ಉಡುಪಿ: ರಾಗ ಧನ ಉಡುಪಿ (ರಿ) ಇವರು ನಡೆಸುವ 37ನೆಯ ಶ್ರೀ ಪುರಂದರದಾಸ ಹಾಗೂ ಸಂಗೀತ ತ್ರಿಮೂರ್ತಿಗಳ ಸಂಗೀತೋತ್ಸವವು ಫೆಬ್ರವರಿ 7, 8 ಹಾಗೂ 9ರಂದು ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಫೆಬ್ರವರಿ 7 ಶುಕ್ರವಾರ ಸಂಜೆ 5 ಗಂಟೆಗೆ ಖ್ಯಾತ ನಾಗಸ್ವರ ವಿದ್ವಾಂಸರ ಶ್ರೀ ನಾಗೇಶ್ ಬಪ್ಪನಾಡು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಎಂ.ಜಿ.ಎಂ. ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ, ಸಭೆಯ ಅಧ್ಯಕ್ಷತೆಯನ್ನು ಡಾ. ಶ್ರೀಕಿರಣ ಹೆಬ್ಬಾರ್ ವಹಿಸಲಿದ್ದಾರೆ. ಡಾ. ಯು.ಪಿ. ಉಪಾಧ್ಯಾಯ ಅವರು ಪ್ರಾಯೋಜಿಸಿದ ಡಾ.ಸುಶೀಲಾ ಉಪಾಧ್ಯಾಯರ ನೆನಪಿನಲ್ಲಿ ಕೊಡಮಾಡುವ 'ರಾಗ ಧನ ಪಲ್ಲವಿ ಪ್ರಶಸ್ತಿ' ಪ್ರದಾನ ಸಮಾರಂಭ ನಡೆಯಲಿದೆ.
ಹಿರಿಯ ಗುರು ಹಾಗೂ ಕೊಳಲು ವಿದ್ವಾನ್ ಪ್ರೊ.ರಾಘವೇಂದ್ರ ರಾವ್ ಅವರು 'ಶ್ರುತಿ ಎಸ್.ಭಟ್' ಅವರಿಗೆ ಈ ಬಾರಿಯ 'ಪಲ್ಲವಿ ಪ್ರಶಸ್ತಿ' ಪ್ರದಾನ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ .ವೀ.ಅರವಿಂದ ಹೆಬ್ಬಾರ್ ಬರೆದ 'ವಿಮರ್ಶೆಯ ಹರಿತ'- ಭಾಗ-೨ ಪುಸ್ತಕವನ್ನು ವಿದ್ವಾನ್ ನಾಗೇಶ್ ಎ.ಬಪ್ಪನಾಡು ಅನಾವರಣ ಗೊಳಿಸಲಿದ್ದಾರೆ. ಈ ಸಂದರ್ಭದಲ್ಲಿ ರಾಗ ಧನ ಸಂಸ್ಥೆಯವತಿಯಿಂದ ವಿದ್ವಾನ್ ನಾಗೇಶ್ ಎ.ಬಪ್ಪನಾಡು ಇವರಿಗೆ ಗೌರವಾರ್ಪಣೆ ನಡೆಯಲಿದೆ.
ನಂತರ ಶ್ರುತಿ ಎಸ್ ಭಟ್ ಅವರಿಂದ ಸಂಗೀತ ಕಛೇರಿ ನಡೆಯಲಿದೆ. ವಯೊಲಿನ್ ನಲ್ಲಿ ಶ್ರೀಲಕ್ಷ್ಮಿಭಟ್ ಚೆನ್ನೈ ಹಾಗೂ ಮೃದಂಗದಲ್ಲಿ ನಿಕ್ಷಿತ್ ಟಿ. ಪುತ್ತೂರು ಸಹಕರಿಸಲಿದ್ದಾರೆ.
8.2.2024 ಶನಿವಾರ ಅಪರಾಹ್ನ 2.00ರಿಂದ ವಿದ್ಯಾರ್ಥಿಗಳಿಂದ ಪಿಳ್ಳಾರಿ ಗೀತೆಗಳು ಹಾಗೂ ಎಲ್ಲಾ ಕಲಾವಿದರಿಂದ ಶ್ರೀ ತ್ಯಾಗರಾಜರ ಘನಪಂಚರತ್ನ ಕೃತಿಗಳ ಗೋಷ್ಠಿ ಗಾಯನ ನಡೆಯಲಿದೆ. ಸಂಜೆ 4.30ರಿಂದ ನಂತರ ಡಾ.ಎನ್.ಜೆ.ನಂದಿನಿ ಅವರ ಸಂಗೀತ ಕಛೇರಿಯು ನಡೆಯಲಿದೆ. ಇವರಿಗೆ ವಯಲಿನ್‌ನಲ್ಲಿ ಮತ್ತೂರು ಆರ್.ಶ್ರೀನಿಧಿ ಹಾಗೂ ಮೃದಂಗದಲ್ಲಿ ಅನಿರುದ್ಧ ಎಸ್ ಭಟ್ ಅವರು ಸಹಕರಿಸಲಿದ್ದಾರೆ.
ಫೆಬ್ರವರಿ 9, ಭಾನುವಾರ ಬೆಳಿಗ್ಗೆ 9.00 ರಿಂದ ಪಂಡಿತ್ ರವಿಕಿರಣ್ ಮಣಿಪಾಲ ಅವರ ಹಿಂದುಸ್ತಾನಿ ಗಾಯನ ನಡೆಯಲಿದೆ. ಶಶಿ ಕಿರಣ್ ಮಣಿಪಾಲ ತಬಲಾದಲ್ಲಿ, ಶ್ರೀ ಪ್ರಸಾದ್ ಕಾಮತ್ ಉಡುಪಿ ಹಾರ್ಮೋನಿಯಂನಲ್ಲಿ ಸಹಕರಿಸಲಿದ್ದಾರೆ. ಬೆಳಿಗ್ಗೆ 11.15 ರಿಂದ ಮಾಧುರಿ ಕೌಶಿಕ್ ಚೆನೈ ಅವರ ಕಛೇರಿ ನಡೆಯಲಿದೆ. ಇವರಿಗೆ ವಯೊಲಿನ್ ನಲ್ಲಿ ಶ್ರೀಲಕ್ಷ್ಮಿಭಟ್ ಚೆನ್ನೈ ಹಾಗೂ ಅನಿರುದ್ಧ ಎಸ್ ಭಟ್ ಮೃದಂಗದಲ್ಲಿ ಸಹಕರಿಸಲಿದ್ದಾರೆ.
ಮಧ್ಯಾಹ್ನ 2.00 ರಿಂದ ವಿನುಷ್ ಭಾರದ್ವಾಜ್ ಅವರ ಸಂಗೀತ ಕಛೇರಿ. ಅವರಿಗೆ ವಯೊಲಿನ್ ನಲ್ಲಿ ಮಹತೀ ಕೆ. ಕಾರ್ಕಳ ಹಾಗೂ ಬಾಲಚಂದ್ರ ಭಾಗವತ್ ಮೃದಂಗದಲ್ಲಿ ಸಹಕರಿಸಲಿದ್ದಾರೆ. ಸಂಜೆ 4.00ರಿಂದ ಸಮಾರೋಪ ಸಮಾರಂಭವು ಡಾ. ಶ್ರೀಕಿರಣ ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಪ್ರೊ. ಶ್ರೀಶ ಕುಮಾರ, ಪುತ್ತೂರು ಹಾಗೂ ಧರ್ಮದರ್ಶಿ ಹರಿಕೃಷ್ಣ ಪುನರೂರು ಭಾಗವಹಿಸಲಿದ್ದಾರೆ. ನಂತರ ಸಂಗೀತಕಲಾನಿಧಿ ಲಾಲ್ಗುಡಿ ಜಿಜೆಆರ್ ಕೃಷ್ಣ ಹಾಗೂ ಸಂಗೀತಕಲಾನಿಧಿ ಲಾಲ್ಗುಡಿ ವಿಜಯಲಕ್ಷ್ಮಿ ಅವರ ದ್ವಂದ್ವ ವಯೊಲಿನ್ ವಾದನ ಕಛೇರಿ ನಡೆಯಲಿದೆ. ಮೃದಂಗದಲ್ಲಿ ಗುರು ರಾಘವೇಂದ್ರ ಚೆನ್ನೈ ಸಹಕರಿಸಲಿದ್ದಾರೆ, ಎಂದು ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಉಮಾಶಂಕರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ