ಮಂಗಳೂರು: ಯಾರು ಬರೆದರೂ ಅವರ ಕಿಂಚಿತ್ತಾದರೂ ಅನುಭವ ಅದರಲ್ಲಿ ಇದ್ದರೆ ಜನರು ಸುಲಭವಾಗಿ ಮೆಚ್ಚಿಕೊಳ್ಳುವ ಸಾಹಿತ್ಯ ಅದಾಗುತ್ತದೆ ಎಂದು ಮಣಿಪಾಲ ಟಿಎಂಎ ಪೈ ಪೌಡೇಶನ್ ಇದರ ಪನ್ವಾರ್ ಮಾಸಿಕ ಪತ್ರಿಕೆಯ ಸಂಪಾದಕ ನುಡಿದರು.
ಅವರು ದಶರಥನಗರ ಬಡಾವಣೆ ಮಣುಪಸಲದ ಮೂರನೇ ಅಡ್ಡ ರಸ್ತೆಯಲ್ಲಿ ಆ್ಯಂಟನಿ ಲೂಯಿಸ್ ಅವರ ಅಂಕಣದಲ್ಲಿ ನಡೆದ 24ನೇ ಪಿಂಗಾರ ಸಾಹಿತ್ಯೋತ್ಸವ ಹಾಗೂ ಪಂಚಭಾಷಾ ಕವಿ ಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಝಲ್ ಓದಿ ಚಾಲನೆ ನೀಡಿದ ಬಂಟ್ವಾಳ ಕನ್ನಡ ಸಾಹಿತ್ಯ ಸಮ್ಮೇಳನದ ಮಾಜಿ ಅಧ್ಯಕ್ಷ ಸಾಹಿತಿ ವೈದ್ಯ ಸುರೇಶ ನೆಗಳಗುಳಿ ಮಾತನಾಡಿ ಮನೆಯಲ್ಲಿ ಸಾಹಿತ್ಯ ಅಂದರೆ ಮನದಲ್ಲಿ ಉಳಿಯುವಂತಹದು.ದೊಡ್ಡದಾದ ಸಮ್ಮೇಳನದ ವಹಿವಾಟು ನಿಭಾಯಿಸಲು ಅದಕ್ಕೆ ವ್ಯಾಪಾರೀಕರಣದ ಒಂದಂಶವು ಲೇಪಿತವಾಗುತ್ತದೆ. ಇದು ಅನಿವಾರ್ಯ ಕೂಡಾ ಆಗುತ್ತದೆ ಎಂದರು.
ಈ ಸಮಯದಲ್ಲಿ ಸಾಹಿತಿಗಳು ಗೂಗಲ್ ಬ್ಲಾಗ್, ಗೂಗಲ್ ಟೈಪ್ , ಸಾಹಿತ್ಯ ಉಳಿಸಿಕೊಳ್ಳಲು ವಿವಿಧ ಮೊಬೈಲ್ ಟೂಲ್ ಕವಿ ,ಆಂಗ್ಲ ಶಿಕ್ಷಕಿ ಪ್ರೇಮಾ ಶೆಟ್ಟಿ ವಿವರಿಸಿದರು.
ಕಾರ್ಯಕ್ರಮ ಅಯೋಜಿಸಿದ ಹಿರಿಯ ಪತ್ರಕರ್ತ ಮತ್ತು ಸಾಹಿತಿ ರೇಮಂಡ್ ಡಿಕೂನಾ ತಾಕೊಡೆ ತನ್ನ ಇಂಗ್ಲಿಷ್, ತುಳು, ಕೊಂಕಣಿ, ಕನ್ನಡ ಹೀಗೆ ನಾಲ್ಕು ಭಾಷೆಯಲ್ಲಿ ಬರೆದ ವಿವಿಧ ಚುಟುಕು ವಾಚಿಸಿದರು.
ಕವಿಗಳಾದ ಆ್ಯಂಟನಿ ಲೂಯಿಸ್, ದಿಯಾ ಉದಯ್ ಡಿಯು, ಪ್ರೇಮಾ ಆರ್ ಶೆಟ್ಟಿ,ಮಾಲತಿ ರಮೇಶ್ ಕೆಮ್ಮಣ್ಣು, ಅವಿನಾಶ್ ಐತಾಳ್, ವಾಣಿಶ್ರೀ ತೆಕ್ಕಟ್ಟೆ, ಸುಮಾಕಿರಣ್ ಮಣಿಪಾಲ, ವಿನೋದ ಪ್ರಕಾಶ್ ಪಡುಬಿದ್ರಿ ಮತ್ತು ರೇಖಾ ಸುರೇಶ್ ಮಂಗಳೂರು ಕವಿತೆ ಸಾಧರಪಡಿಸಿದರು. ಮೊದಲಿಗೆ ಆ್ಯಂಟನಿ ಲೂಯಿಸ್ ಸ್ವಾಗತಿಸಿ, ರೇಮಂಡ್ ಡಿಕೂನಾ ತಾಕೊಡೆ ನಿರೂಪಿಸಿದರು. ಜ್ಯೋತಿ ಆ್ಯಂಟನಿ ಲೂಯಿಸ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ