ಮಾಣಿ ಮಠದ ಸಮೀಪ ಗುಡ್ಡಕ್ಕೆ ಬೆಂಕಿ; ಸಾವಿರಾರು ಪುನರ್ಪುಳಿ ಗಿಡಗಳಿಗೆ ಹಾನಿ

Chandrashekhara Kulamarva
0


ಮಾಣಿ: ಬಂಟ್ವಾಳ ತಾಲೂಕಿನ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದ ವತಿಯಿಂದ ಮೂರು ವರ್ಷಗಳ ಹಿಂದೆ ನೆಟ್ಟಿದ್ದ ಸುಮಾರು ಒಂದು ಸಾವಿರ ಪುನರ್ಪುಳಿ ಗಿಡಗಳ ತೋಟಕ್ಕೆ ಸೋಮವಾರ ಅಪರಾಹ್ನ ಸುಮಾರು ಮೂರುವರೆ ಗಂಟೆ ಹೊತ್ತಿಗೆ ಆಕಸ್ಮಿಕವಾಗಿ ಬೆಂಕಿಬಿದ್ದಿದೆ. ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಬಿಸಿಲಿನ ಧಗೆಗೆ ಬೆಂಕಿ ಗುಡ್ಡಕ್ಕೆ ಹರಡಿಕೊಂಡಿತು. ಬಳಿಕ ಬಂಟ್ವಾಳ ಫೈರ್ ಸರ್ವಿಸ್ ನವರು ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.


ಫಲಭರಿತ ಸುಮಾರು 50 ಗಿಡಗಳು ಬೆಂಕಿಯ ಕೆನ್ನಾಲಗೆಗೆ ಸಿಕ್ಕಿ ಸುಟ್ಟು ಹೋಗಿವೆ. ಹತ್ತಿರದಲ್ಲೇ, ಮನೆಗಳು ಹಾಗೂ ಏರ್ಟೆಲ್ ನವರ ಟವರ್ ಇದ್ದು ಸುತ್ತಲೂ ಬೆಂಕಿ ಆವರಿಸಿದ್ದು ಹಾನಿಯಾಗಲಿಲ್ಲ. ಮಠದ ಆಡಳಿತ ಕ್ರಿಯಾಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ ಸ್ಥಳಕ್ಕಾಗಮಿಸಿ ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top