ಮಧೂರು ಬ್ರಹ್ಮಕಲಶ: ಕಾನತ್ತೂರು ಪ್ರಾದೇಶಿಕ ಸಮಿತಿ ರಚನಾ ಸಭೆ

Upayuktha
0


ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವದ ಅಂಗವಾಗಿ ಕಾನತ್ತೂರು ಪ್ರಾದೇಶಿಕ ಸಮಿತಿ ರಚನಾ ಸಭೆಯು ಇತ್ತೀಚೆಗೆ ಜರಗಿತು.


ಮೋಹನನ್ ನಾಯರ್ ಕಯೆ ದೇವಸ್ಥಾನ ಟ್ರಸ್ಟ್ ಇವರು ಅಧ್ಯಕ್ಷ ಸ್ಥಾನ ವಹಿಸಿದರು. ಗೋವಿಂದ ಬಳ್ಳಮೂಲೆ ಸಮಿತಿಯ ಕಾರ್ಯಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಗಳನ್ನಿತ್ತರು. ಸಭೆಯಲ್ಲಿ ಸಮಿತಿಯ ಕಾರ್ಯಕಾರೀ ಸಮಿತಿಯನ್ನು ರಚಿಸಲಾಯಿತು.


ಅಧ್ಯಕ್ಷರು ಮುರಳೀಧರ ನಾಯರ್ ಎರಿಂಜಿಪುಯ, ಕಾರ್ಯದರ್ಶಿ ಮಾಧವನ್ ಮೂಡೈಂಯವೀಡು, ಕೋಶಾಧಿಕಾರಿ ಚೇಡಿಕ್ಕಾಲು ಜನಾರ್ದನ ನಾಯರ್ ಮತ್ತು ಇತರ ಸದಸ್ಯರನ್ನು ಆಯ್ಕೆಮಾಡಲಾಯಿತು. ಸಭೆಯಲ್ಲಿ ನಿವೇದನಾ ಪತ್ರ ಮತ್ತು ರಶೀದಿ ಪುಸ್ತಕಗಳನ್ನು ಸಮಿತಿಯವರಿಗೆ ಹಸ್ತಾ೦ತರಿಸಲಾಯಿತು.


ಆಯ್ಕೆ ಮಾಡಲಾದ ಪದಾಧಿಕಾರಿಗಳು ಸ್ಥಾನವನ್ನು ಸ್ವೀಕರಿಸಿದ ಬಳಿಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಜ್ಯೋತಿ ಮಾಸ್ಟರ್ ಕಾನತ್ತೂರು ಶುಭಾಶಂಸನೆಯಿತ್ತರು. ಮೋಹನನ್ ಪ್ರಸ್ತಾವನೆ, ಸ್ವಾಗತ ಮತ್ತು ರಾಘವನ್ ನಾಯರ್ ನೆಯ್ಯಂಗಯ ಧನ್ಯವಾದವಿತ್ತರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top