ಬಳ್ಳಾರಿ: ಯೋಜನಾ ಕಛೇರಿ ಕುವೆಂಪು ನಗರ ವಲಯದ ಕೊಳಗಲ್ಲು ಕಾರ್ಯಕ್ಷೇತ್ರದ ನಿವಾಸಿಗಳಾದ ಮಡಿವಾಳ ಈರಮ್ಮ ಅವರಿಗೆ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ 1 ಲಕ್ಷದ 15 ಸಾವಿರ ವೆಚ್ಚದ ವಾತ್ಸಲ್ಯ ಮನೆ ನಿರ್ಮಾಣದ ಗೃಹ ಪ್ರವೇಶವನ್ನು ಮಾಜಿ ಶಾಸಕರು ಸೋಮಶೇಖರ್ ರೆಡ್ಡಿಯವರು ಉದ್ಘಾಟಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿಗಳು ಪೂಜ್ಯ ಡಾ// ಡಿ. ವೀರೇಂದ್ರ ಹೆಗ್ಗಡೆಯವರು ಸಮಾಜದಲ್ಲಿ ಅತೀ ದುರ್ಬಲ ಸ್ಥಿತಿಯಲ್ಲಿರುವ ಕಡು ಬಡವರಿಗೆ ಮುಪ್ಪಿನ ಕಾಲದಲ್ಲಿ ಅಸಹಾಯಕ ಸ್ಥಿತಿಯಲ್ಲಿರುವ ಸದಸ್ಯರು ಗುರುತಿಸಿ ಅಂತವರಿಗೆ ಅವರ ಜೀವನಕ್ಕೆ ಉಪಯುಕ್ತವಾದ ಆರೋಗ್ಯಕರ ಸುರಕ್ಷಿತ ವಾತ್ಸಲ್ಯ ಮನೆ ನಿರ್ಮಾಣ ಮಾಡಿಕೊಡುವುದಲ್ಲದೆ ಪ್ರತಿ ತಿಂಗಳು 1000 ₹ ಮಾಶಾಸನವನ್ನು ನೀಡಿ ಪೌಷ್ಟಿಕ ಆಹಾರವನ್ನು ಹೊದಗಿಸುತ್ತಿರುವ ಸಂಸ್ಥೆ ಎಂದರೆ ಅದುವೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಎಂದು ವಾತ್ಸಲ್ಯ ಮನೆ ಗೃಹ ಪ್ರವೇಶದ ಸಂದರ್ಭದಲ್ಲಿ ಮಾಜಿ ಶಾಸಕರು ಸೋಮಶೇಖರ್ ರೆಡ್ಡಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಜೆ ಚಂದ್ರಶೇಖರ:- ಕಲ್ಯಾಣ ಕರ್ನಾಟಕ ಕೊಪ್ಪಳ ವಿಭಾಗದ ಪ್ರಾದೇಶಿಕ ನಿರ್ದೇಶಕರು ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಮಾತೃಶ್ರೀ ಡಾ/ ವೀ. ಹೇಮಾವತಿ ಅಮ್ಮನವರು ಅಧ್ಯಕ್ಷತೆಯಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಜನರಲ್ಲಿ ಪರಿಸರ ಸಂರಕ್ಷಣಾ ಪ್ರಜ್ಞೆ,ಕುಟುಂಬ ಮತ್ತು ವಯಕ್ತಿಕ ಶುಚಿತ್ವ ಬಗ್ಗೆ, ಪೌಷ್ಟಿಕ ಆಹಾರ ಪದಾರ್ಥಗಳ ಬಳಕೆಯ ಬಗ್ಗೆ, ಮಕ್ಕಳ ಆರೋಗ್ಯ ಹಾಗೂ ಶಿಕ್ಷಣ, ಹಣಕಾಸಿನ ನಿರ್ವಹಣೆ ಬಗ್ಗೆ. ದುರ್ಬಲ ವರ್ಗದ ಮಹಿಳೆಯರಿಗೆ ಕುಟುಂಬದ ನಿರ್ವಹಣೆ ಬಗ್ಗೆ ಅರಿವು ಮೂಡಿಸುವ ಮೂಲಕ ರಾಜ್ಯದಲ್ಲಿ ಗಣ್ಯರಿಂದ ಉತ್ತಮ ಪ್ರಶಂಸೆಯನ್ನು ಪಡೆಯುತ್ತಿದೆ ಎಂದು ವಾತ್ಸಲ್ಯ ಮನೆ ಗೃಹ ಪ್ರವೇಶದ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀನಿವಾಸ ಮೋತ್ಕರ್, ಬಿಜೆಪಿ ಪಕ್ಷದ ಹಿರಿಯ ಮುಖಂಡರು , ಬಳ್ಳಾರಿ-2 ಯೋಜನಾ ಕಛೇರಿಯ ಕ್ಷೇತ್ರ ಯೋಜನಾಧಿಕಾರಿಗಳು ಸತೀಶ್ ಜಿ., ವಲಯದ ಮೇಲ್ವಿಚಾರಕರು ಜ್ಞಾನವಿಕಾಸ ಸಮನ್ವಯ ಅಧಿಕಾರಿಗಳು ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸ್ವ ಸಹಾಯ ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ