ಬಳ್ಳಾರಿ: ನಗರದ ಬಾಲಕಿಯರ ಸರಕಾರಿ ಪ್ರೌಢ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ಯಾಡ್ ಮತ್ತು ಪೆನ್ನುಗಳು ವಿತರಣೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಪರೀಕ್ಷೆಗೆ ಸಿದ್ಧತೆ ನಡೆಸುವಾಗ ಕಷ್ಟಪಟ್ಟು ಅಲ್ಲದೇ, ಇಷ್ಟಪಟ್ಟ ಅಭ್ಯಾಸ ಮಾಡಬೇಕು. ಯಾರು ಮೊಬೈಲ್ ಗೀಳಿಗೆ ಒಳಗಾಗಬೇಡಿ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು. ಉತ್ತಮ ಅಭ್ಯಾಸದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸುವ ಮೂಲಕ ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಜೆ .ಟಿ.ಫೌಂಡೇಶನ್ ಅಧ್ಯಕ್ಷ ತಿಮ್ಮಪ್ಪ ಜೋಳದರಾಶಿ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂಬುವುದು ಜೀವನ ಪ್ರಮುಖ ಹಂತವಾಗಿದೆ. ಆತ್ಮವಿಶ್ವಾಸದಿಂದ ಚೆನ್ನಾಗಿ ಓದಿ ಪರೀಕ್ಷೆ ಬರೆಯಲು ಮುಂದಾಗಬೇಕು ಎಂದರು. ಶಂಭುಲಿಂಗ ತಾತ ಜಂಗಮರ ಹೊಸಳ್ಳಿ ಮಠ ಮಾತನಾಡುತ್ತ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್ ಅಂದರೆ ಯಾರು ಸಹ ಮನನೊಂದುಕೊಳ್ಳದೆ ಮುಂದೆ ಸಾಗಬೇಕು. ಜೀವನದಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಬೆಣಕಲ್ಲು ನಾಗಲಿಂಗ ಸ್ವಾಮೀಜಿ, ಸಂಗನಕಲ್ಲು ವಿಜಯ್ ಕುಮಾರ್, ರವಿಕುಮಾರ್, ರೂಪನಗುಡಿ ಗೋವಿಂದ್, ಮಲ್ಲಿಕಾರ್ಜುನ ಕೆ.ವಿರಾಪುರ ಶಾಲೆಯ ಮುಖ್ಯೋಪಾಧ್ಯಯರಾದ ಬೈರಪ್ಪ. ಜೋಳದರಾಶಿ ಚಂದ್ರಶೇಖರ. ರಮೇಶ್. ಶೇಕ್ಷವಲಿ. ಓಂಕಾರಪ್ಪ. ಬಾಸ್ಕರ. ಶಿಕ್ಷಕ ಹರಿಪ್ರಸಾದ್.ಕೊಟ್ರೇಶ್. ಅನೂ ಸೂಯಮ್ಮ. ಕಪ್ಪಗಲೂ ಅಚಾರಿ ತಿಪ್ಪೇಸ್ವಾಮಿ ,ಮನೋಜ್, ವಿನೋದ್,ಮಲ್ಲಿಕಾರ್ಜುನ, ರುದ್ರಮುನಿ ಸ್ವಾಮಿ ಶೇಕ್ಷವಲಿ.ಸುಧಾಕರ ಹೆಗಡೆ. ಪಿ.ಡಿ.ಹಳ್ಳಿ ಶಿವು. ದೇವೆಂದ್ರ. ಚಂದ್ರ ಸೇರಿ ವಿದ್ಯಾರ್ಥಿನಿಯರು ಇತರರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ