ಕಲಾಕುಂಚದಿಂದ ಯಶಸ್ವಿಯಾದ ದಾವಣಗೆರೆ ಗೃಹಿಣಿ ಸ್ಪರ್ಧೆ ಫಲಿತಾಂಶ

Upayuktha
0

ದಾವಣಗೆರೆ: ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಂಗ ಸಂಸ್ಥೆ ಕಲಾಕುಂಚ ಮಹಿಳಾ ವಿಭಾಗದ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇತ್ತೀಚಿಗೆ ನಗರದ ಕಲಾಕುಂಚ ಕಛೇರಿ ಸಭಾಂಗಣದಲ್ಲಿ  ಹಮ್ಮಿಕೊಳ್ಳಲಾದ “ದಾವಣಗೆರೆ ಗೃಹಿಣಿ ಸ್ಪರ್ಧೆ”ಯ ಫಲಿತಾಂಶ.


ಪ್ರಥಮ ಸ್ಥಾನ ಕವಿತಾ ಚೇತನ, ದ್ವಿತೀಯ ಸ್ಥಾನ ಸುಮಾ ಏಕಾಂತಪ್ಪ, ತೃತೀಯ ಸ್ಥಾನ ಸುಮಾ ಕೊಟ್ರೇಶ್ ಪಡೆದಿರುತ್ತಾರೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಜ್ಯೋತಿ ಗಣೇಶ್‌ಶೆಣೈ ತಿಳಿಸಿದ್ದಾರೆ.


ನೆನಪಿನ ಶಕ್ತಿ, ಆಶುಭಾಷಣ, ಲಿಖಿತ ಪರೀಕ್ಷೆ, ಪ್ರಶ್ನೋತ್ತರ, ಗಾದೆ ಮಾತು, ಜಾಣಗಣಿತ, ಜಾಣ ಒಗಟು, ಆಕರ್ಷಕ ಸಾಂಪ್ರಾದಾಯಕ ಉಡುಗೆ-ತೊಡುಗೆ ಸ್ಪರ್ಧೆ, ಸ್ವಯಂ ಪ್ರತಿಭೆ ಹೀಗೆ ಮುಂತಾದ ಸ್ಪರ್ಧೆಗಳ ತೀರ್ಪುಗಾರರಾಗಿ ಡಾ|| ಆರತಿ ಸುಂದರೇಶ್, ಡಾ|| ಮಂಗಳಾ ಶೇಖರ್, ಡಾ|| ನಿರ್ಮಲಾ ವಿಶ್ವನಾಥ್ ಕುಲಕರ್ಣಿ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ಸಂಧ್ಯಾ ಶ್ರೀನಿವಾಸ್, ಶಿಲ್ಪಾ ಉಮೇಶ್ ಮುಂತಾದವರು ಅಚ್ಚುಕಟ್ಟಾಗಿ, ಕಟ್ಟುನಿಟ್ಟಾಗಿ, ವಿವಿಧ ನಿಯಮಗಳೊಂದಿಗೆ ತೀರ್ಪುಕೊಟ್ಟರು. 


ಗೃಹಿಣಿ ಸ್ಪರ್ಧೆಯಲ್ಲಿ ಭಾಗವಹಿಸಿದ  ಸರ್ವರಿಗೂ ಕಲಾಕುಂಚ ಮುತ್ತೈದೆಯರು ಕನ್ನಡ ತಿಲಕವಿಟ್ಟು, ಕನ್ನಡ ಕಂಕಣಕಟ್ಟಿ, ಕನ್ನಡಾರತಿ ಬೆಳಗಿ ಗೌರವಿಸಿದರು.  ಎಲೆಬೇತೂರು ಶಾಖೆಯ ಅಧ್ಯಕ್ಷರಾದ  ಡಾ|| ನಿರ್ಮಲಾ ವಿಶ್ವನಾಥ್ ಕುಲಕರ್ಣಿಯವರು ಎಲ್ಲಾ ಮುತ್ತೈದೆಯರು ಸಾಂಪ್ರದಾಯದಂತೆ ಉಡಿತುಂಬಿ ಈ  ದಾವಣಗೆರೆ ಗೃಹಿಣಿ ಸ್ಪರ್ಧೆ ಸುಸಂಪನ್ನಗೊಳಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

Post a Comment

0 Comments
Post a Comment (0)
To Top