ಪೊಲೀಸರ ಸಮವಸ್ತ್ರಕ್ಕೆ ಅವಮಾನ: ' ಬಿಗ್ ಕ್ಯಾಶ್ ಪೋಕರ್' ನಿರ್ಮಾಪಕರ ಮೇಲೆ ಕ್ರಮಕ್ಕೆ ಆಗ್ರಹ

Upayuktha
0

ಪೊಲೀಸರ ಸಮವಸ್ತ್ರವನ್ನು ಅವಮಾನಿಸುವ ಮತ್ತು ದಾರಿ ತಪ್ಪಿಸುವ ಜಾಹೀರಾತು ತೆರವು ; ಆದರೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವುದು ಯಾವಾಗ ?. ಸುರಾಜ್ಯ ಅಭಿಯಾನ


ಹಿಂದೂ ಜನಜಾಗೃತಿ ಸಮಿತಿಯ ಸುರಾಜ್ಯ ಅಭಿಯಾನದ ಬೆಂಬೆತ್ತುವಿಕೆಯ ನಂತರ ಪೊಲೀಸರ ಸಮವಸ್ತ್ರದಲ್ಲಿ ನಟ ನವಾಜವುದ್ದಿನ ಸಿದ್ದಿಕಿ ಇವರನ್ನು ತೋರಿಸಿ ಜನರಿಗೆ ಜೂಜಾಡಲು ಪ್ರಚೋದಿಸುವ ವಿವಾದಿತ ' ಬಿಗ್ ಕ್ಯಾಶ್ ಪೋಕರ್ ' ಜಾಹೀರಾತು ಸೋಶಿಯಲ್ ಮೀಡಿಯಾದಿಂದ ಕೊನೆಗೂ ತೆರವುಗೊಂಡಿದೆ ; ಆದರೆ ಇಲ್ಲಿಯವರೆಗೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡಿಲ್ಲ. 


ಆದ್ದರಿಂದ ಸುರಾಜ್ಯ ಅಭಿಯಾನದ ವತಿಯಿಂದ ಸತೀಶ ಸೋನಾರ ಮತ್ತು ರವಿ ನಲಾವಡೆ ಇವರು ಮಹಾರಾಷ್ಟ್ರದ ಗೃಹಮಂತ್ರಿ  ಯೋಗೇಶ್ ಕದಮ ಇವರನ್ನು ಭೇಟಿ ಮಾಡಿದರು ಮತ್ತು ಈ ಜಾಹೀರಾತು ಪೊಲೀಸ್‌ ಪಡೆಯ ಪ್ರತಿಷ್ಠೆಗೆ  ಧಕ್ಕೆ ತರುವಂತಹ ಗಂಭೀರ ಪ್ರಕರಣ ಎಂದು ಗಮನಕ್ಕೆ ತರಲಾಯಿತು. ಈ ಭೇಟಿಯಲ್ಲಿ ವಿಷಯದ ಗಾಂಭೀರ್ಯವನ್ನು ಗಮನಿಸಿ ಗೃಹ ರಾಜ್ಯ ಮಂತ್ರಿ  ಯೋಗೇಶ ಕದಮ ಇವರು ಮುಂಬಯಿ ಪೊಲೀಸ ಅಧಿಕಾರಿಗಳಿಗೆ ತಪಾಸಣೆ ನಡೆಸಿ ಕ್ರಮ ಕೈಗೊಳ್ಳುವ ಆದೇಶ ನೀಡಿದ್ದಾರೆ.


ಈ ಜಾಹೀರಾತನ್ನು ತೆರವುಗೊಳಿಸಲಾಗಿದ್ದರೂ, ನಟ ನವಾಜುದ್ದಿನ ಸಿದ್ದಿಕಿ ಮತ್ತು ' ಬಿಗ್ ಕ್ಯಾಶ್ ' ನ ಮಾಲಿಕ ಅಂಕೂರ್ ಸಿಂಗ್ ಇವರ ಮೇಲೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಸುರಾಜ್ಯ ಅಭಿಯಾನವು ಈ ಪ್ರಕರಣದ ಕುರಿತು ಆಗಾಗ ಫೇಸ್ಬುಕ್, ಯೂಟ್ಯೂಬ್ ಮತ್ತು ಟ್ವಿಟರ್ (X) ಇವುಗಳ ದೂರು ನಿವಾರಣೆ ಅಧಿಕಾರಿಗಳ ಬಳಿ ದೂರುಗಳನ್ನು ನೀಡಿತ್ತು; ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಕೊನೆಗೆ ದೂರು ಅಪಿಲ ಸಮಿತಿ (GAC) ಗೆ ದೂರು ನೀಡಿದ ನಂತರ ಈ ಜಾಹೀರಾತು ತೆರವುಗೊಳಿಸ ಲಾಗಿದೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಅಮಿತಾ ಸಚದೇವಾ ಇವರಿಂದಾದ ಕಾನೂನು ರೀತ್ಯಾ ಹಸ್ತಕ್ಷೇಪದಿಂದ ಈ ಯಶಸ್ಸು ದೊರೆತಿದೆ.


ಯಾವ ಪೊಲೀಸ್‌ ಇಲಾಖೆ ಜೂಜು ಆಡುವವರ ಮೇಲೆ ದೂರು ದಾಖಲಿಸಿ ಅವರನ್ನು ಬಂಧಿಸುತ್ತದೆಯೋ, ಅದೇ ಪೊಲೀಸರ ಉಡುಪಿನಲ್ಲಿ ಇಂತಹ ಜಾಹೀರಾತು ತಯಾರಿಸುತ್ತಾರೆ, ಇದು ಪೊಲೀಸ್‌ ಪಡೆಯ ಪ್ರತಿಷ್ಠೆಯನ್ನು ಕಳಂಕಿತಗೊಳಿಸುವುದು ಮತ್ತು ವ್ಯಾಪಾರದ ಲಾಭಕ್ಕಾಗಿ ಸಮಾಜದ ದಾರಿ ತಪ್ಪಿಸುವುದಾಗಿದೆ.


‘ಉಪಯುಕ್ತ ಆಟ ' ಎಂದು ಹೇಳಿ 'ಜೂಜು ' ಈ ಅಪರಾಧ ನಿವಾರಿಸಲು ಇರುವಂತಹ ಅವಶ್ಯಕ ಕೌಶಲ್ಯ ಎಂದು ಪೊಲೀಸರ ಉಡುಪಿನಲ್ಲಿ ನವಾಜುದ್ದಿನ ಸಿದ್ದಿಕಿ ಇವರಿಂದ ಪ್ರಸಾರ ಮಾಡಲಾಗಿತ್ತು. ಹಾಗೂ ಇದರಲ್ಲಿ ಭಗವದ್ ಗೀತೆಯನ್ನು ಸಹ ಅವಮಾನಿಸಲಾಗಿತ್ತು. ಆದ್ದರಿಂದ ಸುರಾಜ್ಯ ಅಭಿಯಾನ ದಿಂದ ನಟ ನವಾಜುದ್ದೀನ್ ಸಿದ್ದಿಕಿ ಮತ್ತು 'ಬಿಗ್ ಕ್ಯಾಶ್ ಪೋಕರ್' ಕಂಪನಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಭವಿಷ್ಯದಲ್ಲಿ ಪೊಲೀಸ್ ಪಡೆಯ ಪ್ರತಿಷ್ಠೆಯ ದುರುಪಯೋಗ ತಡೆಯಲು ಕಠಿಣ ನೀತಿ ರೂಪಿಸಬೇಕು ಎಂದು ಸರಕಾರಕ್ಕೆ ಆಗ್ರಹಿಸಲಾಗಿದೆ.


-ಅಭಿಷೇಕ ಮುರುಕಟೆ ,

ಸಮನ್ವಯಕ, ಸ್ವರಾಜ್ಯ ಅಭಿಯಾನ (ಸಂಪರ್ಕ : 9867558384 )


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top