವೂ ಸಹ ಶಾಂತಿಯ ಜೀವನವನ್ನು ಉತ್ತೇಜಿಸುತ್ತದೆ. ಮನಸ್ಸನ್ನು ಕಟ್ಟುವ, ಎಲ್ಲಾ ಮಾನವ ಸಮುದಾಯವನ್ನು ಒಟ್ಟು ಸೇರಿಸುವ ಕೆಲಸ ನಮ್ಮೆಲ್ಲರದ್ದಾಗಬೇಕು. 


ಸೌಹರ್ದತೆ ಬದುಕು ನಮ್ಮದಾಗಬೇಕು. ಇಂತಹ ಔತಣಕೂಟ ಆಯೋಜನೆಯಿಂದ ನಮ್ಮಲ್ಲಿ ಸಾರ್ಥಕ್ಯ ಮನೋಭಾವ ಮೂಡುತ್ತಿದೆ. ಇದೊಂದು ಪ್ರೀತಿ ಹಂಚುವ ಕಾರ್ಯಕ್ರಮ. ಆಳ್ವಾಸ್ ‘ಸರ್ವೋ ಜನೋ ಸುಖಿನೋ ಭವಂತು’ ತತ್ವದಡಿ ಸಂಸ್ಥೆಯಲ್ಲಿ ದೀಪಾವಳಿ, ಕ್ರಿಸ್ಮಸ್, ಇಫ್ತಾರ್, ಮಹಾವೀರ ಜಯಂತಿ, ಓಣಂ, ಮಣಿಪುರದ ನಿಂಗೋಲ್ ಚಕೋಬಾ, ಶಜಿಬಾ ಶರೋಬಾ, ಶ್ರೀಲಂಕಾ ದಿನಾಚರಣೆಯ ಜೊತೆಯಲ್ಲಿ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ನಾಡುನುಡಿಗಾಗಿ-ನುಡಿಸಿರಿ,ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ- ವಿರಾಸತನಂತಹ ಕಾರ್ಯಕ್ರಮಗಳ ಮೂಲಕ  ನಮ್ಮ ವಿದ್ಯಾರ್ಥಿಗಳಿಗೆ ಹಾಗೂ ಸಮಾಜಕ್ಕೆ ನೂರು ಸಂದೇಶವನ್ನು ಈ ಮೂಲಕ ನೀಡುತ್ತಿದೆ- ಡಾ ಎಂ ಮೋಹನ ಆಳ್ವ.  


ಮಹಿಳೆಯರಿಗೆ ಹಾಗೂ ಪುರುಷರಿಗೆ ನಮಾಝ್ ಮಾಡಲು ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿತ್ತು. ಉಡುಪಿ ಅಪರ ಜಿಲ್ಲಾಧಿಕಾರಿ ಅಭಿದ್ ಗದ್ಯಲ್, ಟ್ರಸ್ಟಿ ವಿವೇಕ್ ಆಳ್ವ, ಡಾ ವಿನಯ್ ಆಳ್ವ, ಉದ್ಯಮಿ ಭಾರತ್ ಮುಸ್ತಫ, ವಿಜಯಪುರದ ರೋಯಲ್ ಶಾಲೆಯ ನಿರ್ದೇಶಕ ಮೊಹಮ್ಮದ್ ಇಂಡಿ,  ಆಳ್ವಾಸ್ ಫಿಝೇರಿಯಾ ಹಾಗೂ ಬಿಸಿಸಿ ಮಾಲಕ ಎಂ ಎಸ್ ಜೈನುದ್ದೀನ್ ಹಾಗೂ ಇನ್ನಿತರರು ಇದ್ದರು.   ಫಾರ್ಚುನ  ಬಿಲ್ರ‍್ಸ್ ಮುಖ್ಯಸ್ಥ ಅಬೂಲಾಲ ಪುತ್ತಿಗೆ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top