ದಾವಣಗೆರೆ: ಚಿತ್ರದುರ್ಗ ಜಿಲ್ಲಾ ಬಂಟರ ಸಂಘ ಮತ್ತು ದಾವಣಗೆರೆಯ ಕರಾವಳಿ ಮಿತ್ರ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಗರದ ಕುಂದುವಾಡ ರಸ್ತೆಯಲ್ಲಿರುವ ಡಾ|| ಶ್ಯಾಮಸುಂದರ ಶೆಟ್ಟಿ ಬಂಟರ ಭವನದ “ಕರಾವಳಿ ಸೌಧ” ಸಭಾಂಗಣದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಆಯೋಜಿಸಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬ್ರಹ್ಮಶ್ರೀ ವೇದಮೂರ್ತಿ ಪುರೋಹಿತರಾದ ನಾಗರಾಜ್ ಭಟ್ ಮತ್ತು ತಂಡದವರು ಪೂಜೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿಕೊಟ್ಟರು.
ಸಂಸದ ಡಾ|| ಪ್ರಭಾ ಮಲ್ಲಿಕಾರ್ಜುನ, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಡಾ. ಅಥಣಿ ವೀರಣ್ಣ, ಯಕ್ಷರಂಗದ ಅಧ್ಯಕ್ಷ ಮಲ್ಯಾಡಿ ಪ್ರಭಾಕರ ಶೆಟ್ಟಿ, ಬಂಟರ ಭವನದ ಅಧ್ಯಕ್ಷ ಡಾ. ಪ್ರಭಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಆಡಿಟರ್ ಉಮೇಶ್ ಶೆಟ್ಟಿ, ಡಾ|| ಸುರೇಂದ್ರ ಶೆಟ್ಟಿ, ಡಾ|| ಸುಕುಲ ಶೆಟ್ಟಿ, ಕರಾವಳಿ ಮಿತ್ರ ಮಂಡಳಿ ಮುಖ್ಯಸ್ಥ ಸವಿಡೈನ್ ಮಹೇಶ್ ಶೆಟ್ಟಿ, ಅಂಕಿತ್ ಮೋಲಿ, ಹರೀಶ್ ಶೆಟ್ಟಿ, ಸತೀಶ್ ಮೋಲಿ, ಯಕ್ಷಗಾನ ಕಲಾವಿದ ಬೇಳೂರು ಸಂತೋಷ್‌ಕುಮಾರ್ ಶೆಟ್ಟಿ, ಗೋಪಾಲ್ ಆಚಾರ್ ದಂಪತಿ, ಅಣಬೇರು ರಾಜಣ್ಣ ದಂಪತಿ, ಗಣೇಶ್ ಹುಲ್ಮನಿ, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕಿ ಜ್ಯೋತಿ ಗಣೇಶ್ ಶೆಣೈ, ನಾಗಭೂಷಣ್, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಸುರೇಂದ್ರ ಮೊಯ್ಲಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ