ಬೆಳ್ತಂಗಡಿ : ಗುರುವಾಯನಕೆರೆಯ ಶಿವಾಜಿನಗರ ವೇದವ್ಯಾಸ ಶಿಶು ಮಂದಿರಕ್ಕೆ ಬೆಳ್ತಂಗಡಿ ರೋಟರಿ ಸಂಸ್ಥೆಯ ವತಿಯಿಂದ ಧನ ಸಹಾಯವನ್ನು ಮಾಡಲಾಯಿತು. 50ಕ್ಕೂ ಹೆಚ್ಚು ಮಕ್ಕಳು ಪಠ್ಯೇತರ ಶಿಕ್ಷಣವನ್ನು ಪಡೆಯುತ್ತಿರುವ ಈ ಶಿಶು ಮಂದಿರಕ್ಕೆ ಬೆಳ್ತಂಗಡಿ ರೋಟರಿ ತಂಡ ಭೇಟಿ ನೀಡಿ ಪುಟಾಣಿಗಳಿಗೆ ಸಿಹಿ ಹಂಚುವ ಮೂಲಕ ಯೋಗಕ್ಷೇಮ ವಿಚಾರಿಸಿದರು.
ಈ ಸಂದರ್ಭದಲ್ಲಿ ಮಂದಿರದ ಆಡಳಿತ ವ್ಯವಸ್ಥೆಗೆ ಆರ್ಥಿಕ ಸಹಾಯದ ಅವಶ್ಯಕತೆ ಇದ್ದ ಬೆನ್ನಲ್ಲಿ, ರೋಟರಿ ಕ್ಲಬ್ ವತಿಯಿಂದ ಮಂದಿರದ ಸಿಬ್ಬಂದಿ ವರ್ಗದವರಿಗೆ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ 15 ಸಾವಿರದ ಚೆಕ್ ಹಸ್ತಾಂತರಿಸದರು.
ಈ ವೇಳೆ ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ಕುಮಾರ್ ರಾವೊ, ರೊಟೇರಿಯನ್ ತ್ರಿವಿಕ್ರಮ ಹೆಬ್ಬಾರ್ ಹಾಗು ಮಂದಿರದ ಮಾತಾಜೀ ಅಶ್ವೀನಿ ಮತ್ತು ಜಯಶ್ರೀ ಸೇರಿದಂತೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ