ಮಂಗಳೂರು: ಯಕ್ಷಗಾನವು ಇಂದು ಸಂಕ್ರಮಣ ಪಥದಲ್ಲಿದೆ. ಅಬಾಲವೃದ್ಧರಾದಿಯಾಗಿ ಈ ಕಲೆಯ ಬಗ್ಗೆ ಆಸಕ್ತಿ ಹೊಂದಿ ಒಂದೊಂದು ರೀತಿಯಲ್ಲಿ ಕಲಾಮಾತೆಯ ಸೇವೆ ಮಾಡುತ್ತಿದ್ದಾರೆ. ಸಾಧನೆಯಿಂದ ಸ್ತ್ರೀ-ಪುರುಷ ಬೇಧವಿಲ್ಲದೆ ಇಲ್ಲಿ ಎಲ್ಲರೂ ಕಲಾವಿದರಾಗುತ್ತಿದ್ದಾರೆ. ಯಕ್ಷಕಲಾ ಮಾತೆಯ ಮಡಿಲಲ್ಲಿ ಕುಣಿದು ನರ್ತಿಸಿ ಹರ್ಷಿಸುತ್ತಿದ್ದಾರೆ. ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ವತಿಯಿಂದ ವಿಜಯಲಕ್ಮೀ ಮತ್ತು ತಂಡದಿಂದ ಜರಗುವ ಯಕ್ಷಗಾನವೂ ಇದಕ್ಕೆ ಸಾಕ್ಷಿ. ಈ ಪರಂಪರೆ ಬೆಳೆಯಲಿ" ಎ೦ದು ಗಾಯತ್ರಿ ಎ. ರಾವ್ ನುಡಿದರು.
ಅವರು ಶ್ರೀ ರಾಮ ಭಜನಾ ಮಂದಿರ (ರಿ) ಕೊಂಚಾಡಿಯಲ್ಲಿ ಜರಗಿದ "ಸೂರ್ಯ ರತ್ನ" ಎಂಬ ಯಕ್ಷಗಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
ಶ್ರೀರಾಮ ಭಜನಾ ಮಂದಿರದ ವಿಜಯಕುಮಾರ್ ರವರು "ಇಂತಹ ಸತ್ಕಾರ್ಯಗಳಿಗೆ ನಮ್ಮ ಮಂದಿರ ಮುಕ್ತವಾಗಿದೆ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಸರಿದಾರಿಗೆ ಒಯ್ದು, ಸಮಾಜದ ಅಂಕು-ಡೊಂಕುಗಳನ್ನು ಸರಿಪಡಿಸುತ್ತದೆ. ಒಟ್ಟಾಗಿ ಸಾಗುವ ಕಲೆಯನ್ನು ಕಲಿಸುತ್ತದೆ. ಕಾರ್ಯಕ್ರಮ ಯಶಸ್ಸಾಗಲಿ" ಎಂದು ಶುಭ ಹಾರೈಸಿದರು.
ಎಂ.ಸಿ.ಎಫ್ ನಿವೃತ್ತ ಉದ್ಯೋಗಿ ವಿಜಯಕುಮಾರ್, ಎನ್, ಇಂಜಿನಿಯರ್ ಗಿರೀಶ್, ವರ್ಕಾಡಿ ಮಧುಸೂದನ ಅಲೆವೂರಾಯ, ಉದ್ಯಮಿ ಶಿವಪ್ರಸಾದ ಪ್ರಭು ಉಪಸ್ಥಿತರಿದ್ದರು. ಅಶೋಕ್ ಬಿ. ಯಕ್ಷಗಾನ ಶೈಲಿಯಲ್ಲಿ ಪ್ರಾರ್ಥನೆಗೈದರು. ಶ್ರೀಮತಿ ರಮ್ಯಾ ರಾಜ್ ಸ್ವಾಗತಿಸಿದರು. ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ ನಿರ್ವಹಿಸಿದರು. ಶ್ರೀಮತಿ ಕೃಪಾ ಖಾರ್ವಿ ಧನ್ಯವಾದವಿತ್ತರು. ಬಳಿಕ ವಿಜಯಲಕ್ಮೀ ಎಲ್.ಎನ್. ತಂಡದಿಂದ ಸೂರ್ಯರತ್ನ ಎಂಬ ಆಖ್ಯಾನದ ಪ್ರದರ್ಶನ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ