ಪಾಕ್ ಪ್ರೇಮಿಗಳ ಅಂಗಡಿಗಳಿಗೆ ಹೋಗಬೇಡಿ, ಹಲಾಲ್ ಅಂಗಡಿಗಳಲ್ಲಿ ಮಾಂಸ ಖರೀದಿ ಮಾಡಬೇಡಿ-ಪ್ರಮೋದ್ ಮುತಾಲಿಕ್

Upayuktha
0



ಬಳ್ಳಾರಿ: ಇದೇ ತಿಂಗಳ 30  ರಂದು ಆಚರಿಸುವ ಯುಗಾದಿ ಮತ್ತು ಎಪ್ರಿಲ್ 6 ರಂದು ಆಚರಿಸುವ ರಾಮನವಮಿಯನ್ನು ನೀವು ಹಲಾಲ್ ಮುಕ್ತವಾಗಿ ಆಚರಣೆ ಮಾಡಂಬೇಕು. ಗೋ ಹತ್ಯೆ ಮಾಡುವವರ ಕಡೆಯಿಂದ ಯಾವುದೇ ವಸ್ತು ಖರೀದಿ ಮಾಡಬೇಡಿ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ ಹಿಂದುಗಳಿಗೆ ಕರೆ ನೀಡಿದ್ದಾರೆ. 


ನಗರದ ಗೆಸ್ಡ್ ಹೌಸ್‌ನಲ್ಲಿ ಲವ್ ಜಿಹಾದ್ ಕೃತಿಯ ಎರಡನೇ ಆವೃತ್ತಿ ಬಿಡುಗಡೆ ಮಾಡಿ ಪತ್ರಕರ್ತರೊಂದಿಗೆ ಮಾತನಾಡಿದರು. ದೇಶದಲ್ಲಿರುವ ಪಾಕ್ ಪ್ರೇಮಿಗಳ ಅಂಗಡಿಗಳಿಗೆ ಹೋಗಬೇಡಿ  ಹಲಾಲ್ ಅಂಗಡಿಗಳಲ್ಲಿ ಮಾಂಸ ಖರೀದಿ ಮಾಡಬೇಡಿ ಎಂದರು. ಕೇರಳ ಕೋರ್ಟನಲ್ಲಿ ಲವ್ ಜಿಹಾದ್‌ನ ಐದು ಪ್ರಕರಣದಲ್ಲಿ ಶಿಕ್ಷೆ ಆಗಿದೆ. ಮೂರು ರಾಜ್ಯಗಳಲ್ಲಿ ಕಾನೂನು ರಚನೆಗೊಂಡಿದೆ. ಜಗತ್ತನ್ನೇ ಇಸ್ಲಾಂ ಮಾಡುವ ಗುರಿ ಇದ್ದು ಅದಕ್ಕಾಗಿ ಜನಸಂಖ್ಯೆ ಹೆಚ್ಚಳ ಮಾಡಲು ಈ ಲವ್ ಜಿಹಾದ್ ನಡೆಸುತ್ತಿದ್ದಾರೆ. 


ಮುಸ್ಲೀರು ತಮ್ಮ  ಹೆಸರು ಬದಲಿಸಿಕೊಂಡು  ಹಿಂದು ಹುಡಿಗಿಯರನ್ನು ಪ್ರೀತಿಸುತ್ತಾರೆ. ಇದನ್ನು ತಡೆಯುವ ಕೆಲಸ ಶ್ರೀರಾಮಸೇನೆ ತಡೆಯುವ ಪ್ರಯತ್ನ ನಡೆಯುತ್ತಿದೆ ಕಳೆದ ಎರೆಡು ದಶಕಗಳಿಂದ ಅಂದರು. ಮತಾಂತರಗೊಂಡಿದ್ದ 4700 ಹುಡುಗಿರನ್ನು ಹಿಂದು ದರ್ಮಕ್ಕೆ ಹಿಂದಕ್ಕೆ ಕರೆತಂದಿದ್ದಾವೆ. ಸಹಾಯವಾಣಿ ತೆರೆದಿದ್ದು ದಿನಾಲು 20 ರಿಂದ 25 ಕರೆಗಳು ಬರುತ್ತವೆ.  


ಮಹಿಳೆಯರು ಕಾಣೆಯಾಗಿದ್ದಾರೆಂದು. ಲಂಡನ್ ನಲ್ಲಿ ಮೂರು ಸಾವಿರ ಹುಡುಗಿಯರನ್ನು ರೇಪ್ ಮಾಡಿ ಮತಾಂತರ ನಡೆದಿದೆಂದ ಅವರು, ಮುಸ್ಲಿಂ ತುಷ್ಟೀಕರಣದ ಮೂಲಕ ಕಾಂಗ್ರೆಸ್ ಭಯೋತ್ಪಾದಕರನ್ನು ಬೆಂಬಲಿಸುತ್ತಿದೆಂದರು. ಹಾವೇರಿ ಜಿಲ್ಲೆಯ ಸ್ವಾತಿಯನ್ನು ಪ್ರೀತಿ ಮಾಡಿ ಕೊಲೆ ಮಾಡಿದ ನಯಾಜ್ ನನ್ನು ಬಂಧಿಸಿದೆ. ಹಿಂದು ಹೆಣ್ಣು ಮಕ್ಕಳ ಸುರಕ್ಷತೆಗಾಗಿ ನೂರು ಕಡೆ ತ್ರಿಶೂಲ ದೀಕ್ಷೆ ತರಬೇತಿ ಮಾಡಲು ನಿಶ್ಚಯಿಸಿದ್ದು. ಈಗಾಗಲೇ ಎಂಟು ಕಡೆ ಮಾಡಿದೆ. ಬಳ್ಳಾರಿಯಲ್ಲಿಯೂ ತ್ರಿಶೂಲ ದೀಕ್ಷೆ ಮಾಡಲಿದೆಂದರು.


ಮುಸ್ಲಿಂರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವುದರ ವಿರುದ್ದ ತಾವು ನ್ಯಾಯಾಲಯಕ್ಕೆ ಹೋಗುವದಾಗಿ ಹೇಳಿದರು. ಹೆಣ್ಣುಮಕ್ಕಳಿಗೆ ಲವ್ ಜಿಹಾದ್ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಹಣದ ಆಸೆ ತೋರಿಸಿ ಲವ್ ಜಿಹಾದ್ ನಡೆಯುತ್ತಿದೆ. ಅದಕ್ಕಾಗಿ ನಮ್ಮ ಸಂಸ್ಕಾರ ತಿಳಿಸಲಿದೆ. ಕ್ರಿಶ್ಚಿಯನ್ ನಿಂದಲೂ ಮತಾಂತರ ನಡೆಯುತ್ತಿದೆ ಎಂದು ಸಾಧನಾ ಹಿರೇಮಠ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಕೆ.ಆರ್.ಮಧುಕುಮಾರ್, ಗುರುರಾಜ್, ಕೆ.ಶ್ಯಾಮಸುಂದರ್, ವಿಷ್ಣುವರ್ಧನರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top