ಕುಂದಾಪುರ: ಕಾರ್ಕಡ ಗೆಳೆಯರ ಬಳಗದ 37 ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ದತ್ತಿನಿಧಿ ವಿತರಣೆ ಸನ್ಮಾನ, ವಿಕಲಚೇತನ ಸಹಾಯ ನಿಧಿ ವಿತರಣೆ, ಮತ್ತು ಅಶಕ್ತರ ಸಹಾಯನಿಧಿ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ಕಾರ್ಕಡ ಹಿರಿಯ ಪ್ರಾಥಮಿಕ ಶಾಲಾ ಪಾರ್ವತಿ ಹೊಳ್ಳ ರಂಗ ಮಂಟಪದಲ್ಲಿ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ವಹಿಸಿದ್ದರು. ಅಧ್ಯಕ್ಷರು ಉಪಸ್ಥಿತರಿದ್ದ ಗಣ್ಯರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಯಕ್ಷಗಾನ ಕಲಾವಿದ ಕೃಷ್ಣಮೂರ್ತಿ ಉರಾಳರು ಹಾಗೂ ಪ್ರಗತಿಪರ ಕೃಷಿಕ ಜಯರಾಮ ಶೆಟ್ಟರು ಇವರುಗಳಿಗೆ ಪೇಟ ತೊಡಿಸಿ ಶಾಲು ಹೊದಿಸಿ, ಹಾರ ಹಾಕಿ, ಪತ್ರ ನೀಡಿ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ವಿದ್ಯಾನಿಧಿ ದತ್ತಿ ನಿಧಿಯನ್ನು ಬನ್ನಾಡಿ ನಾರಾಯಣ ಆಚಾರ್ (ನಿವೃತ್ತ ಚೀಫ್ ಜನರಲ್ ಮ್ಯಾನೇಜರ್, ONGC, ಮುಂಬೈ) ವಿತರಿಸಿ ಬಳಗದ 37 ವರ್ಷದ ಸಾಧನೆಯನ್ನು ಶ್ಲಾಘಿಸಿದರು. ಅಶಕ್ತರ ಸಹಾಯ ನಿಧಿಯನ್ನು ಪಿ. ಸದಾಶಿವ ಮಧ್ಯಸ್ಥರು ರೂ 5000/= ದಂತೆ 4 ಜನರಿಗೆ ವಿತರಿಸಿದರು. ವಿಕಲಚೇತನರ ಸಹಾಯ ನಿಧಿಯನ್ನು ಉಡುಪಿ ಜಿಲ್ಲಾ ಕ.ಸಾ.ಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ವಿತರಿಸಿದರು.
ಶಿಕ್ಷಣದಲ್ಲಿ ವಿಶೇಷ ಸಾಧನೆಗೈದ ಪ್ರತಿಭೆಗಳಾದ ಕು ಶರ್ಮದಾ, ಕರ್ನಾಟಕ ಸರಕಾರದ ಹೊಯ್ಸಳ ಶೌರ್ಯ ಪ್ರಶಸ್ತಿ ಪುರಸ್ಕೃತರು ಮಾ. ಧೀರಜ್ ಐತಾಳ ಹಾಗೂ ಕರಾಟೆಯಲ್ಲಿ ಸಾಧನೆ ಮಾಡಿದ ಕು। ಸಂಹಿತ ಆಚಾರ್ಯ ಇವರನ್ನು ಎಂ.ಜಿ.ಎಂ ಕಾಲೇಜ್ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತರು ಸನ್ಮಾನಿಸಿ, ಪ್ರತಿಭಾ ಪುರಸ್ಕಾರ ನೆರವೇರಿಸಿದರು.
ಮುಖ್ಯ ಅಭ್ಯಾಗತರಾದ ಕೆ.ಜಿ. ಸೂರ್ಯನಾರಾಯಣ (ನಿವೃತ್ತ DGM, BSNL, ಮಂಗಳೂರು), ವಿವೇಕ ಹಿಂದಿನ ವಿದ್ಯಾರ್ಥಿ ಸಂಘ(ರಿ.) ಕಾರ್ಯದರ್ಶಿ ಸುಧಾಕರ. ಪಿ. ಹಾಗೂ ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಇವರುಗಳು ಬಳಗದ ಕಾರ್ಯವೈಖರಿ ಶ್ಲಾಘಿಸಿದರು. ವೇದಿಕೆಯಲ್ಲಿರುವ ಗಣ್ಯರು ಗಣೇಶ ಕೆ. ನೆಲ್ಲಿಬೆಟ್ಟು (ಶ್ರೀ ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು), ಕೋ. ಸ.ವ್ಯ. ಸಂಘ( ರಿ.) ಕೋಟದ ನಿರ್ದೇಶಕ ಚಂದ್ರಪೂಜಾರಿ. ಪಿ. ಹಾಗೂ ಶ್ರೀಮತಿ ವಸಂತಿ ಅಚ್ಚುತ ಪೂಜಾರಿ ಇವರನ್ನು ಅಭಿನಂದಿಸಿ ಗೌರವಿಸಿದರು.
ಪ್ರಾರಂಭದಲ್ಲಿ ಬಳಗದ ಕಾರ್ಯದರ್ಶಿ ಕೆ.ಶೀನ ವರದಿ ವಾಚಿಸಿ ಧನ್ಯವಾದವಿತ್ತರು. ಸನ್ಮಾನ ಪತ್ರ ನಾಗಾರಾಜ ಉಪಾಧ್ಯ, ಕೆ. ಶ್ರೀಕಾಂತ್ ಐತಾಳ, ಹಾಗೂ ಪ್ರತಿಭಾ ಪುರಸ್ಕಾರ ಪತ್ರ ಶೇಖರ ವಾಚಿಸಿದರು. ಬಹುಮಾನ ಪಟ್ಟಿಯನ್ನು ಕೆ ಶ್ರೀಪತಿ ಆಚಾರ್ಯ ಓದಿದರು. ಬಳಗದ ಕೆ. ತಮ್ಮಯ್ಯ, ಕೆ. ರಾಘವೇಂದ್ರ, ಕೆ. ಉದಯ ಐತಾಳ, ಕೆ. ರಘು ಭಂಡಾರಿ ಉಪಸ್ಥಿತರಿದ್ದು ಸಹಕರಿಸಿದರು.
ಬಳಗದ ಉಪಾಧ್ಯಕ್ಷ ಕೆ. ಶಶಿಧರ ಮಯ್ಯ ಸಭಾ ಕಾರ್ಯಕ್ರಮ ಹಾಗೂ ಕೆ. ಚಂದ್ರಕಾಂತ ನಾಯರಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಬಳಗದ ಸ್ಥಾಪಕ ಅಧ್ಯಕ್ಷ , ಕರ್ನಾಟಕ ಸರಕಾರದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಕೆ. ತಾರಾನಾಥ ಹೊಳ್ಳ ದಂಪತಿಯವರನ್ನು ಬಳಗ ಹಾಗೂ ಗ್ರಾಮಸ್ಥರು ಕೆ. ಚಂದ್ರಶೇಖರ ಸೋಮಯಾಜಿ ಸಾರಥ್ಯದಲ್ಲಿ “ಗ್ರಾಮದ ವ್ಯಕ್ತಿ ಎಂದು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಂತರ ಸ್ಥಳೀಯ ಪ್ರತಿಭೆಗಳಿಂದ ಗಾನ ಮತ್ತುನೃತ್ಯ ವೈವಿದ್ಯ ಹಾಗೂ ಕಲಾ ಸ್ಪೂರ್ತಿ ಹವ್ಯಾಸಿ ತಂಡದವರ “ಮದಿ ಮನಿ” ನಾಟಕ ಜನಮನ ರಂಜಿಸಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ