ಬ್ರಹ್ಮಾವರದಲ್ಲಿ ಎಂ.ಸಿ.ಸಿ ಬ್ಯಾಂಕಿನ ಎಟಿಎಂ ಉದ್ಘಾಟನೆ

Upayuktha
0


 

ಮಂಗಳೂರು: ಬ್ರಹ್ಮಾವರ ಶಾಖೆಯು ಆರಂಭಗೊಂಡು ಒಂದು ವರ್ಷ ಪೂರ್ಣಗೊಂಡ ಸಂದರ್ಭ ವಾರ್ಷಿಕೋತ್ಸವ, 10 ಕೋಟಿ ವ್ಯವಹಾರದ ಸಾಧನೆ ಮತ್ತು ನೂತನ ಎಟಿಮ್ ಉದ್ಘಾಟಣಾ ಸಮಾರಂಭ ಬ್ರಹ್ಮಾವರ ಶಾಖೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.  


ಎಂ.ಸಿ.ಸಿ. ಬ್ಯಾಂಕಿನ 8ನೇ ಎಟಿಎಮ್ ಅನ್ನು ಬ್ರಹ್ಮಾವರ ಶಾಖೆಯಲ್ಲಿ ಬ್ರಹ್ಮಾವರ ಕ್ಯಾಥೋಲಿಕ್ ಕ್ರೇಡಿಟ್ ಸಹಕಾರ ಸಂಘದ ಅಧ್ಯಕ್ಷರಾದ ಜೆರಾಲ್ಡ್ ಗೊನ್ಸಾಲ್ವಿಸ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹೋಲಿ ಫ್ಯಾಮಿಲಿ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ| ಜೋನ್ ಫೆರ್ನಾಂಡಿಸ್ ಆಶೀರ್ವದಿಸಿದರು. ಎಟಿಎಮ್ ಯಂತ್ರವನ್ನು ಎಎಸ್ ಯೂಸ್ಡ್ ಕಾರ‍್ಸ್ ಇದರ ಮ್ಹಾಲಕರಾದ ಸೌರಬ್ ಶೆಟ್ಟಿ ಇವರು ಎಟಿಎಮ್‌ನಿಂದ ಹಣ ತೆಗೆಯುವ ಮೂಲಕ ಉದ್ಘಾಟಿಸಿದರು. ಉದ್ಯಮಿ ಶಂಶುದ್ದಿನ್ ಮೊಯ್ದಿನ್ ಮುಖ್ಯ ಅತಿಥಿಯಾಗಿದ್ದರು ಹಾಗೂ ಶಾಖಾ ನಿರ್ದೇಶಕ ಎಲ್‌ರೋಯ್ ಕಿರಣ್ ಕ್ರಾಸ್ಟೊ ಸಮಾರಂಭದಲ್ಲಿ ಹಾಜರಿದ್ದರು. 


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ರತ್ನ ಅನಿಲ್ ಲೋಬೊ ವಹಿಸಿದ್ದರು. ಸಹಕಾರ ರತ್ನ ಅನಿಲ್ ಲೋಬೊ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬ್ರಹ್ಮಾವರದಲ್ಲಿ ಶಾಖೆಯು ಆರಂಭಗೊಳ್ಳಲು ಹಾಗೂ ರೂ. 10 ಕೋಟಿ ವ್ಯವಹಾರ ದಾಖಲಿಸಲು ಸಹಕರಿಸಿದ ಬ್ರಹ್ಮಾವರದ ಗ್ರಾಹಕರಿಗೆ ವಂದನೆಗಳನ್ನು ಸಲ್ಲಿಸಿದರು. 


ಬ್ರಹ್ಮಾವರದ ಜನತೆ ನೀಡಿದ ಸಹಕಾರದಿಂದ ಬ್ರಹ್ಮಾವರ ಶಾಖೆಯು ಈ ಸಾಧನೆ ಮಾಡಲು ಸಾಧ್ಯವಾಯಿತು. ಶಾಖೆಯಲ್ಲಿ ಉತ್ತಮ ಸೇವೆ ಮತ್ತು ವಿಶ್ವಾಸರ್ಹತೆಯನ್ನು ಗಳಿಸುವಲ್ಲಿ ಯಶಸ್ವಿಯಾದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಇದಕ್ಕಾಗಿ ಬ್ರಹ್ಮಾವರ ಶಾಖೆಯ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ಮತ್ತು ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿ ಮುಂದಿನ ವರ್ಷ 30 ಕೋಟಿ ವ್ಯವಹಾರವನ್ನು ದಾಖಲಿಸಿ, ಶಾಖೆಯು ಲಾಭ ಗಳಿಸುವಲ್ಲಿ ಗ್ರಾಹಕರು ಸಹಕರಿಸಲು ಮತ್ತು ಶಾಖೆಯ ಸಿಬ್ಬಂದಿ ಶ್ರಮಿಸಲು ಕರೆ ಕೊಟ್ಟರು. ಕಳೆದ ವರ್ಷ ಶಾಖೆಯ ಉದ್ಘಾಟನಾ ಸಂದರ್ಭದಲ್ಲಿ ಆಶೀರ್ವಚಿಸಿದ ಧರ್ಮಗುರುಗಳಾದ ವಂ. ಫಾ| ಜೋನ್ ಫೆರ್ನಾಂಡಿಸ್ ಇವರಿಗೆ ವಂದನೆಗಳನ್ನು ಸಲ್ಲಿಸಿದರು. 


ನೂತನ ಎಟಿಎಮ್‌ನ್ನು ಆಶೀರ್ವಚಿಸಿ ಮಾತನಾಡಿದ ವಂದನೀಯ ಫಾ| ಜೋನ್ ಫೆರ್ನಾಂಡಿಸ್ ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಗ್ರಾಹಕರಿಗೆ ಶುಭ ಹಾರೈಸಿದರು. 


ಎಟಿಎಮ್ ಉಧ್ಘಾಟಿಸಿ ಮಾತನಾಡಿದ ಜೆರಾಲ್ಡ್ ಗೊನ್ಸಾಲ್ವಿಸ್ ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊ ಇವರ ಮುಂದಾಳುತ್ವದ ಆಡಳಿತ ಮಂಡಳಿಯ ಇತ್ತೀಚಿನ ಸಾಧನೆಯನ್ನು ಮತ್ತು ಫಲಿತಾಂಶದ ಬಗ್ಗೆ ಶ್ಲಾಘಿಸಿದರು. ಶಾಖೆಯು ಒಂದು ವರ್ಷದಲ್ಲಿಯೇ ರೂ. 10 ಕೋಟಿ ಸಾಧನೆಗೈದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ನೂತನ ತಂತ್ರಜ್ಞಾನದಲ್ಲಿ ಹಿಂದೆ ಬಿದ್ದರೆ ಪ್ರಗತಿ ಅಸಾದ್ಯ, ಎಲ್ಲರೂ ಒಟ್ಟುಗೂಡಿ ಕೆಲಸ ಮಾಡಿದ್ದರಿಂದ ಬ್ಯಾಂಕ್ ಪ್ರಗತಿಯಲ್ಲಿ ಮುಂದೆ ಇದೆ. ಬ್ಯಾಂಕ್ ತಂತ್ರಜ್ಞಾನದಲ್ಲಿ ಮೂಂಚೂಣಿಯಲ್ಲಿದ್ದು ಮುಂದೆಯೂ ಉತ್ತಮ ಪ್ರಗತಿ ಸಾಧಿಸಲಿ ಎಂದು ಶುಭ ಹಾರೈಸಿದರು. 


ಶಾಖೆಯ ವಾರ್ಷಿಕೋತ್ಸವ ಸಂದರ್ಭವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ರೂ. 10 ಕೋಟಿ ವ್ಯವಹಾರದ ಸಾಧನೆ ಮಾಡಿದ ಶಾಖೆಯ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ಇವರನ್ನು ಸನ್ಮಾನಿಸಲಾಯಿತು. ಬ್ರಹ್ಮಾವರ ಕ್ಯಾಥೋಲಿಕ್ ಕ್ರೆಡಿಟ್ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಜೆರಾಲ್ಡ್ ಗೊನ್ಸಾಲ್ವಿಸ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 


ನಿರ್ದೇಶಕ ಡಾ| ಜೆರಾಲ್ಡ್ ಪಿಂಟೊ ಸ್ವಾಗತಿಸಿ, ಮಹಾಪ್ರಬಂಧಕ ಸುನಿಲ್ ಮಿನೆಜಸ್ ವಂದಿಸಿದರು. ಶಾಖಾ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ನಿರೂಪಿಸಿದರು. ಉಡುಪಿ ಶಾಖಾ ವ್ಯವಸ್ಥಾಪಕ ಪ್ರದೀಪ್ ಡಿಸೋಜ, ಶಿರ್ವ ಶಾಖಾ ವ್ಯವಸ್ಥಾಪಕಿ ಅನ್ಸಿಲ್ಲಾ ಫೆರ್ನಾಂಡಿಸ್, ಕುಂದಾಪುರ ಶಾಖಾ ವ್ಯವಸ್ಥಾಪಕಿ ಜ್ಯೋತಿ ಬಾರೆಟ್ಟೊ ಹಾಗೂ ಗ್ರಾಹಕರು ಹಾಜರಿದ್ದರು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top