ಸಂತ ಅಲೋಶಿಯಸ್‌ನಲ್ಲಿ ಸಂಗೀತದ ಸ್ವರಾಂಜಲಿ

Upayuktha
0


ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ 'ಸ್ವರಾಂಜಲಿ- ಎ ಕೋರಲ್ ಮತ್ತು ಆರ್ಕೇಸ್ಟಲ್ ಸಂಗೀತ ಕಚೇರಿ ಮತ್ತು ಸಮಕಾಲೀನ ಸಂಗೀತ' ಎಂಬ ಕಾರ್ಯಕ್ರಮವನ್ನು ಕಾಲೇಜಿನ ಎಲ್.ಸಿ.ಆರ್.ಐ ಸಭಾಂಗಣದಲ್ಲಿ ಆಯೋಜಿಸಲಾಯಿತು.


ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ವರಿಷ್ಠಾಧಿಕಾರಿ, ವಂ. ಫಾ. ಮೆಲ್ವಿನ್ ಜೋಸೆಫ್ ಪಿಂಟೋ ಎಸ್.ಜೆ ಮಾತನಾಡಿ, ಸಂಗೀತ ರಸಮಂಜರಿಗೆ ಪ್ರೇರೇಪಣೆ ನೀಡಿ ಸಮುದಾಯ ಮತ್ತು ಒಗ್ಗಟ್ಟಿನ ಪ್ರಜ್ಞೆಯನ್ನು ಬೆಳೆಸುವ ಶಕ್ತಿ ಇದೆ. ಇದು ಆಧ್ಯಾತ್ಮಿಕ, ಸಮಕಾಲೀನ ಸಂಗಿತದ ಮಿಶ್ರಣವನ್ನು ಹೊಂದಿದೆ ಎಂದರು.


ವಿಶ್ವವಿದ್ಯಾಲಯದ ಕುಲಪತಿ ವಂ. ಡಾ. ಪ್ರವೀಣ್ ಮಾರ್ಟೀಸ್ ಎಸ್. ಜೆ ಮಾತನಾಡಿ ಈ ಕಾರ್ಯಕ್ರಮ ತುಂಬಾ ಬೇಡಿಕೆಯುಳ್ಳ  ಕಾರ್ಯಕ್ರಮವಾಗಿದ್ದು ಪ್ರತಿವರ್ಷವೂ ಕೂಡ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಗೀತ ಪ್ರಿಯರಿಗೆ ರಸದೌತಣ ನೀಡಬೇಕೆಂದು ಹೇಳಿದರು.


ಆಶಾ ಕಿರಣ, ಸಂತ ಜೋಸೆಫ್ ಸೆಮಿನರಿ, ಫಾತಿಮಾ ರಿಟ್ರೀಟ್ ಹೌಸ್, ಕಾಂತಿ ಯಂಗ್ ವಾಯ್ಸಸ್, ನೆಪಮ್, ಸಂತ ಅಲೋಶಿಯಸ್, ಬಲ್ಮಠ ಮ್ಯೂಸಿಕಲ್ ಅಸೋಸಿಯೇಷನ್ ಹೀಗೆ ಒಟ್ಟು 7 ತಂಡಗಳ ಜೊತೆ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ರೇಚಲ್ ಪ್ರಿಯಾಂಕ ಫುರ್ಟಾಡೋ ಸಂಗೀತ ಪ್ರದರ್ಶನ ನೀಡಿದರು.


2026ರಲ್ಲಿ ಆಸ್ಕರ್ ವೆಲ್ತಾ ನಿರ್ದೇಶನದಲ್ಲಿ ಬಿಎಂಎಯು ತನ್ನ ಶತಮಾನೋತ್ಸವದಲ್ಲಿ ಇಂತಹದ್ದೇ ಕಾರ್ಯಕ್ರಮವನ್ನು ಆಯೋಜಿಸಲಿದೆ.

ಸ್ವರಾಂಜಲಿ ಕಾರ್ಯಕ್ರಮದ ಸಂಯೋಜಕ ಚಾರ್ಲ್ಸ್ ಫುರ್ಟಾಡೋ  ವಂದಿಸಿ, ಡಾ. ಮೋನ ಮೆಂಡೋನ್ಸಾ  ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top