ದಾವಣಗೆರೆ: ಅಂಚೆ ಇಲಾಖೆಯ ಸಿಬ್ಬಂದಿಗೆ ಗೌರವ ಸಮರ್ಪಣೆ

Chandrashekhara Kulamarva
0



ದಾವಣಗೆರೆ: ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಮಹಿಳಾ ವಿಭಾಗದಿಂದ ಕಲಾಕುಂಚದಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಅಂಚೆ ಇಲಾಖೆಯ ಸಿಬ್ಬಂದಿಯ ಮಹಿಳೆಯರಿಗೂ ಸೇರಿದಂತೆ ಪುರುಷರಿಗೂ ಕನ್ನಡ ತಾಯಿ ಭುವನೇಶ್ವರಿ ಸ್ಮರಣಿಕೆ ಕೊಟ್ಟು ಗೌರವಿಸಲಾಯಿತು.


ಕಲಾಕುಂಚ ಸೇರಿದಂತೆ ನಮ್ಮ ವಿವಿಧ ಸಂಘಟನೆಗಳಿಗೆ ನಿರಂತರವಾಗಿ ಪ್ರಾಮಾಣಿಕವಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅಂಚೆ ಇಲಾಖೆಗೆ ಗೌರವ ಸಮರ್ಪಣೆ ಸಲ್ಲಿಸಿದ ನಗರದ ಜಯದೇವ ವೃತ್ತದ ಹತ್ತಿರ ಇರುವ ಜಯದೇವ ಅಂಚೆ ಶಾಖೆಯ ಸಭಾಂಗಣದಲ್ಲಿ ಇತ್ತೀಚೆಗೆ  ಸರಳ ಸಮಾರಂಭ ನಡೆಯಿತು.


ಅಂಚೆ ಪಾಲಕರಾದ ಸಿ.ವಿ.ಶಿವರಾಮ ಶರ್ಮ, ಮೇಲ್ವಿಚಾರಕ ಜ್ಯೋತಿ ಎಚ್.ಪಿ. ನಾಗೇಂದ್ರನಾಯ್ಕ ಬಿ., ಅಂಚೆ ಸಹಾಯಕ ಸುವರ್ಣ ಬಿ., ಗಜೇಂದ್ರಪ್ಪ ಡಿ.ಹೆಚ್., ಶ್ರೀನಿವಾಸ ಹುಬ್ಬಳ್ಳಿ, ಮೀನಾಕ್ಷಮ್ಮ ಎಸ್.ಡಿ., ಮುಖ್ಯ ಅಂಚೆ ಪೇದೆ ಭೀಮಪ್ಪ ಕೆ.ಸಿ., ಅಂಚೆ ಪೇದೆಗಳಾದ ಬಸವರಾಜಪ್ಪ ಎಚ್.ಎ., ಸಾವಿತ್ರಿ ಕೆ.ಎಂ., ಕಾವ್ಯ.ಎಸ್., ಖೈರುನ್ ಬೇಗಮ್, ಶೃತಿ.ಆರ್., ಪೂಜಾ.ಪಿ., ಪೂಜಾರ್ ಶಾಂತ, ಶೃತಿ.ಕೆ., ಬಹುಕಾರ್ಯ ಸಿಬ್ಬಂದಿ ಪ್ರೇಮಲತಾ ಎಚ್., ಸ್ವಾಮಿ.ಎಂ., ಪ್ರವೀಣ್ ಜಿಎ.ಕೆ., ಡಾಕ್ ಸೇವಕ್ ಸೀಮಾ ಬಾನು ಬಿ.ಎಸ್., ಸ್ವಾತಿ.ಎಚ್., ಕಿರಣ್‌ಕುಮಾರ್.ಎಸ್., ಮುಂತಾದವರು ಉಪಸ್ಥಿತರಿದ್ದರು.



إرسال تعليق

0 تعليقات
إرسال تعليق (0)
To Top