ಕಲಾಕುಂಚದ “ಅಂಚೆ ಕುಂಚ” ರಾಜ್ಯ ಮಟ್ಟದ ಉಚಿತ ಸ್ಪರ್ಧೆಯ ಫಲಿತಾಂಶ

Chandrashekhara Kulamarva
0



ದಾವಣಗೆರೆ: ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಪ್ರತೀ ವರ್ಷದಂತೆ ಈ ವರ್ಷವೂ ಮಹಾಶಿವರಾತ್ರಿ ಪ್ರಯುಕ್ತ 50 ಪೈಸೆ ಅಂಚೆ ಕಾರ್ಡಿನಲ್ಲಿ ಶಿವನ ಚಿತ್ರ ಬರೆಯುವ ರಾಜ್ಯ ಮಟ್ಟದ ಉಚಿತ ಸ್ಪರ್ಧೆಯ ಫಲಿತಾಂಶ ಈ ಕೆಳಗಿನಂತಿದೆ ವಯೋಮಾನದಂತೆ ವಿವಿಧ ಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಕಲಾಕುಂಚದ ಸಂಸ್ಥಾಪಕರು, ತೀರ್ಪುಗಾರರಲ್ಲಿ ಒಬ್ಬರಾದ  ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.


ಹಿರಿಯರ ವಿಭಾಗ ಪ್ರಥಮ ಬಹುಮಾನ ಶಿವಮೊಗ್ಗ ಜಿಲ್ಲೆಯ ಸಾಗರದ ರೇಖಾ ಶೆಣೈ, ದ್ವಿತೀಯ ಬಹುಮಾನ  ದಾವಣಗೆರೆಯ ಕವಿತಾ ಚೇತನ, ತೃತೀಯ ಬಹುಮಾನ ದಾವಣಗೆರೆ ಜಿಲ್ಲೆಯ ಹರಿಹರದ ಮಹಾಲಕ್ಷ್ಮಿ ಎಂ.ಪೂಜಾರ್, ಸಮಾಧಾನಕರ ಬಹುಮಾನ ದಾವಣಗೆರೆ ಜಿಲ್ಲೆ ಬನ್ನಿಕೋಡಿನ ಮೀನಾಕ್ಷಿ ಟಿ.ಸಿ. ಶಿವಮೊಗ್ಗದ ಭವ್ಯ ಸುಧಾಕರ ಜಗಮನೆ.


ಕಿರಿಯರ ವಿಭಾಗ ಪ್ರಥಮ ಬಹುಮಾನ ಬೆಂಗಳೂರಿನ ನವ್ಯ ಮನೋಹರ್ ಪೈ, ದ್ವಿತೀಯ ಬಹುಮಾನ  ಮೈಸೂರು ಜಿಲ್ಲೆಯ ಸೋಸಲೆಯ ಜಗದೀಶ ವಿ., ತೃತೀಯ ಬಹುಮಾನ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ತನುಶ್ರೀ ಶ್ರೀಕಾಂತ್ ಪಾಸ್ತೆ, ಸಮಾಧಾನಕರ ಬಹುಮಾನಗಳು ರಾಯಚೂರಿನ ಈಶನಿ, ಶ್ರೇಯಸ್, ಬೆಂಗಳೂರಿನ ವೈನವಿ ಬಿ.ಸಿ. ಪ್ರಾಥಮಿಕ ವಿಭಾಗ ಪ್ರಥಮ ಬಹುಮಾನ ಹುಬ್ಬಳ್ಳಿಯ ಸಾನ್ವಿ ಯರಗೊಪ್ಪ, , ದ್ವಿತೀಯ ಬಹುಮಾನ ಮಂಡ್ಯದ ವಿಷ್ಣುಪ್ರಸಾದ್, ತೃತೀಯ ಬಹುಮಾನ ಹಾವೇರಿ ಜಿಲ್ಲೆಯ ಹಿರೇಕೆರೂರಿನ ಗೌತಮಿ.ಡಿ.ಸಾನು, ಸಮಾಧಾನಕರ ಬಹುಮಾನಗಳು ಶಿವಮೊಗ್ಗ ಜಿಲ್ಲೆಯ ಚಿಲಕಾದ್ರಿಹಳ್ಳಿಯ ಸಾಯಿಗೋಕುಲ್, ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ನಾರಾಯಣ ಪೈ ಪಡೆದಿರುತ್ತಾರೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಪ್ರಕಟಿಸಿದ್ದಾರೆ.


ಸಂಸ್ಥೆಯ ಈ ರಾಜ್ಯ ಮಟ್ಟದ ಉಚಿತ ಸ್ಪರ್ಧೆಯ ನಿಯಮದಂತೆ ಯಾವುದೇ ಸಭೆ, ಸಮಾರಂಭ ಇಲ್ಲದೇ ಬಹುಮಾನ ವಿಜೇತರ ವ್ಯಾಟ್ಸಪ್‌ಗೆ ಅವರವರ  ಫಲಿತಾಂಶ ಅಭಿನಂದನಾ ಪತ್ರ ಕಳಿಸಲಾಗುವುದು ಹೆಚ್ಚಿನ ಮಾಹಿತಿಗೆ  ಮೊ. 9538732777 ಈ ಸನೀಹವಾಣಿಗೆ ಸಂಪರ್ಕಿಸಬಹುದು.



Post a Comment

0 Comments
Post a Comment (0)
To Top