ಮಂಗಳೂರು: ಬಾಯಿ ಆರೈಕೆಯ ಸೆನ್ಸೊಡೈನ್ ಯಶಸ್ವಿಯಾಗಿ 24 ಗಂಟೆಗಳಲ್ಲಿ ಅತ್ಯಂತ ಹೆಚ್ಚು ಆನ್ಲೈನ್ ದಂತ ಪರೀಕ್ಷೆಗಳನ್ನು ನಡೆಸಿದ್ದಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆ ಸಾಧಿಸಿದೆ. ಈ ದಾಖಲೆಯು ಮಹಾಕುಂಭ ನಡೆದಿದ್ದು ಇದರಲ್ಲಿ 27,000ಕ್ಕೂ ಹೆಚ್ಚು ವ್ಯಕ್ತಿಗಳು ದಂತಪರೀಕ್ಷೆಯಲ್ಲಿ ಭಾಗವಹಿಸಿದ್ದು ಭಾರತೀಯರಲ್ಲಿ ಸಕ್ರಿಯ ಬಾಯಿ ಆರೈಕೆಯ ಪ್ರಾಮುಖ್ಯತೆ ಕುರಿತು ಅರಿವು ನೀಡುವುದರಲ್ಲಿ ಗಮನಾರ್ಹ ಹೆಜ್ಜೆಯಾಗಿದೆ.
ಈ ಬದ್ಧತೆಗೆ ಪೂರಕವಾಗಿ ಸೆನ್ಸೊಡೈನ್ ಹೊಸದಾಗಿ ಬಿಡುಗಡೆ ಮಾಡಿದ ₹20ರ ಸಣ್ಣ ಟೂಥ್ ಪೇಸ್ಟ್ ಪ್ಯಾಕ್ ಗಳನ್ನು ವಿತರಿಸಿತು, ಈ ಪ್ಯಾಕ್‌ಗಳನ್ನು ಸೆನ್ಸಿಟಿವಿಟಿಯಿಂದ ರಕ್ಷಣೆ ಹೆಚ್ಚು ಕೈಗೆಟುಕುವ ಮತ್ತು ಲಭ್ಯವಾಗುವಂತೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಈ ದಾಖಲೆಯು ಸೆನ್ಸೊಡೈನ್‌ನ ವಿಶ್ವ ಬಾಯಿ ಆರೋಗ್ಯ ದಿನದ ಅಭಿಯಾನದ ಪ್ರಾರಂಭಕ್ಕೂ ಗುರುತಾಗಿದ್ದು ವ್ಯಕ್ತಿಗಳಿಗೆ ಉತ್ತಮ ಬಾಯಿ ಆರೋಗ್ಯಕ್ಕೆ ಮೊದಲ ಹೆಜ್ಜೆ ಇರಿಸಲು ಉತ್ತೇಜಿಸುವ ಗುರಿ ಹೊಂದಿದೆ ಎಂದು ಸಂಸ್ಥೆ ಹೇಳಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ