ಮೈಂಡ್ ಸ್ಪಾರ್ಕ್ ಭಾಗ-2: ಅಡಿಕೆ ರುಚಿಗೆ ಮಾತ್ರವಲ್ಲ! ಆರೋಗ್ಯಕ್ಕೂ ಒಳ್ಳೆಯದು

Upayuktha
0

---------------------------------------------------------------------------------------------------------------------------

2010ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಹರಿ ಎಂಬುವರು ಮಾಡಿದ ಅಧ್ಯಯನ ಕೂಡಾ ಅಡಿಕೆಯನ್ನು ಸವಿದರೆ ಆರೋಗ್ಯಕ್ಕೆ ಅನುಕೂಲವೇ ಆಗುತ್ತದೆಂದು ಹೇಳಿತ್ತು. ಅವರು ಸಂಶೋಧನೆಯಿಂದ ಕಂಡುಕೊಂಡ ಅನುಭವದಂತೆ ಅಡಿಕೆ ಸೇವನೆಯಿಂದ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ. ಎಲ್ಲಿಯೂ ಅಡಿಕೆ ಜಗಿತದಿಂದ ಕ್ಯಾನ್ಸರ್ ಬಂದಿರುವ, ಇಲ್ಲವೇ ಕ್ಯಾನ್ಸರ್ ಬರುವ ಮುಂಚಿನ ಲಕ್ಷಣಗಳಿರುವ ಯಾವುದೇ ಪ್ರಕರಣ ಈ ಜಿಲ್ಲೆಯಲ್ಲಿ ಕಂಡು ಬಂದಿರುವುದಿಲ್ಲ ಎಂಬುದು ದಾಖಲಾಗಿದೆ.

---------------------------------------------------------------------------------------------------------------------------




ಇಷ್ಟೆಲ್ಲಾ ಸಕಾರಾತ್ಮಕ ಮಾಹಿತಿಗಳ ಭಂಡಾರವಿದ್ದರೂ, ಕೆಲವು ಸಂಶೋಧಕರು ಅಡಿಕೆಯಿಂದಲೇ ರೋಗಕಾಟವಿದೆ ಎಂದು ಹೇಳುತ್ತಾ ಬಂದಿರುವುದು ಆತಂಕಕಾರಿ ಸಮಾಚಾರ, ಕ್ಯಾನ್ಸರ್ ನಂತಹ ರೋಗಮಾರಿ ಇವರಿಂದಲೇ ಬರುವುದೆಂಬ ದೋಷಾರೋಪಣೆ ಮಾಡಲಾಗುತ್ತಿರುವುದು ದುರ್ದೈವ ಎಂದು ಅಡಿಕೆ ಸಂಸ್ಕೃತಿ, ಹಿನ್ನೆಲೆ ಗೊತ್ತಿರುವವರು ನೊಂದು ನುಡಿಯುತ್ತಾರೆ. ಪಾನ್ ಮಸಾಲಾ, ಗುಟ್ಕಾ, ಇತ್ಯಾದಿ ಅದೇನೇನೋ ವಸ್ತುಗಳನ್ನು ಹಾಕಿ ಆದರೊಂದಿಗಿಷ್ಟು ಅಡಿಕೆಯನ್ನೂ ಬೆರೆಸಿಕೊಂಡು, ಅಡಿಕೆಯಿಂದಲೇ ಕ್ಯಾನ್ಸರ್ ಬರುತ್ತದೆಂದು ಬೆದರಿಸುವುದರಿಂದಾಗಿ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು-ಅಡಿಕೆ ಹಿವಾಟನ್ನು ನಂಬಿ ಬದುಕುವವರು ಹಾಗೂ ಆರೋಗ್ಯ ಪೂರ್ಣ ಬದುಕಿಗಾಗಿ ಅಡಿಕೆಯನ್ನೂ ಸೇವಿಸುವವರು ಆತಂಕಕ್ಕೊಳಗಾಗುತ್ತಲಿದ್ದಾರೆ.


"ಆಡಿಕೆ ಬೆಳೆಗಾರಿಕೆಯನ್ನು ನಂಬಿರುವವರು ಸದಾ ಮುಂದೇನಾಗುತ್ತದಪ್ಪಾ ಎಂದು ತತ್ತರಿಸುವಂತ್ತಾಗಿದೆ ಎಂದು ನಮ್ಮ ಸಂಘಟನೆಗಳು ಆತಂಕದಲ್ಲೇ ಬದುಕುವಂತಾಗಿದೆ ಎನ್ನುತ್ತಾರೆ ಅಡಿಕೆ ಕೃಷಿ ಉದ್ದಿಮೆಯನ್ನು ನಂಬ ಬಾಳುತ್ತಿರುವ ಬೆಳೆಗಾರರು, ಮತ್ತು ಅವರ ನೆರವಿಗೆ ನಿಂತು ವ್ಯಾಪಾರ ವಹಿವಾಟು  ನಡೆಸುತ್ತಲಿರುವ ಸಹಕಾರದ ಸಂಘ ಸಂಸ್ಥೆಗಳು.  ಈ ಸತ್ಯ ಮೀರಿದ ವಿಕೃತ ಮಾಹಿತಿಯಿಂದಾಗಿ ಆರಿತವರು ನೊಂದು ಕೊಂಡಿದ್ದಾರೆ. 


ಇದರಲ್ಲಿನ ವಸ್ತು ವಿಶೇಷ ಹಾಗೂ ಮಾಹಿತಿ ನಂಬಲರ್ಹತೆಯನ್ನು ಪರಿಶೀಲಿಸಿ. ಸಂಶೋಧಿಸಿ ಅಧ್ಯಯನ ಮಾಡಿರುವ ಅಧಿಕೃತ ಸಂಘಟನೆಗಳ ಮಾಹಿತಿಯಂತೂ ಕ್ಯಾನ್ಸರಿಗೂ ಅಡಿಕೆ ಸವಿಯುವುದಕ್ಕೂ ಯಾವುದೇ ಸಂಬಂಧ ಇಲ್ಲವೆಂದು ಸಂಶೋಧಿತ ಆಧಾರದ ಸಮೇತ ಹೇಳುತ್ತಲಿವೆ. ಅಂತಹದೊಂದು

ಅಧ್ಯಯನ 2018ರಲ್ಲಿ ನಡೆಯಿತು. ಅಧ್ಯಯನದ ಉದ್ದೇಶವಿದ್ದುದು ಅಡಿಕೆ ಸವಿಯುವುದು ಮಾನವಾರೋಗ್ಯಕ್ಕೆ ಅದೇನು ಕಂಟಕವೊಡ್ಡಿದೆ ಎಂಬುದರ ಸಮಗ್ರ ಪರಿಶೀಲನೆ ನಡೆಸುವುದು. ಕೇರಳದ ಕಾಸರಗೋಡು ಮತ್ತು ದಕ್ಷಿಣ ಕನ್ನಡದ ಜಿಲ್ಲೆಗಳಲ್ಲಿ ಅಧ್ಯಯನ ನಡೆಯಿತು ಎಂದು ಸಂಂಧಪಟ್ಟವರು ಪ್ರಬಂಧಗಳಲ್ಲಿ, ಪ್ರಕಟಣೆಗಳಲ್ಲಿ ದಾಖಲಿಸಿದ್ದಾರೆ.

ಅಂತಹ ಅಧ್ಯಯನದ ಸೂಕ್ಷ್ಮ ಹೀಗಿದೆ, "ದಿ ಸ್ಟಡಿ ಕ್ಲಿಯರ್ಲಿ ಶೋನ್ ದ್ಯಾಟ್ ಚ್ಯೂಯಿಂಗ್ ಅರೆಕನಟ್ ಆರ್ ಬೀಟಲ್ ಕ್ವಿಡ್ ವಿದೌಟ್ ಟೊಬ್ಯಾಕೋ ಆರ್ ಬೆನಿಫೀಶಿಯಲ್ ಅಂಡ್ ನಾಟ್ ಹಾರ್ಮ್‌ಫುಲ್ ಏಸ್ ಫಾರ್ ಏಸ್ ದೆಯರ್ ಹೆಲ್ತ್‌ ಎಫೆಕ್ಟ್ ಆನ್ ಹ್ಯೂಮನ್ ಬೀಯಿಂಗ್ಸ್ ಆರ್ ಕನ್ಸರ್ನ್‌ಡ್".  ಅಡಿಕೆಯಿಂದ ಆರ್ಬುದ ಉಂಟಾಗುವುದಿಲ್ಲ ಎಂಬ ಮಾಹಿತಿಯನ್ನು ಇನ್ನೂ ಹಲವು ವರದಿಗಳು ಪುಷ್ಟೀಕರಿಸುತ್ತವೆ.


2010 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಹರಿ ಎಂಬುವರು ಮಾಡಿದ ಅಧ್ಯಯನ ಕೂಡಾ ಅಡಿಕೆಯನ್ನು ಸವಿದರೆ ಆರೋಗ್ಯಕ್ಕೆ ಅನುಕೂಲವೇ ಆಗುತ್ತದೆಂದು ಹೇಳಿತ್ತು.

ಅವರು ಸಂಶೋಧನೆಯಿಂದ ಕಂಡುಕೊಂಡ ಅನುಭವದಂತೆ ಆಡಿಕೆ ಸೇವನೆಯಿಂದ ಆರೋಗ್ಯಕ್ಕೊಳ್ಳೆಯದಾಗುತ್ತದೆ. ಎಲ್ಲಿಯೂ ಅಡಿಕೆ ಜಗಿತದಿಂದಾಗಿ ಕ್ಯಾನ್ಸರ್ ಬಂದಿರುವ, ಇಲ್ಲವೇ ಕ್ಯಾನ್ಸರ್ ಬರುವ ಮುಂಚಿನ ಲಕ್ಷಣಗಳಿರುವ ಯಾವುದೇ ಪ್ರಕರಣ ಈ ಜಿಲ್ಲೆಯಲ್ಲಿ ಕಂಡು ಬಂದಿಲ್ಲವೆಂದು ಹೇಳಿರುವುದು ದಾಖಲಾಗಿದೆ.

---------

ಎಲೆಯೊಂದಿಗೆ ಅಡಿಕೆಯನ್ನು ಜಗಿಯುವುದರಿಂದ ಅಥವಾ ಮೆಲ್ಲುವುದರಿಂದ ಮನಷ್ಯರಿಗೆ ಏನೂ ಆನಾರೋಗ್ಯವುಂಟಾಗುವುದಿಲ್ಲ. ಬದಲಿಗೆ ಎಲೆಅಡಿಕೆ ಜೊತೆಗೆ ಹೊಗೆಸೊಪ್ಪಿನಂತಹ ಇತರೆ ವಸ್ತುಗಳನ್ನು ಸೇರಿಸಿ ಸೇವನೆ ಮಾಡಿದರೆ ಆರೋಗ್ಯಕ್ಕೆ ಹಾನಿಕಾರವಾಗುವ ಸಾಧ್ಯತೆಗಳಿರುತ್ತದೆ ಎಂದು ಅಧ್ಯಯನಗಳು ಸ್ಪಷ್ಟವಾಗಿ ಹೇಳುತ್ತವೆ. 


-------

ಬೆಂಗಳೂರಿನ ಸಂಶೋಧಕರೊಬ್ಬರ ಮತ್ತೊಂದು ಸಂಶೋಧನೆಯಲ್ಲಿ ಪಾನ್ ಚ್ಯೂಯಿಂಗ್‌ನಿಂದ ಬಾಯಿ ಅರ್ಬುದ ಬಂದಿರುವ ಉದಾಹರಣೆಗಳು ನಗಣ್ಯವೆಂದೇ ದಾಖಲಿಸಿದ್ದಾರೆ.


'ಯಾವುದೇ ಸಕಾರಾತ್ಮಕ ಪರಿಣಾಮ ಬೀರಿರುವುದು ಕಂಡು ಬಂದಿಲ್ಲವಂತೆ. ಅಡಿಕೆ ಮೆಲ್ಲುವವರಲ್ಲದೆ, ಹೊಗೆಸೊಪ್ಪು ಜಗಿಯುವವರನ್ನು, ಇವೆರಡೂ ಚಟವಿಲ್ಲದವರನ್ನೂ ಪ್ರಶ್ನಿಸಲಾಗಿತ್ತು. ಅವರಲ್ಲಿ ಬಹುವಾದ ಆರೋಗ್ಯ ಏರುಪೇರುಗಳೇನೂ ಕಂಡು ಬಂದಿರಲಿಲ್ಲವಂತೆ. ಅಡಿಕೆ ಮೆಲ್ಲುವವರಲ್ಲಿ ಇಲ್ಲದ ಹಲ್ಲು ನೋವಿನ ಸಮಸ್ಯೆಯೊಂದು ಇತರ ಕೆಲವರಲ್ಲಿ ಗಮನಕ್ಕೆ ಬಂದಿತ್ತಂತೆ.


ಅಧ್ಯಯನದ ಅಂತಿಮ ಸೂಚನೆಯಂತೆ ಸಾಂಪ್ರದಾಯಿಕವಾಗಿ ಸೇವಿಸುವಂತೆ ಅಡಿಕೆಯನ್ನು ಸೇವಿಸಿದರೆ ಅಥವಾ ಮೆಲ್ಲುವುದರಿಂದ ಅಂದರೆ ಹೊಗೆಸೊಪ್ಪಿನಂತಹ ಯಾವುದೇ ವಸ್ತುಗಳ ಸೇರ್ಪಡೆಯನ್ನು ಮಾಡದೆ ಜಗಿದರೆ ಮನುಷ್ಯರಿಗೆ ಏನೂ ಅನಾರೋಗ್ಯವುಂಟಾಗದು ಎಂದು ಅಧ್ಯಯನ ಸ್ಪಷ್ಟವಾಗಿ ಹೇಳಿದೆ. ಅಡಿಕೆ ಸವಿಯುವವರ ಮತ್ತು ಸವಿಯದವರ ನಡುವೆ ಆರೋಗ್ಯದಲ್ಲೇನೂ ವ್ಯತ್ಯಾಸ ಕಂಡುಬಂದಿಲ್ಲವೆಂದೂ ಸಂಶೋಧಕರು ಸ್ಪಷ್ಟೀಕರಿಸಿದ್ದಾರೆ ಎಂದು ದಾಖಲೆಯಲ್ಲಿದೆ. ಅಡಿಕೆ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು ಎಂಬುದನ್ನು ಸಾಬೀತುಪಡಿಸುತ್ತದೆ.



Post a Comment

0 Comments
Post a Comment (0)
Advt Slider:
To Top