ಮಧ್ಯಮ ವರ್ಗದವರಿಗೆ ಸಂತೃಪ್ತಿತಂದ ಬಜೆಟ್; ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

Upayuktha
0

 



ಬಾರಿಯ ಕೇಂದ್ರ ಸರ್ಕಾರ ಮಂಡಿಸಿದ ಆಯ ವ್ಯಯ ಲೆಕ್ಕಾಚಾರ ಬಹುಮುಖ್ಯವಾಗಿ ಮಧ್ಯಮ ವರ್ಗದವರನ್ನು ಖುಶಿಪಡಿಸಿದೆ ಅನ್ನುವುದು ಬಜೆಟ್ ನ ಮೇಲ್ನೋಟಕ್ಕೆ ವ್ಯಕ್ತವಾಗುತ್ತದೆ. ಬಹುಮುಖ್ಯವಾಗಿ ವೇತನ ಪಡೆಯುವವರಿಗೆ ಆದಾಯ ತೆರಿಗೆ ಮಿತಿಯನ್ನು 12 ಲಕ್ಷಕ್ಕೆ ಏರಿಸಿರುವುದು ಸಂತಸ ತಂದಿದೆ. 


ಆದರೆ ಇಡಿ ಬಜೆಟ್ ನಲ್ಲಿ ಬಿಹಾರಕ್ಕೆ ಹೆಚ್ಚಿನ ಒತ್ತು ಕೊಟ್ಟಿರುವುದು ಎದ್ದು ಕಾಣುತ್ತದೆ. ಇದು ಪ್ರಾದೇಶಿಕ ಅಸಮತೇೂಲನ ಭಾವ ಸೃಷ್ಟಿ ಮಾಡುತ್ತದೆ. ಐ.ಐ.ಟಿ; ಗ್ರೀನ್ ಫೀಲ್ಡ್ ಏರ್ ಫೇೂರ್ಟ್ ವಿಸ್ತರಣೆ, 50 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಸೌಕರ್ಯ- ಇವೆಲ್ಲವೂ ಕೇಂದ್ರ ಸರ್ಕಾರದಲ್ಲಿ ನಿತೀಶ್ ಕುಮಾರ್ ರವರ ಪ್ರಭಾವ ಎಷ್ಟಿದೆ ಅನ್ನುವುದಕ್ಕೆ ನಿದರ್ಶನವೆಂದೇ ಕರೆಯಬೇಕು. ಹಾಗಾಗಿ ಪ್ರಾದೇಶಿಕ ಅಸಮತೇೂಲನ ಬಜೆಟ್ ಹಂಚಿಕೆ ಎದ್ದು ಕಾಣುತ್ತಿದೆ.


ಅಗತ್ಯ ಔಷಧಿ ಉಪಕರಣಗಳ ತೆರಿಗೆ ವಿನಾಯಿತಿ ಶ್ಲಾಘನೀಯ. ಅಂಗನವಾಡಿ ಪರಿಸರ ಪರಿಕರಗಳ ಬಗ್ಗೆ ಒತ್ತು ಕೊಡಲಾಗಿದೆ ಹೊರತು ಅಂಗನವಾಡಿ ಕಾರ್ಯಕತ೯ರ ಬದುಕಿನ ಬಗ್ಗೆ ಎಲ್ಲೂ ಕೂಡಾ ಉಲ್ಲೇಖವೇ ಇಲ್ಲ.


ಮಕ್ಕಳ ಆಟಿಕೆಗಳ ಉತ್ಪಾದನೆಯಲ್ಲಿ ಮೇಕ್ ಇನ್ ಇಂಡಿಯಾಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಶ್ಲಾಘನೀಯ. ಆದರೆ ಗುಣಮಟ್ಟದ ಸುಧಾರಣೆಗೆ  ಯಾವುದೇ ಮಹತ್ವ ಕಾಣಲಿಲ್ಲ. ಹಿರಿಯ ನಾಗರಿಕರ ಟಿ.ಡಿ.ಎಸ್. ಮಿತಿಯನ್ನು ಒಂದು ಲಕ್ಷಕ್ಕೆ ಏರಿಸಿರುವುದು ಹಿರಿಯ ಹೆಚ್ಚಿನ ನೆಮ್ಮದಿ ತಂದಿದೆ. ಒಟ್ಟಿನಲ್ಲಿ ಸಮಿಶ್ರ ಸರಕಾರದ ಬಜೆಟ್ ಸಮಿಶ್ರವಾದ ಸಂತೃಪ್ತಿ ತಂದಿದೆ.


-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.


                                       


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top