ಕೆನರಾ ಇಂಜಿನಿಯರಿಂಗ್ ಕಾಲೇಜಿಗೆ ಟಿಸಿಎಸ್ ಟೆಕ್‍ಬೈಟ್ಸ್ ಕ್ವಿಜ್ ಪ್ರಶಸ್ತಿ

Chandrashekhara Kulamarva
0


ಮಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಬೋರ್ಡ್ ಫಾರ್ ಐಟಿ ಎಜುಕೇಶನ್ ಸ್ಟ್ಯಾಂಡರ್ಡ್ಸ್‌  (ಬೈಟ್ಸ್) ಜಂಟಿಯಾಗಿ ಮಂಗಳೂರಿನಲ್ಲಿ ಆಯೋಜಿಸಿದ್ದ ಟಿಸಿಎಸ್ ಟೆಕ್‍ಬೈಟ್ಸ್ ನ 16ನೇ ಆವೃತ್ತಿಯ ಸ್ಪರ್ಧೆಯಲ್ಲಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ ನಿತಿನ್ ಬಿ.ಆರ್ ಪ್ರಶಸ್ತಿ ಗೆದ್ದಿದ್ದಾರೆ.


ದ್ವಿತೀಯ ಸ್ಥಾನ ಉಡುಪಿಯ ಎನ್‍ಎಎಎಎಂಐಟಿ ಪಾಲಾಗಿದೆ. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದವರಿಗೆ 12,000 ರೂಪಾಯಿ, ದ್ವಿತೀಯ ಸ್ಥಾನ ಪಡೆದವರಿಗೆ 10,000 ರೂಪಾಯಿ ಮೌಲ್ಯದ ವೋಚರ್ ಗಳನ್ನು ಪ್ರದಾನ ಮಾಡಲಾಯಿತು. ಫೈನಲ್ ಹಂತ ತಲುಪಿದ ಎಲ್ಲಾ ಸ್ಪರ್ಧಿಗಳಿಗೂ ಉಡುಗೊರೆ ವೋಚರ್ ಗಳನ್ನು ನೀಡಲಾಗಿದೆ.


ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‍ಮೆಂಟ್ ಸಂಸ್ಥೆಯ ಪ್ರಾಂಶುಪಾಲ ಡಾ. ಎಸ್.ಎಸ್. ಇಂಜಗನೇರಿ ಅವರು ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಮಂಗಳೂರಿನ ನಡೆದ ಈ ಪ್ರಾದೇಶಿಕ ಸುತ್ತಿನಲ್ಲಿ ಪ್ರಥಮ ಸ್ಥಾನ ಗಳಿಸಿದ ನಿತಿನ್ ಬಿಆರ್ ಅವರು ಮಂಗಳೂರನ್ನು ಪ್ರತಿನಿಧಿಸಿ ಏಪ್ರಿಲ್ 8, 2025ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಫೈನಲ್ ನಲ್ಲಿ ಭಾಗವಹಿಸಲಿದ್ದಾರೆ ಎಂದು ಟಿಸಿಎಸ್ ಬೆಂಗಳೂರಿನ ರೀಜನಲ್ ಹೆಡ್ ಸುನೀಲ್ ದೇಶಪಾಂಡೆ ಪ್ರಕಟಣೆಯಲ್ಲಿ ಹೇಳಿದ್ದಾರೆ.


ಮಂಗಳೂರು ವಿಭಾಗದ ಟೆಕ್ ಕ್ವಿಜ್ ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಮೊದಲಿಗೆ ಲಿಖಿತ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಆ ಸುತ್ತಿನಲ್ಲಿ ಆಯ್ಕೆಯಾದ ಆರು ಅಗ್ರ ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ತೆರಳಿದರು. ಈ ರಸಪ್ರಸ್ನೆಯು ಐದು ವಿಭಾಗಗಳನ್ನು ಒಳಗೊಂಡಿದ್ದು, ಈ ಕುತೂಹಲಕರ ಕ್ವಿಜ್‍ನಲ್ಲಿ ವಿದ್ಯಾರ್ಥಿಗಳು ತಮ್ಮ ತಂತ್ರಜ್ಞಾನ ಜ್ಞಾನವನ್ನು ಪ್ರದರ್ಶಿಸಿದರು.


إرسال تعليق

0 تعليقات
إرسال تعليق (0)
To Top