ಹಾಸನ: ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಎಲ್ಲಿ ಉತ್ತಮ ಸಹಕಾರ ನೀಡುತ್ತದೆಯೋ ಅಲ್ಲಿ ಶಾಲೆಯ ಸಂಪೂರ್ಣ ಅಭಿವೃದ್ಧಿ ಸಾಧ್ಯವಿದೆ. ಇತ್ತೀಚೆಗೆ ನಡೆದ ಪುಷ್ಠಿ ಕಾರ್ಯಕ್ರಮದಲ್ಲಿ ಶಾಲೆಗೆ ಉತ್ತಮ ಸ್ಥಾನ ಲಭಿಸಿರುವುದು ಎಸ್.ಡಿ.ಎಂ ಸಿ. ಮತ್ತು ಎಲ್ಲ ಶಿಕ್ಷಕರ ಹಾಗೂ ಪೋಷಕರ ಸಹಕಾರದಿಂದ. ಅಕ್ಷರದಾಸೋಹ ಮತ್ತು ಕ್ಷೀರಭಾಗ್ಯ ಯೋಜನೆಗಳು ಶಾಲೆಯಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ ಎಂದು ಉಪಪ್ರಾಂಶುಪಾಲರಾದ ಮಂಜುನಾಥ್ ಹೇಳಿದರು.
ನಗರದ ಆರ್. ಸಿ. ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರಧಾನ) ಪ್ರೌಢಶಾಲಾ ವಿಭಾಗ ಇಲ್ಲಿ ಆಯೋಜನೆಗೊಂಡಿದ್ದ ಎಸ್.ಡಿ.ಎಂ.ಸಿ. ಪುಷ್ಠಿ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಪೋಷಕರು ಎಸ್ ಡಿ ಎಂ ಸಿ ಸದಸ್ಯರು ಮತ್ತು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು ಮಕ್ಕಳ ವಿದ್ಯಾಭ್ಯಾಸ ಮತ್ತು ಭವಿಷ್ಯದ ಕುರಿತು ಪಾಲಕರು ಪೋಷಕರಲ್ಲಿ ಅರಿವು ಮೂಡಿಸುವುದು ಅವಶ್ಯವಿದೆ.
ಶಾಲಾ ದಾಖಲಾತಿ ಹೆಚ್ಚಳ ಮತ್ತು ಉತ್ತಮ ಫಲಿತಾಂಶ ಸಾಧನೆ ನಮ್ಮ ಮುಂದಿರುವ ಜವಾಬ್ದಾರಿ ಯಾಗಿದೆ. ಇಂದಿನ ಮಕ್ಕಳೆ ಭವಿಷ್ಯದ ಪ್ರಜೆಗಳಾಗುವುದರಿಂದ ಅವರನ್ನು ಆರೋಗ್ಯವಂತ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಾಲೆಯಲ್ಲಿ ನಡೆಯುವ ಅಕ್ಷರ ದಾಸೋಹ ಮತ್ತು ಕ್ಷೀರಭಾಗ್ಯ ಯೋಜನೆಗಳು ಸಹಕಾರಿಯಗಿವೆ ಎಂದರು.
ವಿದ್ಯಾನಗರ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರಾದ ಶಶಿಧರ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಎಸ್.ಡಿ.ಎಂ.ಸಿ ಯ ಪುಷ್ಠಿ ಕಾರ್ಯಕ್ರಮದಲ್ಲಿ ಎಲ್ಲರ ಸಹಕಾರವಿದ್ದರೆ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ಶಾಲೆಯ ಸರ್ವೋತೋಮುಖ ಪ್ರಗತಿ ನಮ್ಮೆಲ್ಲರ ಉದ್ದೇಶವಾಗಿದ್ದು ಎಲ್ಲರೂ ಒಂದಾಗಿ ವಿದ್ಯಾರ್ಥಿಗಳ ಪ್ರಗತಿಗೆ ಶ್ರಮಿಸಬೇಕಿದೆ ಎಂದರು.
ಚನ್ನಪಟ್ಟಣ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶೈಲಜಾ ರವರು ಮಾತನಾಡುತ್ತಾ ಶಾಲಾ ಬೆಳವಣಿಗೆಯಲ್ಲಿ ಎಸ್.ಡಿ.ಎಂ.ಸಿ. ಪಾತ್ರ ಅತೀ ಅಗತ್ಯವಾಗಿದ್ದು ಶಿಕ್ಷಕರಿಗೆ ಪೋಷಕರಿಗೆ ಸಲಹೆ ಸೂಚನೆಗಳನ್ನು ನೀಡುತ್ತಾ ಕಾಲ ಕಾಲಕ್ಕೆ ಅಗತ್ಯ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕಿದೆ ಎಂದರು.
ಶಾಲೆಯ ಹಿರಿಯ ಶಿಕ್ಷಕರಾದ ಹೆಚ್.ಪಿ. ಮಂಜುಳ ರವರು ಮಾತನಾಡುತ್ತಾ ನಮ್ಮ ಶಾಲೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಎಸ್.ಡಿ. ಎಂ.ಸಿ. ಅಧ್ಯಕ್ಷರು ಸದಸ್ಯರು ಮತ್ತು ಪೋಷಕರು ಉತ್ತಮ ಪಾಲ್ಗೊಳ್ಳುವಿಕೆಯನ್ನು ತೋರಿಸುವ ಮೂಲಕ ಹೆಚ್ಚಿನ ಸಹಕಾರವನ್ನು ನೀಡುತ್ತಾರೆ ಎಂದರು. ಶಾಲೆಯಲ್ಲಿ ಮೊಟ್ಟೆ ವಿತರಣೆ ಸಂಬಂಧ ಇಲಾಖೆ ಆದೇಶ ನೀಡಿದಾಗ ಪೂರ್ವಭಾವಿ ಸಭೆಯಲ್ಲಿ ಎಸ್. ಡಿ.ಎಂ.ಸಿ. ಯವರ ಸಲಹೆ ಸೂಚನೆಗಳನ್ನು ಪಡೆದು ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಶಿಕ್ಷಕರಾದ ಕೆ.ಎನ್ ಚಿದಾನಂದ ಕೆ.ಎನ್ ರವರು ಮಾತನಾಡುತ್ತ ಎಸ್.ಡಿ. ಎಂ.ಸಿ. ರಚನೆ, ಕಾರ್ಯನಿರ್ವಹಣೆ, ಹಾಗೂ ಶಾಲಾ ದಾಖಲಾತಿಯಿಂದ ಪ್ರಾರಂಭವಾದ ಶೈಕ್ಷಣಿಕ ವರ್ಷಾಚರಣೆ ಮಕ್ಕಳ ಫಲಿತಾಂಶದೊಂದಿಗೆ ಕೊನೆಯಾಗುವ ವರ್ಷಾಂತ್ಯದವರೆಗೂ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿದ್ದ ಸದಸ್ಯರು, ಪೋಷಕರು ಮತ್ತು ಪ್ರಧಾನ ಶಾಲೆಯ ಎಸ್.ಡಿ. ಎಂ.ಸಿ. ಅಧ್ಯಕ್ಷರಾದ ನಾಗರತ್ನ ಹಾಗೂ ಶಿಕ್ಷಕರಾದ ಎ.ವಿ.ಗೀತಾರಾಣಿ, ರುದ್ರೇಶ್ , ಎಂ.ಆರ್. ರಂಗಾಮಣಿ, ಎಸ್.ಕೆ.ಪೂರ್ಣಿಮಾ, ಪಿ. ಮಧು, ಚಿದಾನಂದ್, ತೈಬಾ ಕೌಸರ್, ಸತ್ಯನಾರಾಯಣ ಮುರಳಿ, ಕೇಶವ ಮೂರ್ತಿ ಶಾಲೆಯ ಎಲ್ಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ