ಪ್ಲಾಸ್ಟಿಕ್ ನಿರ್ಮೂಲನೆಯತ್ತ ಒಂದು ಉದಾತ್ತ ಹೆಜ್ಜೆ

Upayuktha
0


ಪ್ಲಾಸ್ಟಿಕ್ ನಿರ್ಮೂಲನೆ ಜೊತೆಗೆ ಉಪಾಹಾರ ವಿತರಣಾ ಬ್ಯಾಂಕ್ ಜೊತೆಗೆ ದೇವಾಲಯಗಳಲ್ಲಿ ಪೇಪರ್ ಕಪ್ ತಟ್ಟೆ ಶಾಶ್ವತ ನಿಲ್ಲಿಸಬೇಕೆಂಬ ಯೋಜನೆಯಡಿಯಲ್ಲಿ ಕಟ್ಟು ನಿಟ್ಟಾಗಿ ಬಳಕೆ ಮಾಡುವ ದೇವಾಲಯಗಳಿಗೆ ಶಾಶ್ವತ ಲೋಟಗಳನ್ನು ನೀಡಲಾಗುತ್ತಿದೆ.


ಇದುವರೆಗೆ ಬೆಳಂದೂರು ಮತ್ತು ದೊಡ್ಡ ಹೊನ್ನೆ ಗಣಪತಿ ದೇವಾಲಯಗಳಿಗೆ ಒಟ್ಟು 3700ರೂ. ವೆಚ್ಚದಲ್ಲಿ ಪ್ರಧಾನ ಕಾರ್ಯದರ್ಶಿ ತಲಾ 50 ಲೋಟ ಒಟ್ಟು 100 ಲೋಟ ನೀಡಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಬಿ.ಆರ್ ಶ್ರೀಕಂಠಯ್ಯ ಹಿರಿಯ ಸದಸ್ಯರು ಸುಮಾರು 3500 ರೂ ವೆಚ್ಚದಲ್ಲಿ 100 ಲೋಟಗಳನ್ನು ಮುಳವಳ್ಳಿ ದೇವಾಲಯಕ್ಕೆ ನೀಡಿದ್ದಾರೆ. ಮಾರ್ಚ್ ತಿಂಗಳು ಕೊರೆಕಲ್ಲು ಚಾಮುಂಡೇಶ್ವರಿ ದೇವಾಲಯಕ್ಕೆ 50 ಉಪಾಹಾರ ತಟ್ಟೆ 50 ಲೋಟಗಳನ್ನು 4250 ರೂ. ವೆಚ್ಚದಲ್ಲಿ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷ ಶಶಿಧರ್ ಹಾಗೂ ಶ್ರೀಕೃಷ್ಣ ಅವರು ನೀಡಿದ್ದಾರೆ.


ನಮ್ಮ ಸದಸ್ಯರು ಅಂತಹ ದೇವಾಲಯ ಗುರುತಿಸಿ ಪ್ರಾಯೋಜಕತ್ವ ನೀಡಿ ಈ ಯೋಜನೆ ಮುಂದುವರೆಸುವ ಆಶಯ ಜಾಗೃತಗೊಳಿಸುವ ಯೋಜನೆಗೆ ಅಭಿಯಾನಕ್ಕೆ ಕೈ ಜೋಡಿಸಿ ಒಂದು ಹೊಸ ಐತಿಹಾಸಿಕ ಹೆಜ್ಜೆಗೆ ನಮ್ಮ ಸಂಘಟನೆ ಸಾಕ್ಷಿಯಾಗಲಿ. ಪ್ರಾಯೋಜಕತ್ವ ನೀಡಿದ ಎಲ್ಲರಿಗೂ ಧನ್ಯವಾದಗಳು ಅನಂತ ಕೃತಜ್ಞತೆಗಳು. ಇಂದಿನ ಕಾರ್ಯಕ್ರಮ ಒಂದು ಸಣ್ಣ ಜಾಗೃತಿ ಅಭಿಯಾನ ದಂತೆ ನಡೆದು ಸಂತಸ ತಂದಿತು. ವ್ಯವಸ್ಥೆ ಮಾಡಿದ ರಾಘವೇಂದ್ರ ರಾವ್, ಕೆ.ಎಸ್.ಕೆ.ಮೂರ್ತಿಯವರಿಗೆ ವಂದನೆಗಳು.


ಪ್ರಧಾನ ಕಾರ್ಯದರ್ಶಿ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ‌ ಶೃಂಗೇರಿ.

ಕೊರೇಕಲ್ ಕೃಷ್ಣಮೂರ್ತಿ, ಶೃಂಗೇರಿ.


***


ಪ್ಲಾಸ್ಟಿಕ್ / ಪೇಪರ್ ಲೋಟ, ಕಪ್, ಚಮಚ, ತಟ್ಟೆಗಳನ್ನು ಬಳಸದಿರುವ ಆಂದೋಲನ ಸ್ವಲ್ಪ ದೊಡ್ಡ ಮಟ್ಟದಲ್ಲೇ ಆಶಾದಾಯಕವಾಗಿ ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ ಸುತ್ತಮುತ್ತಲಿನಲ್ಲಿ ನೆಡೆಯುತ್ತಿದೆ. 


ಈ ಬಾರಿಯ ರಾಮ ನವಮಿಗೆ ಬಹುತೇಕ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ / ಪೇಪರ್ ಲೋಟ, ಕಪ್, ಚಮಚ, ತಟ್ಟೆಗಳನ್ನು ಬಳಸದಿರುವ ನಿರ್ಧಾರ ಕೈಗೊಳ್ಳಲಾಗುತ್ತಿದೆ.


ಅಷ್ಟರಮಟ್ಟಿಗೆ, ಲಕ್ಷಾಂತರ ಪ್ಲಾಸ್ಟಿಕ್ / ಪೇಪರ್ ಲೋಟ, ಕಪ್, ಚಮಚ, ತಟ್ಟೆಗಳು ತ್ಯಾಜ್ಯವಾಗಿ ಈ ಬಾರಿಯಿಂದ ಪರಿಸರ ಸೇರುವುದು ಕಮ್ಮಿಯಾಗುತ್ತಿದೆ.


ರಾಮನವಮಿ, ರಂಜಾನ್, ಗುಡ್ ಫ್ರೈಡೆಗಳಲ್ಲಿ ನಾವೂ ಪ್ಲಾಸ್ಟಿಕ್ / ಪೇಪರ್ ಲೋಟ, ಕಪ್, ಚಮಚ, ತಟ್ಟೆಗಳನ್ನು ನಿರಾಕರಿಸೋಣ. 


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top