ಮಂಗಳೂರು: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮಂಗಳೂರು ಇದರ ವತಿಯಿಂದ ಮಹಾ ಶಿವರಾತ್ರಿ ಅಂಗವಾಗಿ ಫೆ.24ರಿಂದ 28ರವರೆಗೆ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ನಗರದ ಕದ್ರಿ ಮೈದಾನದಲ್ಲಿ ಉಚಿತ ಸಹಸ್ರ ಲಿಂಗ ದರ್ಶನ ಏರ್ಪಡಿಸಲಾಗಿದೆ. ಪ್ರತೀ ದಿನ ಬೆಳಗ್ಗೆ 7ರಿಂದ 8ರವರೆಗೆ ಹಾಗೂ ಸಾಯಂಕಾಲ 6 ರಿಂದ 7ರವರೆಗೆ ಶಿವಧ್ಯಾನ ಶಿಬಿರ ಹಾಗೂ ಆಧ್ಯಾತ್ಮಿಕ ಚಿತ್ರ ಪ್ರದರ್ಶನ ನಡೆಯಲಿದೆ.
ಫೆ.24ರಂದು ಸಾಯಂಕಾಲ 5ಕ್ಕೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಅರ್ಚಕ ಶ್ರೀ ಕೃಷ್ಣ ಅಡಿಗ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಾನಪದ ವಿದ್ವಾಂಸ ಕೆ.ಕೆ.ಪೇಜಾವರ, ಉದ್ಯಮಿ ರಾಜ್‌ಕುಮಾರ್ ಶೆಟ್ಟಿ ತಿರುವೈಲುಗುತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬ್ರಹ್ಮಕುಮಾರಿ ವಿಶ್ವೇಶ್ವರಿ ಶಿವ ಸಂದೇಶ ನೀಡಲಿದ್ದಾರೆ.
ಫೆ.23ರಿಂದ ಸುರತ್ಕಲ್‌ನಲ್ಲಿ ಶ್ರೀ ಅಮರನಾಥ ಶಿವಲಿಂಗ ದರ್ಶನ
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಸುರತ್ಕಲ್ ಇದರ ವತಿಯಿಂದ ಮಹಾ ಶಿವರಾತ್ರಿ ಅಂಗವಾಗಿ ಫೆ.23ರಿಂದ 28ರವರೆಗೆ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ಸುರತ್ಕಲ್‌ನ ಕಾಂತೇರಿ ಧೂಮಾವತಿ ದೈವಸ್ಥಾನದ ಬಳಿಯ ಕರ್ನಾಟಕ ಸೇವಾವೃಂದದ ಸಭಾಂಗಣದಲ್ಲಿ ಉಚಿತ ‘ಅಮರನಾಥ ಶಿವಲಿಂಗ ದರ್ಶನ' ಏರ್ಪಡಿಸಲಾಗಿದೆ. ಪ್ರತೀ ದಿನ ಬೆಳಗ್ಗೆ 7ರಿಂದ 8ರವರೆಗೆ ಹಾಗೂ ಸಾಯಂಕಾಲ 6 ರಿಂದ 7ರವರೆಗೆ ಶಿವಧ್ಯಾನ ಶಿಬಿರ ನಡೆಯಲಿದೆ. ಫೆ.23ರಂದು ಎಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ