ಮುಂದಿನ ಪೀಳಿಗೆಗೆ ಇತಿಹಾಸ ಕಟ್ಟಿಕೊಡುವ ಕಾರ್ಯ ಶ್ಲಾಘನೀಯ: ನಿಡಸೋಸಿ ಜಗದ್ಗುರು
ರಾಯಬಾಗ್: ಹಳ್ಳಿಗಳ ಚರಿತ್ರೆಯೆ ಮುಂದೆ ರಾಜ್ಯದ ಚರಿತ್ರೆಯಾಗುತ್ತದೆ. ಸಣ್ಣಪುಟ್ಟ ಗ್ರಾಮಗಳ ಹಾಗೂ ದೈವ-ದೇವರು, ಜನ ಸಮುದಾಯದ ಇತಿಹಾಸ ದಾಖಲೆಗೊಳ್ಳಬೇಕಾಗಿರುವ ಅವಶ್ಯಕವಾಗಿದೆ. ಮುಂದಿನ ಪೀಳಿಗೆಗೆ ಇತಿಹಾಸ ಕಟ್ಟಿಕೊಡುವ, ಮಾಗದರ್ಶಿಯಾಗವ ಇಂತಹ ಮೌಲಿಕ ಕೃತಿಗಳ ರಚನೆಯಾಗಬೇಕಿದೆ. ಇಂಥ ಕಾರ್ಯ ಮಾಡಿದ ನರೋಡೆ ಹಾಗೂ ರೋಹಿಣಿಯವರು ಈ ಕೃತಿ ರಚಿಸಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ನಿಡಸೋಸಿಯ ಜಗದ್ಗುರು ಪೂಜ್ಯ ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.
ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಶ್ರೀ ಸಿದ್ಧೇಶ್ವರ ಮಹಾಶಿವಯೋಗಿಗಳ 49ನೇ ಜಾತ್ರಾಮಹೋತ್ಸವ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಡಾ. ಅಶೋಕ ನರೋಡೆ ಹಾಗೂ ರೋಹಿಣಿ ಯಾದವಾಡ ಅವರು ರಚಿಸಿದ "ಹಂದಿಗುಂದ ಶ್ರೀ ಸಿದ್ಧೇಶ್ವರ ಮಠದ ಪರಂಪರೆ" ಕೃತಿಯನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.
ಹಂದಿಗುಂದ ಶ್ರೀಮಠದ ಪೂಜ್ಯರು ವಿಭಿನ್ನವಾಗಿ ಜಾತ್ರೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದು ಈ ಪರಿಸರದಲ್ಲಿ ಧಾರ್ಮಿಕ ಜಾಗೃತಿಯೊಂದಿಗೆ ಸಾಹಿತ್ಯಿಕ ಅರಿವನ್ನು ಮೂಡಿಸಿದ್ದಾರೆ ಎಂದರು.
ಕೃತಿಯ ಕುರಿತು ಲೇಖಕ ಡಾ. ಅಶೋಕ ನರೋಡೆಯವರು ಪರಿಚಯಿಸುತ್ತ ಸಾಹಿತ್ಯ ಸಮ್ಮೇಳನಗಳು ಜಾತ್ರೆಗಳಾಗುತ್ತಿವೆ ಎಂಬ ಕೂಗಿರುವಾಗ, ಹಂದಿಗುಂದದಲ್ಲಿ ಜಾತ್ರೆಯು ಸಮ್ಮೇಳನ ರೂಪತಾಳಿ ಆಚರಿಸುತ್ತಿರುವುದು ವಿಶೇಷ ಎಂದರು.
ನೇತೃತ್ವ ವಹಿಸಿದ್ದ ಹಂದಿಗುಂದ ವಿರಕ್ತ ಮಠದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ ಮುಚ್ಚಿಹೋಗುತ್ತಿರುವ ಇತಿಹಾಸವನ್ನು ಮುಂದಿನ ನಾಗಕರಿಗೆ ಕಟ್ಟಿಕೊಡುವ ಕಾರ್ಯ ಈರ್ವರೂ ಲೇಖಕರು ಮಾಡಿದ್ದಾರೆ. ಗ್ರಾಮದ ಶ್ರೀಮಠದ ಇತಿಹಾಸ ಎಲ್ಲರೂ ತಿಳಿಯಬೇಕು. ಪ್ರತಿಯೊಂದು ಮನೆಯಲ್ಲೂ ಈ ಕೃತಿ ಇರಬೇಕು ಎಂದರು.
ಬೆಲ್ಲದ ಬಾಗೇವಾಡಿಯ ಶ್ರೀ ಶಿವಾನಂದ ಮಹಾಸ್ವಾಮಿಗಳು, ಶೇಗುಣಸಿಯ ಶ್ರೀ ಮಹಾಂತಪ್ರಭು ಸ್ವಾಮೀಜಿ, ಕೃತಿಯ ಲೇಖಕಿ ರೋಹಿಣಿ ಯಾದವಾಡ, ಜಮಖಂಡಿಯ ಧರ್ಮಲಿಂಗಯ್ಯ ಜಗದೀಶ ಗುಡಗುಂಟಿ, ತೇರದಾಳದ ನಾಗಪ್ಪಣ್ಣ ಸನದಿ ಉಪಸ್ಥಿತರಿದ್ದರು.
ದೋಟಿಹಾಳದ ಶ್ರೀ ಚಂದ್ರಶೇಖರ ದೇವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ರೇಖಾ ಬಿರಾದರ ಅವರ ವಚನ ಪ್ರಾರ್ಥನೆ ನೆರವೇರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ