ಬಳ್ಳಾರಿ: ಸಮಾಜದಲ್ಲಿ ಗಿಡ ನೆಡುವುದು, ಬೆಳಸುವುದು ಸಮಾಜ ಸುಧಾಕರ, ಪರಿಸರವಾದಿಗಳ ಕೆಲಸವಷ್ಟೇ ಅಲ್ಲ ಎಲ್ಲರೂ ಮನೆಗೊಂದು ಗಿಡ ನೆಟ್ಟು ಬೆಳೆಸಬೇಕು. ಹಣದಿಂದ ಆರೋಗ್ಯ ದೊರೆಯಲ್ಲ. ಗಿಡ ನೆಡಿ ಅದು ನಿಮ್ಮ ಆರೋಗ್ಯಕ್ಕೆ ಸಹಕಾರಿಯಾಗುತ್ತೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಸಚಿವ ಎಸ್.ಎನ್.ರುದ್ರೇಶ್ ಹೇಳಿದರು. ಅವರು ನಗರದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಹಾನಗಲ್ಲು ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನಿಂದ ಹಮ್ಮಿಕೊಂಡಿದ್ದ ಗ್ರೋಗ್ರೀನ್ ವಾಕಥಾನ್‌ಗೆ ಹೆಚ್.ಆರ್. ಗವಿಯಪ್ಪ ವೃತ್ತದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದರು.
ಬೇಸಿಗೆ ಬಂದಾಗ ಪರಿಸರದ ಬಗ್ಗೆ ನೆನೆಸಿಕೊಳ್ಳುತ್ತೇವೆ ನಾವು ಸಂಪಾದನೆ ಮಾಡಿರುವ ಮನೆ,ಕಾರ್, ಬಂಗ್ಲೆ ಉಳಿಯಬೇಕೆಂದರೆ ಪರಿಸರ ಉಳಿಯಬೇಕು ಹಸಿರು ಬೇಕು ಇಲ್ಲ ಎಂದರೆ ಬಿಸಿಲಿಗೆ ಸಾಯುವ ಪರಿಸ್ಥಿತಿ ಬರುತ್ತೆ. 44ರಿಂದ 46 ಸೆಲ್ಸಿಯಸ್ ತಾಪಮಾನ ಆಗಿದೆ ಬಳ್ಳಾರಿಯಲ್ಲಿ. ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ಗಿಡ ಮರಗಳಿಂದ ಉದುರಿದ ಎಲೆ ಸುಡಬೇಡಿ. ಅವು ಹಾಗೇ ಕೊಳೆತು ಗಿಡಗಳಿಗೆ ಗೊಬ್ಬರ ಆಗುತ್ತೆ ಒಟ್ಟಾರೆ ಪರಿಸರ ಚೆನ್ನಾಗಿದ್ದರೆ ಮಾತ್ರ ನಾವು ಚೆನ್ನಾಗಿರುತ್ತೇವೆ ಎಂಬುದನ್ನು ವಿದ್ಯಾರ್ಥಿ ಸಮೂಹ, ಜನತೆ ಅರಿಯಬೇಕು ಎಂದರು.
ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, ನಾವು ಗಿಡ ಮರ ಕಾಪಾಡಿದರೆ ಅವು ನಮ್ಮಆರೋಗ್ಯ ಕಾಪಾಡಲಿವೆ. ಗೋಗ್ರೀನ್ ಎಂಬುದು ಒಂದು ದಿನಕ್ಕೆ ಸೀಮಿತ ಬೇಡ ನಿತ್ಯವೂ ನಿಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದರು. ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಅರವಿಂದ ಪಾಟೀಲ್ ಮಾತನಾಡಿ ಬಳ್ಳಾರಿ ಜನತೆಗೂ ಸನ್ ಸ್ಟ್ರೋಕ್ ಆಗುವ ಪರಿಸ್ಥಿತಿ ಬಂದಿದೆ.
ಬಂಜೆತನ, ಕ್ಯಾನ್ಸರ್ ಹೆಚ್ಚಾಗುತ್ತಿರುವುದಕ್ಕೆ ಪ್ಲಾಸ್ಟಿಕ್ ಬಳಕೆ, ರಸಾಯನಿಕ ಬಣ್ಣಗಳು ಕಾರಣ ಆಗಿವೆ. ಅದಕ್ಕಾಗಿ ನಾವು ಅವನ್ನು ಬಿಟ್ಟು. ಹಸಿರನ್ನು ಬೆಳೆಸೋಣ ಎಂದರು. ಕಾರ್ಯಕಾರಿ ಸಮಿತಿ ಸದಸ್ಯ ಕೋರಿ ವಿರೂಪಾಕ್ಷಪ್ಪ ಮಾತನಾಡಿದರು. ವೃತ್ತದಲ್ಲಿನ ಬಸವೇಶ್ವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ವಿದ್ಯಾರ್ಥಿಗಳ ವಾಕಥಾನ್ ಗೆ ಚಾಲನೆ ನೀಡಲಾಯ್ತು.
ಇಲ್ಲಿಂದ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಫಲಕಗಳನ್ನು ಹಿಡಿದು, ಗಡಗಿ ಚೆನ್ನಪ್ಪ ಸರ್ಕಲ್, ಬೆಂಗಳೂರು ರಸ್ತೆ, ತೇರು ಬೀದಿ ಮೂಲಕ ಪುನಃ ಗವಿಯಪ್ಪ ವೃತ್ತಕ್ಕೆ ಬಂದು ತಲುಪಿದರು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಬಿ.ಜಡೇಸಿದ್ದನಗೌಡ, ಚಂದ್ರಶೇಖರ್ .ಪಿ, ಪ್ರಾಂಶುಪಾಲ ಬಿ.ಶ್ರೀಶೈಲಗೌಡ, ಎನ್.ಎಸ್.ಎಸ್.ಅಧಿಕಾರಿ ರಾಜೇಶ್ ಮತ್ತು ಸಿಬ್ಬಂದಿವರ್ಗ ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ