ಕನ್ನಡ ಭವನ ರೂವಾರಿ ಡಾ. ವಾಮನ್ ರಾವ್ -ಸಂಧ್ಯಾ ರಾಣಿ ದಂಪತಿಗೆ ಡಿಬಿಟಿಎ ಗೌರವ ಪ್ರಶಸ್ತಿ

Upayuktha
0


ಕಾಸರಗೋಡು: ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಸಭಾ ವೇದಿಕೆಯಲ್ಲಿ, ದ್ರಾವಿಡ ಭಾಷಾ ಟ್ರಾನ್ಸ್ಲೇಷನ್ ಅಸೋಸಿಯೇಷನ್ (ರಿ.)ಬೆಂಗಳೂರು ಮತ್ತು ಕನ್ನಡ ಭವನ ಸಂಯುಕ್ತ ಆಯೋಜನೆಯಲ್ಲಿ ನಡೆದ ಮಲಯಾಳಂ -ಕನ್ನಡ ಅನುವಾದ ಕಾರ್ಯಾಗಾರ ಕಾರ್ಯಕ್ರಮ ನಡೆಯಿತು. 


ಈ ಕಾರ್ಯಕ್ರಮದಲ್ಲಿ ಡಿ.ಬಿ.ಟಿ.ಎ. ಸಂಸ್ಥೆಯ ವತಿಯಿಂದ ಕಾಸರಗೋಡಿನಲ್ಲಿ ಕಳೆದ 24ವರ್ಷಗಳಿಂದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವ ಪ್ರತಿಜ್ಞಾ ಬದ್ದವಾದ ವಿವಿಧ ವಿಶಿಷ್ಟ ಕನ್ನಡಪರ ಕಾರ್ಯಕ್ರಮ ಮೂಲಕ ಇವರು ನಡೆಸುತ್ತಿರುವ ನಾಡ ನುಡಿಯ ಸೇವೆಯನ್ನು ಮಾನಿಸಿ ಇವರನ್ನು ಗೌರವಿಸಿ, ಸನ್ಮಾನ ಪ್ರಶಸ್ತಿಯನ್ನು ನೀಡಲಾಯಿತು. ಇವರು ನಡೆಸುತ್ತಿರುವ ಗ್ರಂಥಾಲಯ, ಸಾರ್ವಜನಿಕ ವಾಚನಾಲಯ ಸೇವೆ, "ಉಚಿತ ವಸತಿ ಸೌಕರ್ಯ "ಪುಸ್ತಕ ಪ್ರಕಾಶನ, ಮತ್ತಿತರರು ಕನ್ನಡ ಪರ ಸೇವೆಯನ್ನು ಕುರಿತು ಸಂಸ್ಥೆ ಹೆಮ್ಮೆ ವ್ಯಕ್ತಪಡಿಸಿತು.


ಡಿ.ಬಿ.ಟಿ.ಎ. ಅಧ್ಯಕ್ಷೆ ಡಾ. ಸುಷ್ಮಾ ಶಂಕರ್, ಉಪಾಧ್ಯಕ್ಷ ಕುಪ್ಪಮ್ ಯೂನಿವರ್ಸಿಟಿ ಪ್ರೊ. ಡಾ. ಬಿ. ಎಸ್. ಶಿವಕುಮಾರ್, ಕಾರ್ಯದರ್ಶಿ ಡಾ ರಾಕೇಶ್ ಸನ್ಮಾನ, ಪ್ರಶಸ್ತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ. ವಿ. ಕುಮಾರನ್ ಮಾಸ್ಟರ್, ಕನ್ನಡ ಪತ್ರಕರ್ತ ಸಂಘ ಅಧ್ಯಕ್ಷ ರವಿ ನಾಯ್ಕಾಪು ಡಾ. ವೆಂಕಟ್ರಮಣ ಹೊಳ್ಳ, ಬಿ. ಟಿ ಜಯರಾಮ್ ಉದುಮ, ಮಲಯಾಳಂ ಕವಿ, ಸಾಹಿತಿ ರವೀಂದ್ರನ್ ಪಾಡಿ, ಮುಂತಾದವರಿದ್ದರು.


"ಡಿ.ಬಿ.ಟಿ.ಎ. ಸಾಧನಾ ಸನ್ಮಾನ್ ಪ್ರಶಸ್ತಿ 2025" ಸ್ವೀಕರಿಸಿದ ವಾಮನ್ ರಾವ್ -ಸಂಧ್ಯಾ ರಾಣಿ ಟೀಚರ್, ಅಭಿನಂದನೆ, ಸನ್ಮಾನ, ಪ್ರಶಸ್ತಿಗಳು ಹೆಚ್ಚಿನ ಪ್ರೇರಣೆ ನೀಡುತ್ತದೆ ಎಂದು ಹೇಳಿದರು. ಕನ್ನಡ ಭವನ ಗೌರವ ಅಧ್ಯಕ್ಷ, ಪತ್ರಕರ್ತ ಪ್ರದೀಪ್ ಬೇಕಲ್ ಸ್ವಾಗತಿಸಿ, ಡಾ. ರಾಕೇಶ್ ಕಾರ್ಯಕ್ರಮ ನಿರ್ವಹಿಸಿ, ಕನ್ನಡ ಭವನ ಸಂಘಟನಾ ಕಾರ್ಯದರ್ಶಿ ರಾಜೇಶ್ ಕೋಟೆಕಣಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top