ಬೆಂಗಳೂರು: ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಸುಬುಧೇಂದ್ರತೀರ್ಥರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕ ಆರ್.ಕೆ.ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ರಾಘವೇಂದ್ರ ಸ್ವಾಮಿಗಳವರ ವರ್ಧಂತಿ ಉತ್ಸವದ ಅಂಗವಾಗಿ ಗುರುರಾಯರ ಬೃಂದಾವನಕ್ಕೆ ಫಲ ಪಂಚಾಮೃತ ಅಭಿಷೇಕ ಮತ್ತು ವಿಶೇಷವಾಗಿ "ಲಕ್ಷ ಪುಷ್ಪಾರ್ಚನೆ"ಯನ್ನು ಅಷ್ಟೋತ್ತರ ಸಹಿತ ಪಾರಾಯಣದೊಂದಿಗೆ, ಮಠದ ಧರ್ಮಾಧಿಕಾರಿ ಕೃಷ್ಣ ಗುಂಡಾಚಾರ್ಯರು ಮತ್ತು ಅರ್ಚಕರಾದ ರಾಮಚಂದ್ರಾಚಾರ್ಯ, ಕೃಷ್ಣಾಚಾರ್ಯ ವೃಂದದಿಂದ "ಪುಷ್ಪಾರ್ಚನೆ" ನೆರವೇರಿತು ಎಂದು ಶ್ರೀಮಠದ ಪುರೋಹಿತರಾದ ನಂದಕಿಶೋರಾಚಾರ್ಯರು ತಿಳಿಸಿದರು.
ತದನಂತರ ಡಾ.ವೆಂಕಟನರಸಿಂಹಾಚಾರ್ಯರಿಂದ "ಶ್ರೀ ರಾಘವೇಂದ್ರ ವಿಜಯ" ಪ್ರವಚನ ಸ್ವರ್ಣ ಸಿಂಹಾಸನದಲ್ಲಿ ಪ್ರಹ್ಲಾದರಾಜರ ಮೂರ್ತಿಯನ್ನು ಇರಿಸಿ ಶ್ರೀಮಠದಿಂದ ಗುರು ಪಾದಪೂಜೆ, ಕನಕಾಭಿಷೇಕ ಮತ್ತು ಮಹಾಮಂಗಳಾರತಿಯೊಂದಿಗೆ ಕಾರ್ಯಕ್ರಮವು ನೆರವೇರಿತು.
ಈ ಉತ್ಸವದಲ್ಲಿ ವಿಶೇಷ ಚೆಂಡೆ ವಾದನ ಆಕರ್ಷಣೀಯವಾಗಿತ್ತು. ಸೇವಾ ಕರ್ತೃಗಳಿಗೆ ಮತ್ತು ಭಕ್ತರಿಗೆ ಸಂಕಲ್ಪವನ್ನು ಮಾಡಿಸಿ ಶೇಷವಸ್ತ್ರ ಗುರು ರಾಯರ ಪಾದುಕೆ, ಫಲ ಮಂತ್ರಾಕ್ಷತೆ ಪ್ರಸಾದ ರೂಪವಾಗಿ ಕೊಡಲಾಯಿತು. ಚಿತ್ರನಟಿ ಪ್ರೇಮಾ, ರಿಪಬ್ಲಿಕ್ ಕನ್ನಡ ವಾಹಿನಿಯ ವಾರ್ತಾ ನಿರೂಪಕ ಶ್ರೀಪಾದ ಪಾಟೀಲ್ ಮುಂತಾದ ಗಣ್ಯ ಆಗಮಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ