ಕ್ರೀಡಾಕೂಟಗಳು ಸಮಾಜಬಾಂಧವರ ಸಂಪರ್ಕ ಸೇತುವೆಯಾಗಲಿ: ಗೋಪಾಲಕೃಷ್ಣ ತಂತ್ರಿ

Upayuktha
0


ಮಂಗಳೂರು: ಜೀವನದ ಅನುಕೂಲಕ್ಕಾಗಿ, ವಿದ್ಯಾಭ್ಯಾಸ, ಕೆಲಸದಲ್ಲಿ ತೊಡಗುವ ಸುಬ್ರಹ್ಮಣ್ಯ ಸದನದಲ್ಲಿ ನೆಲೆಸಿರುವ ಎಲ್ಲಾ ಸದಸ್ಯರಿಗೂ ಕ್ರೀಡಾಕೂಟಗಳು ಹಾಗೂ ಇಲ್ಲಿ ಜರಗುವ ಕಾರ್ಯಕ್ರಮಗಳು ಸಂಪರ್ಕ ಸೇತುವಾಗಿ ಬೆಳೆಸಲಿದೆ ಎಂದು ಮುನ್ನೂರು ಶ್ರೀ ಗೋಪಾಲಕೃಷ್ಣ ತಂತ್ರಿ ಅಭಿಪ್ರಾಯಪಟ್ಟರು.


ಅವರು ನಗರದ ಪದುವಾ ಕ್ರೀಡಾಂಗಣದಲ್ಲಿ ಜರಗಿದ ಎರಡನೇ ವರ್ಷದ ಸುಬ್ರಹ್ಮಣ್ಯ ಸದನ ಪ್ರೀಮಿಯರ್ ಲೀಗ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.


ಎರಡನೇ ವರ್ಷಕ್ಕೆ ನಡೆಯುವ ಪಂದ್ಯಾಟ ಮುಂದೆ ಅತಿಶಯವಾಗಿ ಸಮಾಜ ಬಾಂಧವರನ್ನು ಒಗ್ಗಟ್ಟು ಮಾಡುವಂತಹ ಕಾರ್ಯಗಳಾಗಲಿ. ಸದನದಲ್ಲಿ ನೆಲೆಸುವ ಹಾಗೂ ಬಿಟ್ಟು ಹೋಗುವವರು ಸೇರಿಕೊಂಡು  ಆರ್ಥಿಕ ಕ್ರೋಢೀಕರಣ ನಡೆಸಿ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನಡೆಸಿ ಊರ ಪರವೂರವನ್ನು ಸೇರಿಸುವ ಶಕ್ತಿಯನ್ನು ಸಂಯೋಜಕರಿಗೆ ನೀಡಲಿ ಎಂದು ಹಾರೈಸಿದರು.


ಸುಪ್ರೀಮ್ ಮೋಟರ‍್ಸ್ ಸೀನಿಯರ್ ಮೆನೇಜರ್ ಪ್ರಭಾಕರ್ ರಾವ್, ವಕೀಲರಾದ ಪ್ರವೀಣ್ ಅದ್ಯಪಾಡಿ, ನಂದಳಿಕೆ ಪೋಸ್ಟ್ ಮಾಸ್ಟರ್, ಮನೋಜ್ ರಾವ್ ನಂದಳಿಕೆ, ಕರ್ಣಾಟಕ ಬ್ಯಾಂಕ್ ಪ್ರಬಂಧಕ ಉಲ್ಲಾಸ್ ಬಿ.ಎಸ್ ಕೆಡೆಂಜಿ, ಸುಬ್ರಹ್ಮಣ್ಯ ಸಭಾ ಹಾಸ್ಟೆಲ್ ಮಣೈ ಪ್ರಬಂಧಕ ಶಿವಾಜಿ ರಾವ್ ಮುಖ್ಯ ಅತಿಥಿಗಳಾಗಿದ್ದರು. ಪಂದ್ಯಕೂಟದಲ್ಲಿ ಒಟ್ಟು 7 ತಂಡಗಳು ಭಾಗವಹಿಸಿತ್ತು. ಅವಿನಾಶ್ ಮರ್ಧಂಬೈಲ್, ನಾಗರಾಜ್ ವಿಟ್ಲ ನಿರೂಪಿಸಿದರು. ಸತ್ಯ ಕುಮಾರ್ ಸರಳಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top