'ಸರ್ ಸಿ ವಿ ರಾಮನ್ ಅವರಂತೆ ವಿಜ್ಞಾನದ ಮೂಲ ಸಂಶೋಧನೆಗಳತ್ತ ಚಿತ್ತಹರಿಸಬೇಕು'

Chandrashekhara Kulamarva
0


ಬಳ್ಳಾರಿ: “ಬೆಳಕಿನ ಚದರಿಕೆ ಮತ್ತು ರಾಮನ್ ಪರಿಣಾಮ ವಿಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟುಮಾಡಿದೆ. ರಾಮನ್ ಸ್ಪೆಕ್ಟ್ರೋಸ್ಕೋಪಿ ಲೇಸರ್ ರಾಮನ್ ಸ್ಪೆಕ್ಟ್ರಸ್ಕೋಪಿ ಇವು ಸಾವಿರಾರು ರಾಸಾಯನಿಕ ಸಂಯುಕ್ತಗಳ ಅಣು ರಚನೆಗಳ ಬಗ್ಗೆ ತಿಳಿಸಿಕೊಟ್ಟಿದೆ. ನೊಬೆಲ್ ಪುರಸ್ಕೃತ ವಿಜ್ಞಾನಿ ಸರ್ ಸಿ ವಿ ರಾಮನ್ ಅವರು ಭೌತವಿಜ್ಞಾನದಲ್ಲಿ ಬೆಳಕು ಮತ್ತು ಶಬ್ದ ತರಂಗಗಳ ಬಗ್ಗೆ ಸಂಶೋಧನೆಗಳನ್ನು ಕೈಗೊಂಡರು. ರಾಮನ್ ಅವರಂತೆ ಇಂದು ನಾವು ಕೂಡ ವಿಜ್ಞಾನದ ಮೂಲ ಸಂಶೋಧನೆಗಳತ್ತ ಚಿತ್ತಹರಿಸಬೇಕು” ಎಂದು ಕಿಷ್ಕಿಂದ ವಿಶ್ವವಿದ್ಯಾಲಯದ ರಿಸರ್ಚ್ ಅಂಡ್ ಇನೋವೇಷನ್ ಡೀನ್ ಮತ್ತು ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್.ಮಂಜುನಾಥ್ ಅವರು ತಿಳಿಸಿದರು


ಅವರು ಬಳ್ಳಾರಿಯ ಪ್ರತಿಷ್ಠಿತ ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್ ಆಯೋಜಿಸಿದ್ದ “ರಾಷ್ಟ್ರೀಯ ವಿಜ್ಞಾನ ದಿನ” ಕಾರ್ಯಕ್ರಮದಲ್ಲಿ ಮಾತನಾಡಿದರು.


ಹಾಗೆಯೇ ರಾಮನ್ ಎಫೆಕ್ಟ್ ಸಂಶೋಧನೆಯನ್ನು ಅಂತಿಮವಾಗಿ ಪ್ರಕಟಿಸಿದ ಕಾರಣ ಸದರಿ ದಿನವನ್ನು ಭಾರತದಲ್ಲಿ “ರಾಷ್ಟ್ರೀಯ ವಿಜ್ಞಾನ ದಿನ”ವಾಗಿ ಆಚರಿಸಲಾಗುತ್ತಿದೆ ಹಾಗೂ ಅವರ ಸಂಶೋಧನಾ ಪ್ರಬಂಧಗಳ ಬಗ್ಗೆ ಉಲ್ಲೇಖಿಸಿ ಸಂಶೋಧನಾ ರಂಗದಲ್ಲಿ ಅವರ ಕೊಡುಗೆಗಳು ಮತ್ತು ಬೆಳೆದು ಬಂದ ಹಾಗೆ ಅವರಿಗೆ ಸವಿವರವಾಗಿ ತಿಳಿಸಿದರು. 


ಕಾರ್ಯಕ್ರಮದ ಇನ್ನೊಬ್ಬ ಅತಿಥಿಯಾಗಿ ಆಗಮಿಸಿದ ಬಿಐಟಿಎಂ ರಿಸರ್ಚ್ ಅಂಡ್ ಇನೋವೇಷನ್ ಡೀನ್ ಡಾ. ಅನ್ನಂರಾಜು ಕಾಶಿ ವಿಶ್ವನಾಥ್ ಅವರು ರಾಮನ್ ಎಫೆಕ್ಟ್ ಬಗ್ಗೆ ಸುಧೀರ್ಘವಾಗಿ ವಿಚಾರಗಳನ್ನು ಹಂಚಿಕೊಂಡರು.ಕಾಲೇಜಿನ ಪ್ರಾಚಾರ್ಯರಾದ ಡಾ. ಯಡವಳ್ಳಿ ಬಸವರಾಜ್ ಅವರು ಸಂಶೋಧನೆಯ ಮಹತ್ವದ ಬಗ್ಗೆ ತಿಳಿಸಿದರು.ವೇದಿಕೆಯಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮಾಚಪ್ಪ, ಡಾ. ವಿಜಯಕುಮಾರ್ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ವಿವಿಧ ವಿಭಾಗ ಮುಖ್ಯಸ್ಥರಾದ ಡಾ.ಗುರುರಾಜ್, ಡಾ. ಸುರೇಶ್ ಡಾ. ಶೇಖ್‌ಮೀರ, ವಿದ್ಯಾರ್ಥಿಗಳು ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top