ಡ್ರಗ್ಸ್ ಸೇವನೆ ಮನುಷ್ಯನನ್ನು ವಿನಾಶದೆಡೆಗೆ ಒಯ್ಯುತ್ತದೆ : ಅಶ್ವಿನಿಕೃಷ್ಣ ಮುಳಿಯ

Upayuktha
0


 

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಡ್ರಗ್ಸ್ ಮುಕ್ತ ಪುತ್ತೂರು ಹಾಗೂ ಸೈಬರ್ ಕ್ರೈಂ ಜಾಗೃತಿ ಎಂಬ ವಿಚಾರದ ಬಗ್ಗೆ ಪುತ್ತೂರಿನ ಜೆಸಿಐ ಸಂಸ್ಥೆಯ ವತಿಯಿಂದ ಗುರುವಾರ ವಿಶೇಷ ಮಾಹಿತಿ ಕಾರ್ಯಕ್ರಮ ನಡೆಯಿತು.


ಜೆಸಿಐನ ವಲಯ ತರಬೇತುದಾರೆ ಅಶ್ವಿನಿಕೃಷ್ಣ ಮುಳಿಯ ಮಾತನಾಡಿ ಯುವ ಸಮುದಾಯ ಮಾದಕ ವಸ್ತುಗಳ ಸೇವನೆ ಮತ್ತು ಬಳಕೆಯಿಂದ ದೂರವಿರಲು ಆರೋಗ್ಯಕರ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಬೇಕು. ಈ ಬಗೆಗೆ ವಿದ್ಯಾರ್ಥಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು, ಡ್ರಗ್ಸ್  ಬಳಕೆಯಿಂದ ವಕ್ತಿಗಳು ಕತ್ತಲೆಯ ಕೂಪಕ್ಕೆ ಬಿದ್ದು ವಿನಾಶ ಹೊಂದುತ್ತಾರೆ ಎಂದು ತಿಳಿಸಿದರು.


ನಮ್ಮ ಪುತ್ತೂರನ್ನು ಮಾದಕ ವಸ್ತು ಬಳಕೆ ಹಾಗೂ ಸೇವನೆಯಿಂದ ಸಂಪೂರ್ಣವಾಗಿ ಮುಕ್ತಗೊಳಿಸಲು ನಮ್ಮ ಬದ್ಧತೆಯನ್ನು ಪುನರುಚ್ಚರಿಸಬೇಕು ಮತ್ತು ಡ್ರಗ್ಸ್ ಮುಕ್ತ ಪುತ್ತೂರನ್ನು ನಿರ್ಮಿಸೋಣ ಎಂದು ವಿದ್ಯಾರ್ಥಿಗಳಿಗೆ ಕರೆನೀಡಿದರಲ್ಲದೆ ಸಣ್ಣಪುಟ್ಟ ಅನಾರೋಗ್ಯಗಳನ್ನು ಮನೆಮದ್ದುಗಳಿಂದ ನಿವಾರಿಸಿಕೊಳ್ಳಲು ಪ್ರಯತ್ನ ಪಡಬೇಕು ಎಂದು ತಿಳಿಸಿದರು. ವೇದಿಕೆಯಲ್ಲಿ ಶಾಲೆಯ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ರಕ್ಷಾ ಸ್ವಾಗತಿಸಿ, ನಿಧಿ ಯು. ವಂದಿಸಿದರು.



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top