ರನ್ನ ವೈಭವ ರಥಕ್ಕೆ ಹುನಗುಂದದಲ್ಲಿ ಸ್ವಾಗತ

Upayuktha
0


ಹುನಗುಂದ: ಬಾಗಲಕೋಟೆ ಜಿಲ್ಲಾ ಆಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಮುಧೋಳದ ರನ್ನ ಪ್ರತಿಷ್ಠಾನ ಫೆ. 22, 23 ಮತ್ತು 24ರಂದು ಫೆಬ್ರುವರಿ 2025 ರಂದು ಆಯೋಜಿಸಿರುವ ಕವಿ ಚಕ್ರವರ್ತಿ ರನ್ನ ಕ್ರೀಡಾಂಗಣ ಮುಧೋಳದಲ್ಲಿ ಜರುಗಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಾಜ್ಯದ ರಾಜ್ಯಧಾನಿ ಬೆಂಗಳೂರಿನಿಂದ ಅಲ್ಲಿಯ ವಿಧಾನಸೌಧದ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ವಿವಿಧ ಜಿಲ್ಲೆಯನ್ನು ಸಂಚರಿಸಿ ಗುರುವಾರ (ಫೆ.20) ಹುನಗುಂದ ಪಟ್ಟಣಕ್ಕೆ ಆಗಮಿಸಿತು.


ಈ ಸಂದರ್ಭದಲ್ಲಿ ಹುನುಗುಂದ, ನಿಂಗಪ್ಪ ಬಿರಾದಾರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್ ಕಟ್ಟಿಮನಿ ಪುರಸಭೆ ಅಧ್ಯಕ್ಷ ಶ್ರೀಮತಿ ಭಾಗ್ಯಶ್ರೀ ಬಸವರಾಜ ರೇವಡಿ ಉಪಾಧ್ಯಕ್ಷೆ ರಾಜಮ್ಮ ಹನುಮಪ್ಪ ಬದಾಮಿ ಕಸಪಕಾರದೇಶಿ ಶಿಕ್ಷಕ ಲಿಂಗರಾಜ ಗದ್ದನಕೇರಿ ಕಂದಾಯ ಇಲಾಖೆಯ ಶಿರಸದಾರ್ ಶ್ರವಣ್ ಕುಮಾರ ಮುಂಡೆವಾಡಿ ಕಂದಾಯ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಸೋಮಲಿಂಗಪ್ಪ ಸಂಗಪ್ಪ ಅಂತರರದಾನಿ, ಸೇರಿದಂತೆ ಪುರಸಭೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು  ಮಿನಿ ವಿಧಾನಸೌಧದ  ಬಳಿ ಆಗಮಿಸಿದ ಸಂದರ್ಭದಲ್ಲಿ ಸ್ವಾಗಸಿದರು.


ರಥಯಾತ್ರೆ ಜೊತೆಯಲ್ಲಿ ಬಂದ ಕಲಾವಿದ ಡಿಕೆ ರವಿ ಮಾತನಾಡಿ ಬೆಂಗಳೂರಿನಿಂದ ಪ್ರಾರಂಭಗೊಂಡ ಈ ರಥವು ವಿವಿಧ ವಿವಿಧ ಜಿಲ್ಲೆಗಳಲ್ಲಿ ಅಲ್ಲಿಯ ಕಂದಾಯ ಇಲಾಖೆ ಹಾಗೂ ಪುರಸಭೆ ನಗರಸಭೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸುವೆ ಎಂದರಲ್ಲದೆ ಇಂದು ಹುನಗುಂದ ಪಟ್ಟಣಕ್ಕೆ ತಲುಪಿದೆ ಎಂದರು.


ಪುರಸಭೆ ಅಧ್ಯಕ್ಷರು ಮತ್ತು ಇತರ ಗಣ್ಯರು ಹಾಗೂ ಸಿಬ್ಬಂದಿಗಳು, ಹುನುಗುಂದ ಪಟ್ಟಣಕ್ಕೆ ರಥ ಆಗಮಿಸಿದ ಸಂದರ್ಭದಲ್ಲಿ ಸ್ವಾಗತ ಕೋರುವ ಕಾರ್ಯಕ್ರಮದಲ್ಲಿ ಹುನಗುಂದದ ತಹಶೀಲ್ದಾರ ನಿಂಗಪ್ಪ ಬಿರಾದಾರ ಪುರಸಭೆ ಅಧ್ಯಕ್ಷ ಭಾಗ್ಯಶ್ರೀ ಬಸವರಾಜ ಬಿರಾದಾರ, ಇತರ ಗಣ್ಯರು ಹಾಗೂ ಸಿಬ್ಬಂದಿಗಳು ಗದೆಯನ್ನು ಎತ್ತುವುದರ ಮೂಲಕ ಸಾರ್ವಜನಿಕರ ಗಮನಸೆಳೆದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top