ಬಳ್ಳಾರಿ: ತಾಲೂಕಿನ ಚೇಳ್ಳಗುರ್ಕಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜೆ.ಟಿ.ಫೌಂಡೇಶನ್ ಹಾಗೂ ಲಕ್ಷ್ಮಿ ವೆಂಕಟೇಶ್ವರ ಫಿಲ್ಲಿಂಗ್ ಸ್ಟೇಷನ್ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು.
ಇದೇ ವೇಳೆ ಮಾತನಾಡಿದ ಜೆ.ಟಿ.ಫೌಂಡೇಶನ್ ಮುಖ್ಯಸ್ಥ ತಿಮ್ಮಪ್ಪ ಜೋಳದರಾಶಿ, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಯಾರಿಗೂ ಕಡಿಮೆಯಲ್ಲ. ದೇಶದಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿದವರೂ ಸಹ ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ. ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂದು ತಿಳಿಸಿದರು.
ಪ್ರತಿ ವರ್ಷದಂತೆ ಈ ಬಾರಿಯೂ ಎಸ್ಸೆಸ್ಸೆಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ಯಾಡ್ ಹಾಗೂ ಪೆನ್ನುಗಳನ್ನು ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರೋತ್ಸಾಹ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.
ಹಿರಿಯ ಪತ್ರಕರ್ತರು ಶಶಿಧರಮೇಟಿ, ಹಾಗೂ ಕೆ.ಎಮ್ ಮಂಜುನಾಥ ವಿಜಯಕುಮಾರ್ ಸಂಗನಕಲ್ಲು, ತಾ.ಪಂ.ಸದಸ್ಯ ರೂಪನಗುಡಿ ಗೋವಿಂದಪ್ಪ, ಮಾಜಿ ಯೋಧ ಈಶ್ವರ ರೆಡ್ಡಿ, ಭೀಮೇಶಸ್ವಾಮಿ, ಜೋಳದರಾಶಿ ತಿಕ್ಕಣ್ಣ, ಚಂದ್ರಶೇಖರ ರಮೇಶ್ ಮನೋಜ ಶಿವು ಪಿಡಿ ಹಳ್ಳಿ ಮಣಿಕಂಠ ಯಾಳ್ಪಿ ಚಂದ್ರ ರೂಪನಗುಡಿ ಗ್ರಾಪ ಅಧ್ಯಕ್ಷರುಗಳಾದ ನಾಗರಾಜ್, ನಾರಾಯಣಸ್ವಾಮಿ ಮಲ್ಲಿಕಾರ್ಜುನ ಬಿ.ಎರಿಸ್ವಾಮಿ, ಮಲ್ಲಿಕಾರ್ಜುನ, ರವಿ ಸಂಗನಕಲ್ಲು, ರುದ್ರಮುನಿಸ್ವಾಮಿ, ಸಣ್ಣ ಆಂಜಿನೇಯಲು, ಗವಿಸಿದ್ದಪ್ಪ, ವಕೀಲರು ನಾರಾಯಣಸ್ವಾಮಿ, ಶೇಕ್ಷಾವಲಿ, ಸುಧಾಕರ ಹೆಗಡೆ, ತಿಪ್ಪೇಸ್ವಾಮಿ, ಈ ದಿನ 6 ಸರಕಾರಿ ಶಾಲೆಗಳು ಚೆಳ್ಳಗುರ್ಕಿ ರೂಪನಗುಡಿ ಕುಂಟನಹಾಳ್ ಕೆ.ವೀರಾಪುರ ಶಿಡಿಗಿನ ಮೊಳ ಹಗರಿ ಪಾರಮ್ 6 ಶಾಲೆಗಳಿಗೆ ಪರೀಕ್ಷೆ ಪ್ಯಾಡ್ ಹಾಗೂ ಪೆನ್ನು ಗಳನ್ನು ವಿತರಿಸಿದರು ಈ ಸಂದರ್ಭ ದಲ್ಲಿ ಆರು ಶಾಲೆಯ ಮುಖ್ಯಗುರುಗಳು ಶಾಲಾ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಮುನ್ನ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಒಳಿತಾಗಲಿ ಎಂದು ಶ್ರೀಕ್ಷೇತ್ರ ಚೇಳ್ಳಗುರ್ಕಿಯ ಎರಿಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ