ಜ್ಞಾನಸ್ವರೂಪಿ‌ ಶಿವಾರಾಧನೆಯಿಂದ ಸಮರಸ ಜೀವನ: ಒಡಿಯೂರು ಶ್ರೀಗಳು

Chandrashekhara Kulamarva
0

ಬಂಟ್ವಾಳ: ಶಿವತತ್ವ ಶ್ರೇಷ್ಠವಾದುದು. ಬೇರೆಬೇರೆ ಹೆಸರಿನಲ್ಲಿ ನಮ್ಮೊಳಗೆ ಅಡಗಿದ್ದಾನೆ. ಜ್ಞಾನ ಸ್ವರೂಪಿಯಾದ ಶಿವನನ್ನು‌ ಅರಿತಾಗ ಸಮರಸದ ಬದುಕಿನೊಂದಿಗೆ ಜೀವ ಮತ್ತು ದೇವರ ಸಂಬಂಧ ಅಡಕವಾಗಿದೆ ಎಂದು ಒಡಿಯೂರು ಶ್ರೀ ಗುರು ದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.


ಅವರು ಬಿ.ಸಿ ರೋಡಿನಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿದ್ಯಾಲಯ ವತಿಯಿಂದ ಏರ್ಪಡಿಸಲಾದ ಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗ ದರ್ಶನದ ಸಮಾರೋಪ‌ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.


ಅತಿಥಿಗಳಾಗಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ತಹಶಿಲ್ದಾರ್ ಡಿ. ಅರ್ಚನಾ ಭಟ್, ಉಪ ತಹಶೀಲ್ದಾರ್ ನವೀನ ಕುಮಾರ್, ಡಾ. ವಿಶ್ವನಾಥ ನಾಯಕ್ ಪಾಣೆಮಂಗಳೂರು, ನರಿಕೊಂಬು ಗ್ರಾ.ಪಂ. ಅಧ್ಯಕ್ಷ  ಸಂತೋಷ ಕುಮಾರ್, ಡಾ. ಬಿ.ಬಾಲಚಂದ್ರ ಶೆಟ್ಟಿ,ಶ್ವೇತಾ ಕಾಮತ್ ಪಾಣೆಮಂಗಳೂರು, ಪ್ರಶಾಂತ ಕುಮಾರ್ ಶೆಟ್ಟಿ ಅಗರಿ, ಡಾ. ರಮೇಶಾನಂದ ಸೋಮಯಾಜಿ ಉಪಸ್ಥಿತರಿದ್ದರು.


ರಾಜಯೋಗಿನಿ ವಿಶ್ವೇಶ್ವರಿ ಅಕ್ಕ ಈಶ್ವರೀಯ ಸಂದೇಶ ನೀಡಿ ಶಿವಯೋಗದಿಂದ ಸಕಲ ರೋಗ ನಿವಾರಣೆಯಾಗುತ್ತದೆ ಎಂದರು. ಬ್ರಹ್ಮಕುಮಾರಿ ಸಾವಿತ್ರಿ ಅಕ್ಕ ಸ್ವಾಗತಿಸಿದರು. ಬ್ರಹ್ಮಕುಮಾರ ಗಣಪತಿ ಅಣ್ಣ ನಿರೂಪಿಸಿದರು. ಬಳಿಕ ಶ್ರೀ ಶಿವ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು. ದ್ವಾದಶ ಲಿಂಗಗಳ ಪ್ರತಿರೂಪಗಳ ಪ್ರದರ್ಶನ ಏರ್ಪಡಿಸಲಾಗಿತ್ತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top