ಕಾಸರಗೋಡು: ಕನ್ನಡ-ಮಲಯಾಳಂ ಅನುವಾದ ಕಾರ್ಯಾಗಾರ ಮಾರ್ಚ್ 9ಕ್ಕೆ

Upayuktha
0


ಕಾಸರಗೋಡು: ದ್ರಾವಿಡ ಭಾಷಾ ಅನುವಾದಕರ ಸಂಘ (ರಿ.)ಬೆಂಗಳೂರು, ಕಾಸರಗೋಡಿನ ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಇದರ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 9ರಂದು ಬೆಳಿಗ್ಗೆ 10ರಿಂದ ಒಂದು ದಿನದ ಭಾಷಾಂತರ ಕಾರ್ಯಾಗಾರ ಆಯೋಜಿಸಲಾಗಿದೆ. ಕನ್ನಡ ಭವನ ವೇದಿಕೆಯಲ್ಲಿ ನಡೆಯುವ ಕಾರ್ಯಾಗಾರವನ್ನು ಖ್ಯಾತ ಬಾಷಾಂತರಕಾರರು ಮಲಯಾಳದಿಂದ ಕನ್ನಡಕ್ಕೆ ಹಾಗೂ ಕನ್ನಡ ದಿಂದ ಮಲಯಾಳಂಗೆ ಅನುವಾದ ಮಾಡುವಾಗ ಎದುರಿಸಬೇಕಾದ ಸಮಸ್ಯೆಗಳನ್ನು ಕುರಿತು ತರಗತಿಗಳನ್ನು ನಡೆಸಲಿದ್ದಾರೆ.


ಕರ್ನಾಟಕ ಸರಕಾರದ ಗಡಿ ಅಭಿವೃದ್ಧಿ ಪ್ರಾಧಿಕಾರ ನೀಡುವ "ಗಡಿನಾಡ ಚೇತನ "ಪ್ರಶಸ್ತಿ ಪುರಸ್ಕೃತ ಸಾಹಿತಿ ರಾಧಾಕೃಷ್ಣ ಕೆ ಉಳಿಯತಡ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದ್ರಾವಿಡ ಭಾಷಾ ಅನುವಾದಕರ ಸಂಘದ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ಬೆಂಗಳೂರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅನುವಾದ ಸಾಹಿತಿ ಕೆ. ವಿ. ಕುಮಾರನ್, ದ್ರಾವಿಡ ಭಾಷಾ ಸಂಘದ ಉಪಾಧ್ಯಕ್ಷರಾದ ಡಾ. ಬಿ. ಎಸ್. ಶಿವಕುಮಾರ್, ತರಗತಿ ನಡೆಸಲಿದ್ದಾರೆ. ಕನ್ನಡ ಭವನ ಸಂಸ್ಥಾಪಕರಾದ ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್, ಅನುವಾದಕ ಸಂಘ ಕಾರ್ಯದರ್ಶಿಗಳಾದ ಕೆ. ಪ್ರಭಾಕರನ್ ಕಾರ್ಯಕ್ರಮ ಸಂಯೋಜಕರಾದ ಸಾಹಿತಿ ರವೀಂದ್ರನ್ ಪಾಡಿ ಮುಂತಾದವರು ಭಾಗವಹಿಸುತ್ತಾರೆ.


ಪ್ರಸ್ತುತ ಕಾಸರಗೋಡು ಗಡಿನಾಡಿನಲ್ಲಿ ಕನ್ನಡ ಮಲಯಾಳಂ ಭಾಷೆಯಲ್ಲಿನ ಅನುವಾದ ಕಾರ್ಯಗಳಲ್ಲಿ ಕಾರ್ಯವೆಸಗುತ್ತಿರುವ ಉದ್ಯೋಗಿಗಳು, ಪತ್ರಕರ್ತರು, ಡಿ.ಟಿ.ಪಿ. ಕ್ಷೇತ್ರಗಳಲ್ಲಿ, ಹಾಗೂ ಅನುವಾದ ಸಾಹಿತ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು ಇದರ ಪ್ರಯೋಜನ ಪಡೆದು ಕೊಳ್ಳಬೇಕಾಗಿ ಸಂಯೋಜಕರಾದ ಡಾ. ಸುಷ್ಮಾ ಶಂಕರ್, ಡಾ. ವಾಮನ್ ರಾವ್ ಬೇಕಲ್, ರವೀಂದ್ರನ್ ಪಾಡಿ ಸಂಯುಕ್ತವಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top