ವಿದ್ಯುತ್‌ ಕಳ್ಳತನ:3.22 ಕೋಟಿ ರೂ. ದಂಡ ವಿಧಿಸಿದ ಮೆಸ್ಕಾಂ

Upayuktha
0

ಮೆಸ್ಕಾಂ ಜಾಗೃತದಳದಿಂದ ನಾಲ್ಕು ಜಿಲ್ಲೆಗಳಲ್ಲಿ ಕಾರ್ಯಾಚರಣೆ

1,170 ವಿದ್ಯುತ್ ಕಳ್ಳತನ, ದುರುಪಯೋಗ ಪ್ರಕರಣ ದಾಖಲು



ಮಂಗಳೂರು: ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿದ್ದವರ ವಿರುದ್ಧ ಮಂಗಳೂರು ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಮೆಸ್ಕಾಂ) ಜಾಗೃತ ದಳದ ಅಧಿಕಾರಿಗಳು ಕಾರ್ಯಾರಣೆ ನಡೆಸಿ ಕಳೆದ 11 ತಿ೦ಗಳಿನಲ್ಲಿ 3.22 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ದಂಡ ವಿಧಿಸಿದ್ದಾರೆ. 


ಮೆಸ್ಕಾಂ  ವ್ಯವಸ್ಥಾಪಕ ನಿರ್ದೇಶಕ  ಜಯಕುಮಾರ್‌ ಆರ್‌. ಅವರ ಮಾರ್ಗದರ್ಶನ, ಹಿರಿಯ ಅಧಿಕಾರಿಗಳ ನಿಗಾ ಹಾಗೂ ಮೆಸ್ಕಾಂ ಜಾಗೃತದಳದ ಪೊಲೀಸ್ ಉಪ ಅಧೀಕ್ಷಕ ಟಿ.ಆರ್. ಜಯಶಂಕರ್ ಅವರ ನೇತೃತ್ವದಲ್ಲಿ ಜಾಗೃತದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮೆಸ್ಕಾಂ ವ್ಯಾಪ್ತಿಗೆ ಒಳಪಡುವ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಆ ಮೂಲಕ  ವಿದ್ಯುತ್‌ ಕಳ್ಳತನ, ವಿದ್ಯುತ್‌ ದುರುಪಯೋಗ ಮಾಡಿದವರ ವಿರುದ್ಧ ಕ್ರಮಕೈಗೊಂಡು, ಪ್ರಕರಣಗಳನ್ನು ದಾಖಲಿಸಿದ್ದಾರೆ.


ಮೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 2024ರ ಎಪ್ರಿಲ್‌ 1 ರಿ೦ದ 2025ನೇ ಸಾಲಿನ ಫೆಬ್ರವರಿ 25ರವರೆಗೆ ಗೃಹ, ವಾಣಿಜ್ಯ, ಕೈಗಾರಿಕೆ, ತಾತ್ಕಾಲಿಕ ಸ್ಥಾಪನಗಳು ಮತ್ತು ಇತರೆ ಕಡೆಗಳಲ್ಲಿ 28,390 ಸ್ಥಾಪನಗಳನ್ನು ಜಾಗೃತದಳದ ಅಧಿಕಾರಿಗಳು ಪರಿಶೀಲಿಸಿದ್ದು, ಈ ಸಂದರ್ಭದಲ್ಲಿ 1,170 ವಿದ್ಯುತ್ ಕಳ್ಳತನ ಮತ್ತು ದುರುಪಯೋಗ ಪ್ರಕರಣಗಳನ್ನು ದಾಖಲಿಸಿದ್ದಾರೆ. ಸದರಿ ಪ್ರಕರಣಗಳಿಂದ ಒಟ್ಟು 3,22,11,000 ರೂಪಾಯಿ ದಂಡ ವಿಧಿಸಿದ್ದಾರೆ.


ಶಿಕ್ಷಾರ್ಹ ಅಪರಾಧ:

ವಿದ್ಯುತ್ ಕಳ್ಳತನ ಮಾಡುವುದು ವಿದ್ಯುಚ್ಛಕ್ತಿ ಕಾಯ್ದೆಯ ಅಡಿಯಲ್ಲಿ ಕ್ರಿಮಿನಲ್ ಸ್ವರೂಪದ ಶಿಕ್ಷಾರ್ಹ ಅಪರಾಧವಾಗಿದ್ದು, ವಿದ್ಯುತ್ ಕಳ್ಳತನ ಮಾಡುವವರ ವಿರುದ್ದ ಪ್ರಕರಣ ದಾಖಲಿಸಲಾಗುವುದು. ಸಾರ್ವಜನಿಕರು ವಿದ್ಯುತ್ ಕಳ್ಳತನದ ಬಗ್ಗೆ ಮಾಹಿತಿ ಇದ್ದಲ್ಲಿ ನಿಗದಿತ ದೂರವಾಣಿ ಸಂಖ್ಯೆಗಳಿಗೆ ಮಾಹಿತಿ ನೀಡಬಹುದು. 


ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಮೆಸ್ಕಾಂ ಜಾಗೃತ ದಳದ ಕಾರ್ಯನಿರ್ವಾಹಕ ಇಂಜಿನಿಯರ್ (ವಿ)  ಹಾಗೂ ಪೊಲೀಸ್‌ ಉಪ ಅಧೀಕ್ಷಕರು  ತಿಳಿಸಿದ್ದಾರೆ. ವಿದ್ಯುತ್ ಕಳ್ಳತನ ಕಂಡುಬಂದಲ್ಲಿ ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಿದ್ದಾರೆ.


ಮೆಸ್ಕಾಂ ಜಾಗೃತ ದಳ: 

ದಕ್ಷಿಣ ಕನ್ನಡ ಜಿಲ್ಲೆ: ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್‌ - 9480833083

ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ)- 9448289436

ಉಡುಪಿ ಜಿಲ್ಲೆ:  ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್‌ : 9480833084

ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ)- 9448289441

ಚಿಕ್ಕಮಗಳೂರು ಜಿಲ್ಲೆ: ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್‌- 9480833086

ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ)- 9448289556

ಶಿವಮೊಗ್ಗ  ಜಿಲ್ಲೆ: ಪೊಲೀಸ್‌ ಸಬ್ ಇನ್ಸ್‌ಪೆಕ್ಟರ್‌- 94480833085

ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ)- 9448289452


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top